Knowledge News:ರೂಪಾಯಿ ನೋಟಿನ ಈ ವೈಶಿಷ್ಟ್ಯ ನಿಮಗೂ ಗೊತ್ತಿರಲಿಕ್ಕಿಲ್ಲ, ಏಕೆಂದರೆ ಈ ಸಂಗತಿ ತುಂಬಾ ಸಿಕ್ರೆಟ್

Secret Of Rupees - ಸಾಮಾನ್ಯವಾಗಿ ನಮಗೆ ತುಂಬಾ ಸರಳವಾದ ಅಥವಾ ನಮ್ಮ ಸುತ್ತಮುತ್ತಲಿನ ವಿಷಯಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಇಂದಿನ ಜ್ಞಾನದ ಸುದ್ದಿಯಲ್ಲಿ ನಾವು ಅಂತಹುದೇ ಒಂದು ಸರಳ, ಆದರೂ ಗೊತ್ತಿರದ ರೋಚಕ ವಿಷಯದ ಬಗ್ಗೆ ತಿಳಿದುಕೊಳ್ಳೋಣ.

Written by - Nitin Tabib | Last Updated : Oct 18, 2021, 04:58 PM IST
  • ಕಾಗದದಿಂದಲ್ಲ ಈ ವಸ್ತುವಿನಿಂದ ತಯಾರಿಸಲಾಗುತ್ತದೆ ನೋಟು.
  • ನೋಟುಗಳ ತಯಾರಿಕೆಗೆ ಯಾವ ಯಾವ ವಸ್ತುಗಳನ್ನು ಬಳಸಲಾಗುತ್ತದೆ.
  • ನೋಟುಗಳು ಹೇಗೆ ಮಾರುಕಟ್ಟೆಗೆ ಬರುತ್ತವೆ.
Knowledge News:ರೂಪಾಯಿ ನೋಟಿನ ಈ ವೈಶಿಷ್ಟ್ಯ ನಿಮಗೂ ಗೊತ್ತಿರಲಿಕ್ಕಿಲ್ಲ, ಏಕೆಂದರೆ ಈ ಸಂಗತಿ ತುಂಬಾ ಸಿಕ್ರೆಟ್ title=
Secret Of Rupees (File Photo)

Knowledge News: ಸಾಮಾನ್ಯವಾಗಿ ನಾವು ದಿನನಿತ್ಯ ನಮ್ಮ ಜೇಬಿನಲ್ಲಿ ಅನೇಕ ನೋಟುಗಳನ್ನು ಇಟ್ಟು ಸುತ್ತಾಡುತ್ತೇವೆ. ಮಾರುಕಟ್ಟೆಯಲ್ಲಿ ಏನನ್ನಾದರೂ ಖರೀದಿಸಬೇಕಾದರೆ ನಾವು ಅವುಗಳನ್ನು ಬಳಸುತ್ತೇವೆ. ಆದರೆ, ನೋಟು (Indian Currency) ಯಾವುದರಿಂದ ತಯಾರಿಸಲ್ಪತ್ತಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹೆಚ್ಚಿನ ಜನರು ಈ ನೋಟುಗಳನ್ನು ಒಂದು ವಿಶಿಷ್ಟ ರೀತಿಯ ಕಾಗದದಿಂದ ತಯಾರಿಸಲಾಗುತ್ತದೆ ಎಂದು ಭಾವಿಸುತ್ತಾರೆ, ಆದರೆ ಈ ಉತ್ತರವು ತಪ್ಪಾಗಿದೆ. ಕಾಗದದ ನೋಟುಗಳು ದೀರ್ಘಕಾಲದ ಬಾಳಿಕೆಯನ್ನು ಹೊಂದಿರುವುದಿಲ್ಲ, ಈ ಕಾರಣದಿಂದಾಗಿ ನೋಟುಗಳ (Rupees) ತಯಾರಿಕೆಗೆ ಕಾಗದದ ಬದಲಾಗಿ ಹತ್ತಿ ಬಳಸಲಾಗುತ್ತದೆ .

ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ನೀಡಿರುವ ಮಾಹಿತಿಯ ಪ್ರಕಾರ ನೋಟುಗಳನ್ನು ಶೇ.100ರಷ್ಟು ಶುದ್ಧ ಹತ್ತಿಯಿಂದ ತಯಾರಿಸಲಾಗುತ್ತದೆ. ಇದೇ ಕಾರಣದಿಂದ ನೋಟುಗಳು ದೀರ್ಘ ಕಾಲ ಬಾಳುತ್ತವೆ. 

ವಿಶೇಷ ಕಾಗದ ಅಲ್ಲಿ ಇದರಿಂದ ನೋಟು ತಯಾರಿಸಲಾಗುತ್ತದೆ
ಒಂದು ವೇಳೆ ನಿಮಗೂ ಕೂಡ ಯಾರಾದರು ನೋಟುಗಳನ್ನು ಯಾವುದರಿಂದ ತಯಾರಿಸಲಾಗಿದೆ ಎಂಬ ಪ್ರಶ್ನೆಯನ್ನು ಕೇಳಿದರೆ, ಬಹುತೇಕ ಜನರ ಉತ್ತರ ಕಾಗದ ಆಗಿರುತ್ತದೆ. ಆದರೆ ನೋಟು ಕಾಗದದಿಂದ ಅಲ್ಲ, ಹತ್ತಿಯಿಂದ ತಯಾರಿಸಲಾಗುತ್ತದೆ ಎಂದರೆ ನಿಮಗೂ ಆಶ್ಚರ್ಯವಾಗಬಹುದು. ಇದರ ಹಿಂದೆ ಕಾರಣ ಕೂಡ ಇದೆ. ಹತ್ತಿ, ಕಾಗದದ ಹೋಲಿಕೆಯಲ್ಲಿ ಗಟ್ಟಿಯಾಗಿರುತ್ತದೆ. ಹೀಗಾಗಿ ಅವು ಬೇಗನೆ ಹರಿಯುವುದಿಲ್ಲ. ಭಾರತ ಅಷ್ಟೇ ಅಲ್ಲ ಹಲವು ದೇಶಗಳಲ್ಲಿ ನೋಟುಗಳ ತಯಾರಿಕೆಗೆ ಹತ್ತಿಯನ್ನು ಬಳಸಲಾಗುತ್ತದೆ.

ನೋಟುಗಳ ತಯಾರಿಕೆಗೆ ಯಾವ ಯಾವ ವಸ್ತುಗಳನ್ನು ಬಳಸಲಾಗುತ್ತದೆ?
ಹತ್ತಿ ಫೈಬರ್ ಲಿನೆನ್ ಎಂಬ ಫೈಬರ್ ಅನ್ನು ಹೊಂದಿರುತ್ತದೆ. ಹತ್ತಿಯ ಜೊತೆಯಲ್ಲಿ, ಗ್ಯಾಟ್ಲಿನ್ ಹಾಗೂ ಅಡೆಸಿವ್ಸ್ ಹೆಸರಿನಹೆಸರಿನ ದ್ರಾವಣಗಳನ್ನು ನೋಟುಗಳನ್ನು ತಯಾರಿಸುವಾಗ ಬಳಸಲಾಗುತ್ತದೆ, ಇವು ನೋಟುಗಳ ಬಾಳಿಕೆಯನ್ನು ಹೆಚ್ಚಿಸುತ್ತವೆ. ಭಾರತೀಯ ನೋಟುಗಳು ಅತ್ಯಂತ ಭದ್ರತಾ ಲಕ್ಷಣಗಳನ್ನು ಹೊಂದಿದ್ದು, ಈ ಕಾರಣದಿಂದಾಗಿ ನಕಲಿ ಅಥವಾ ವಂಚನೆಯ ನೋಟುಗಳ ಹರಿವನ್ನು ಸುಲಭವಾಗಿ ನಿಯಂತ್ರಿಸಬಹುದು. ಭಾರತೀಯ ನೋಟುಗಳ ವಿನ್ಯಾಸವನ್ನು ಕಾಲಕಾಲಕ್ಕೆ ಬದಲಾಯಿಸಲಾಗುತ್ತಿದೆ.

