Moto G32: ಭಾರತೀಯ ಮಾರುಕಟ್ಟೆಗೆ ಮೊಟೊರೊಲಾದ ಹೊಸ ಸ್ಟೈಲಿಶ್ ಸ್ಮಾರ್ಟ್‌ಫೋನ್!

ಮೊಟೊರೊಲಾ ತನ್ನ ಅಗ್ಗದ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಸಾಧನದ ಫ್ಲಿಪ್‌ಕಾರ್ಟ್ ಮೈಕ್ರೋಸೈಟ್ ಈಗಾಗಲೇ ಸಿದ್ಧವಾಗಿದೆ. ಇದರ ಪ್ರಮುಖ ವಿಶೇಷಣಗಳು ಮತ್ತು ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Aug 3, 2022, 10:17 AM IST
  • ಮೊಟೊರೊಲಾ ತನ್ನ ಹೊಸ Moto G32 ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗಿದೆ
  • ಬಜೆಟ್ ಬೆಲೆಯ Moto G32 ಸ್ಮಾರ್ಟ್‌ಫೋನ್ ಆಗಸ್ಟ್ 9ರಂದು ಭಾರತದಲ್ಲಿ ಬಿಡುಗಡೆ
  • ಫ್ಲಿಪ್‌ಕಾರ್ಟ್ ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಗೆ ಲಭ್ಯ
Moto G32: ಭಾರತೀಯ ಮಾರುಕಟ್ಟೆಗೆ ಮೊಟೊರೊಲಾದ ಹೊಸ ಸ್ಟೈಲಿಶ್ ಸ್ಮಾರ್ಟ್‌ಫೋನ್! title=
Moto G32 ಸ್ಮಾರ್ಟ್‌ಫೋನ್ ಬಿಡುಗಡೆ

ನವದೆಹಲಿ: ಮೊಟೊರೊಲಾ ಕಳೆದ ವಾರ ಯುರೋಪ್‌ನಲ್ಲಿ ತನ್ನ ಬಜೆಟ್ ಸ್ಮಾರ್ಟ್‌ಫೋನ್ Moto G32 ಬಿಡುಗಡೆ ಮಾಡಿತು. ಈಗ ಕಂಪನಿಯು ಇದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಮೊಟೊರೊಲಾ Moto G32 ಸ್ಮಾರ್ಟ್‌ಫೋನ್ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಈ ಸಾಧನವು ಆಗಸ್ಟ್ 9ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಜನಪ್ರಿಯ ಭಾರತೀಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಇದರ ಪ್ರಮುಖ ವಿಶೇಷಣಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.  

Moto G32 ವಿಶೇಷಣಗಳು

Moto G32 Full HD+ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್‍ನೊಂದಿಗೆ 6.5-ಇಂಚಿನ LCD ಪ್ಯಾನೆಲ್‌ನೊಂದಿಗೆ ಭಾರತದಲ್ಲಿ ಪಾದಾರ್ಪಣೆ ಮಾಡಲಿದೆ. ಸ್ಮಾರ್ಟ್‌ಫೋನ್ ಬದಿಗಳಲ್ಲಿ slim bezelsಗಳನ್ನು ಹೊಂದಿದ್ದು, ಸೆಲ್ಫಿ ಕ್ಯಾಮೆರಾಗಾಗಿ ಮಧ್ಯದಲ್ಲಿ ಪಂಚ್-ಹೋಲ್ ಇದೆ.

ಇದನ್ನೂ ಓದಿ: 5G Spectrum ಹರಾಜು ಪ್ರಕ್ರಿಯೆಯಲ್ಲಿ ಬಾಜಿ ಹೊಡೆದ ಜಿಯೋ, 1.5 ಲಕ್ಷ ಕೋಟಿ ರೂ.ರೇಸ್ ನಲ್ಲಿ ಹಿಂದೆ ಬಿದ್ದ ಅಡಾನಿ ನೆಟ್ವರ್ಕ್

Moto G32 ಬ್ಯಾಟರಿ

ಈ ಸಾಧನವು ಸ್ನಾಪ್‌ಡ್ರಾಗನ್ 680 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು 4GB RAM ಮತ್ತು 64GB ಸ್ಟೋರೇಜ್‍ನೊಂದಿಗೆ ಬರುತ್ತದೆ. ಮೈಕ್ರೊ SD ಕಾರ್ಡ್ ಬಳಸಿ 1TBವರೆಗೆ ಸ್ಟೋರೇಜ್ ವಿಸ್ತರಿಸುವ ಅವಕಾಶವಿದೆ. ಈ ಸಾಧನವು 5,000mAh ಬ್ಯಾಟರಿ ಹೊಂದಿದ್ದು, ಅದು 30W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು Android 12-ಆಧಾರಿತ UI ನಲ್ಲಿ ಕಾರ್ಯನಿರ್ವಹಿಸುತ್ತದೆ.

Moto G32 ಕ್ಯಾಮೆರಾ

ಕ್ಯಾಮೆರಾ ಬಗ್ಗೆ ಹೇಳುವುದಾದರೆ ಈ ಸ್ಮಾರ್ಟ್‌ಫೋನ್ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 118-ಡಿಗ್ರಿ FOV ಜೊತೆಗೆ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಈ ಸಾಧನವು ಸೆಲ್ಫಿಗಾಗಿ 16-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಇದನ್ನೂ ಓದಿ: ಇಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಇನ್ಫಿನಿಕ್ಸ್ ನ ಅದ್ಭುತ ಸ್ಮಾರ್ಟ್‌ಫೋನ್

Moto G32 ವೈಶಿಷ್ಟ್ಯಗಳು

Moto G32 ಆಂಡ್ರಾಯ್ಡ್ 13 ಅಪ್‌ಗ್ರೇಡ್ ಮತ್ತು 3 ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುತ್ತದೆ ಎಂದು ಕಂಪನಿ ಭರವಸೆ ನೀಡಿದೆ. ಇದರ ಹೊರತಾಗಿ ಈ ಸಾಧನವು ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಸಾಧನದ ಇತರ ವೈಶಿಷ್ಟ್ಯಗಳ ಪೈಕಿ ಡ್ಯುಯಲ್ ಸಿಮ್, 4G LTE, Wi-Fi 802.11ac, ಬ್ಲೂಟೂತ್ 5.2, GPS, NFC, USB-C ಪೋರ್ಟ್, 3.5mm ಆಡಿಯೋ ಜ್ಯಾಕ್ ಮತ್ತು ನೀರು-ನಿವಾರಕ ವಿನ್ಯಾಸವನ್ನು ಒಳಗೊಂಡಿದೆ. ಈ ಸ್ಮಾರ್ಟ್‍ಫೋನ್‍ 161.8 x 73.8 x 8.5 ಮಿಮೀ ಅಳತೆ ಮತ್ತು 184 ಗ್ರಾಂ ತೂಕವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News