Second Hand Cars: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಎಸ್‌ಯುವಿ ಕಾರುಗಳ ಬೇಡಿಕೆ ಹೆಚ್ಚಿದೆ. ಆದರಲ್ಲೂ ಮಾರುತಿ ಕಂಪನಿಯ ಮಾರುತಿ ಬ್ರೆಜ್ಜಾ ಖರೀದಿಸಬೇಕು ಎಂಬುದು ಬಹುತೇಕ ಜನರ ಕನಸಾಗಿದೆ. ಆದರೆ, ಅದರ ಬೆಲೆಯೂ ಹೆಚ್ಚಿರುವುದರಿಂದ ಇದನ್ನು ಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿಯ ಹೊಸ ಬ್ರೆಜ್ಜಾಗೆ ಮಾತ್ರವಲ್ಲ ಹಳೆಯ ಬ್ರೆಜ್ಜಾಕ್ಕೂ ಕೂಡ ಹೆಚ್ಚು ಬೇಡಿಕೆ ಇದೆ. ನೀವೂ ಕೂಡ ಸೆಕೆಂಡ್ ಹ್ಯಾಂಡ್ ಮಾರುತಿ ಬ್ರೆಜ್ಜಾ ಕಾರನ್ನು ಖರೀದಿಸಲು ಬಯಸಿದರೆ 5 ಲಕ್ಷ ರೂ.ಗಳಲ್ಲಿ ಈ ಕಾರನ್ನು ನಿಮ್ಮದಾಗಿಸಬಹುದು.
ಹೌದು, ಕಾರ್ಸ್ 24 ನ ವೆಬ್‌ಸೈಟ್‌ನಲ್ಲಿ ಸೆಕೆಂಡ್ ಹ್ಯಾಂಡ್ ಬ್ರೆಜ್ಜಾ ಅಥವಾ ಹಳೆಯ ಬ್ರೆಜ್ಜಾ ಕಾರನ್ನು ಸುಮಾರು 5 ಲಕ್ಷ ರೂ.ಗಳಲ್ಲಿ ನಿಮ್ಮದಾಗಿಸಬಹುದು.
* 4.96 ಲಕ್ಷ ರೂ.ಗೆ ಮಾರುತಿ ವಿಟಾರಾ ಬ್ರೆಝಾ VDI (O):
ಕಾರ್ಸ್ 24 ನ ವೆಬ್‌ಸೈಟ್‌ನಲ್ಲಿ ಮ್ಯಾನುಯಲ್ 2017 ಮಾರುತಿ ವಿಟಾರಾ ಬ್ರೆಝಾ VDI (O) ಕಾರನ್ನು 4.96 ಲಕ್ಷ ರೂ.ಗೆ ಪಟ್ಟಿ ಮಾಡಲಾಗಿದೆ. ಈ ಡೀಸೆಲ್ ಎಂಜಿನ್ ಕಾರು ಫಸ್ಟ್ ಓನರ್ ಮಾಲೀಕತ್ವದಲ್ಲಿದ್ದು ಒಟ್ಟು 93,090ಕಿಮೀ ಕ್ರಮಿಸಿದೆ. ಹರಿಯಾಣದ ನೋಂದಣಿ ಹೊಂದಿರುವ ಈ ಕಾರ್ ದೆಹಲಿಯಲ್ಲಿ ಖರೀದಿಗೆ ಲಭ್ಯವಿದೆ.
ಇದನ್ನೂ ಓದಿ- WhatsApp 'Edit' ವೈಶಿಷ್ಟ್ಯ ಇಲ್ಲಿದೆ; ಈ ಹಂತ-ಹಂತವಾಗಿ ನಿಮ್ಮ ಮೆಸೇಜ್ ಗಳನ್ನು ಸರಿಪಡಿಸುವುದು ಹೇಗೆ ಎಂಬುದನ್ನು ಪರಿಶೀಲಿಸಿ
* ಮಾರುತಿ ವಿಟಾರಾ ಬ್ರೆಝಾ VDI ಅನ್ನು 4.88 ಲಕ್ಷಕ್ಕೆ ಖರೀದಿಸಬಹುದು:
ಕಾರ್ಸ್ 24 ನ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿರುವ ಮತ್ತೊಂದು ಕಾರ್ ಎಂದರೆ 2016 ಮಾರುತಿ ವಿಟಾರಾ ಬ್ರೆಝಾ VDI ಕಾರ್. ದೆಹಲಿ ನೋಂದಣಿಯ ಈ ಕಾರನ್ನು 4.88 ಲಕ್ಷ ರೂ.ಗಳಿಗೆ ಇಲ್ಲಿ ಪಟ್ಟಿಮಾಡಲಾಗಿದೆ. ಇದು ಡೀಸೆಲ್ ಎಂಜಿನ್ ಕಾರ್ ಆಗಿದ್ದು, ಮೊದಲ ಮಾಲೀಕರ ಒಡೆತನದಲ್ಲಿದೆ. ಈ ಕಾರು ಒಟ್ಟು 42,216 ಕಿಮೀ ಕ್ರಮಿಸಿದೆ ಮತ್ತು ದೆಹಲಿಯಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಮಾಹಿತಿ ಲಭ್ಯವಾಗಿದೆ.