ಇದನ್ನೂ ಓದಿ-WhatsApp New Feature: ಒಂದು ಮೋಜಿನ ಫೀಚರ್ ಬಿಡುಗಡೆ ಮಾಡಲು ವಾಟ್ಸಾಪ್ ಸಿದ್ಧತೆ

ಹೊಸ ನೋಟುಗಳು ಹೇಗೆ ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ?
ಅಧಿಸೂಚನೆಯ ಸೆಕ್ಷನ್ 22ರ ಪ್ರಕಾರ, ನೋಟುಗಳನ್ನು ಜಾರಿಗೊಳಿಸುವ ಅಧಿಕಾರ ಕೇವಲ ರಿಸರ್ವ್ ಬ್ಯಾಂಕ್ (RBI) ಬಳಿ ಇದೆ. ರಿಸರ್ವ್ ಬ್ಯಾಂಕ್, ಕೇಂದ್ರ ಸರ್ಕಾರ ಹಾಗೂ ಇತರೆ ಹಿತರಕ್ಷಕರ ಜೊತೆಗೆ ಚರ್ಚಿಸಿ, ಒಂದು ವರ್ಷದಲ್ಲಿ ಮೌಲ್ಯವರ್ಗಕ್ಕೆ ಅನುಗುಣವಾಗಿ, ಅವಶ್ಯಕತೆ ಇರುವ ಬ್ಯಾಂಕಿನ ನೋಟುಗಳ ಅಂದಾಜು ಹಾಕಲಾಗುತ್ತದೆ ಹಾಗೂ ಬ್ಯಾಂಕ್ ನೋಟುಗಳ ಸರಬರಾಜಿಗೆ ವಿಭಿನ್ನ ಮುಖಬೆಲೆಯ ನೋಟುಗಳಿಗಾಗಿ ಪ್ರಿಂಟಿಂಗ್ ಪ್ರೆಸ್ ಗೆ ಬೇಡಿಕೆ ಸಲ್ಲಿಸುತ್ತದೆ.

ಇದನ್ನೂ ಓದಿ-T20 World Cup 2021: ನೀವು ಈ ರೀತಿ T20 World Cup Live ಅನ್ನು ಫ್ರೀ ಆಗಿ ವೀಕ್ಷಿಸಬಹುದು, ಒಂದೇ ಕ್ಲಿಕ್‌ನಲ್ಲಿ ವೀಕ್ಷಿಸಿ Ind Vs Pak ಮ್ಯಾಚ್

ಹರಿನ ನೋಟುಗಳು ಏನಾಗುತ್ತವೆ?
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಸ್ವಚ್ಛ ನೋಟುಗಳ ನೀತಿಯ ಅಡಿ ಬ್ಯಾಂಕುಗಳಿಗೆ ಉತ್ತಮ ಗುಣಮಟ್ಟದ ನೋಟುಗಳನ್ನು ನೀಡುತ್ತದೆ. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ಚಲಾವಣೆಯಿಂದ ಹಿಂತೆಗೆದುಕೊಳ್ಳಲಾದ ನೋಟುಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಚಲಾವಣೆಗೆ ಯೋಗ್ಯವಾದವುಗಳನ್ನು ಮರುಹಂಚಿಕೆ ಮಾಡಲಾಗುತ್ತದೆ ಮತ್ತುಇತರ ನೋಟುಗಳನ್ನು (ಕೊಳಕು ಮತ್ತು ವಿರೂಪಗೊಳಿಸಿದ) ನಾಶಪಡಿಸಲಾಗುತ್ತದೆ ಈ ರೀತಿ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳು ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತದೆ.

ಇದನ್ನೂ ಓದಿ-Vi, Airtel, Jio Best Recharge Plans: ಕಡಿಮೆ ವೆಚ್ಚದಲ್ಲಿ ನಿತ್ಯ 4GB ಡಾಟಾ ಜೊತೆ ಸಿಗಲಿದೆ ಹಲವು ಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News