* ಮಾರುತಿ ವಿಟಾರಾ ಬ್ರೆಝಾ 5.49 ಲಕ್ಷ ರೂ.ಗಳಿಗೆ ಲಭ್ಯ:
ಈ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಮತ್ತೊಂದು ಕಾರ್ 2018 ರ ಮಾರುತಿ ವಿಟಾರಾ ಬ್ರೆಝಾ LDI (O). ದೆಹಲಿ ನೋಂದಾಯಿತ ಈ ಕಾರಿನ ಬೆಲೆ 5.49 ಲಕ್ಷ ರೂ.ಗಳು. ಈ ಪೆಟ್ರೋಲ್ ಎಂಜಿನ್ ಕಾರ್ ಮೊದಲ ಮಾಲೀಕರ ಒಡೆತನದಲ್ಲಿದ್ದು ಇದುವರೆಗೂ 36,747 ಕಿಮೀ ಕ್ರಮಿಸಿದೆ ಎನ್ನಲಾಗಿದೆ.
ಇದನ್ನೂ ಓದಿ- Aadhaar ಕಾರ್ಡ್ ಗೆ ಸಂಬಂಧಿಸಿದ ಮಹತ್ವದ ಸುದ್ದಿ ಪ್ರಕಟ, UIDAI ಆರಂಭಿಸಿದೆ ಈ ನೂತನ ಸೇವೆ
* ಮಾರುತಿ ವಿಟಾರಾ ಬ್ರೆಝಾ ZDI AMT 6.85 ಲಕ್ಷ ರೂ.ಗಳಲ್ಲಿ ಲಭ್ಯ:
ಕಾರ್ಸ್ 24 ನ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿರುವ ಮತ್ತೊಂದು ಕಾರ್ 2018 ಮಾರುತಿ ವಿಟಾರಾ ಬ್ರೆಝಾ ZDI AMT. ದೆಹಲಿ ನೋಂದಾಯಿತ ಈ ಕಾರಿನ ಬೆಲೆ 6.85 ಲಕ್ಷ ರೂ.ಗಳು ಎನ್ನಲಾಗಿದೆ. ಇದು ಡೀಸೆಲ್ ಎಂಜಿನ್ ಕಾರ್ ಆಗಿದ್ದು, ಮೊದಲ ಮಾಲೀಕರ ಒಡೆತನದಲ್ಲಿರುವ ಈ ಕಾರ್ ಇದುವರೆಗೂ 69,862 ಕಿಮೀ ಕ್ರಮಿಸಿದೆಯಂತೆ. ಈ ಕಾರ್ ದೆಹಲಿಯಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ.
ನೆನಪಿಡಿ: ಯಾವುದೇ ಸೆಕೆಂಡ್ ಹ್ಯಾಂಡ್ ಇಲ್ಲವೇ ಈಗಾಗಲೇ ಉಪಯೋಗಿಸಿರುವ ಕಾರ್ ಖರೀದಿಸುವಾಗ ಅದರ ಸ್ಥಿತಿ ಹೇಗಿದೆ? ಅದರ ಸೇವಾ ಇತಿಹಾಸ, ದಾಖಲೆಗಳ ಬಗ್ಗೆ ಸರಿಯಾಗಿ ಮಾಹಿತಿ ಪಡೆದು ಮುಂದುವರೆಯುವುದು ಒಳ್ಳೆಯದು ಎಂಬುದನ್ನೂ ನೆನಪಿನಲ್ಲಿಡಿ. ಕಾರ್ಸ್ 24 ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಬ್ರೆಜ್ಜಾ ಕಾರ್ ಗಳ ವಿವರ ಈ ಕೆಳಕಂಡಂತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=38l6m8543Vk
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.