Jio Smartphone: ಜಬರ್ದಸ್ತ್ ಫೋನ್ ಬಿಡುಗಡೆ ಮಾಡಿದ Reliance Jio, ಬೆಲೆ ನಿಮ್ಮ ಬಜೆಟ್ ನಲ್ಲಿ, EMI ಆಪ್ಶನ್ ಕೂಡ ಇದೆ

JioPhone Next ದೀಪಾವಳಿಯಿಂದ (Diwali-2021) ಎಲ್ಲಾ ಜಿಯೋ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ ಎಂದು ರಿಲಯನ್ಸ್ ಜಿಯೋ ಹಾಗೂ ಗೂಗಲ್ ಶುಕ್ರವಾರ ಘೋಷಿಸಿವೆ. ಈ ಫೋನ್ ಸಂಪೂರ್ಣ ಮೇಡ್ ಇನ್ ಇಂಡಿಯಾ ಆಗಿರಲಿದೆ ಎಂದು ಕಂಪನಿ ಹೇಳಿದೆ. ಅಷ್ಟೇ ಅಲ್ಲ ಇದನ್ನು ಅತ್ಯಂತ ಅಗ್ಗದ ಬೆಲೆಯಲ್ಲಿ ಲಭ್ಯವಿರಿಸಲಾಗುವುದು ಎಂದು ಕಂಪನಿ ಹೇಳಿದೆ. 

Written by - Nitin Tabib | Last Updated : Oct 29, 2021, 08:13 PM IST
  • JioPhone Next ಸ್ಮಾರ್ಟ್ ಫೋನ್ ನಿರೀಕ್ಷೆಗೆ ಬಿತ್ತು ತೆರೆ.
  • ಬರುವ ದೀಪಾವಳಿಯಿಂದ ದೇಶಾದ್ಯಂತದ ಮಳಿಗೆಗಳಲ್ಲಿ ಈ ಫೋನ್ ಖರೀದಿಗೆ ಲಭ್ಯ ಇರಲಿದೆ.
  • ಈ ಫೋನ್ ಅನ್ನು ನೀವು ಸುಲಭ ಕಂತುಗಳಲ್ಲಿಯೂ ಕೂಡ ಖರೀದಿಸಬಹುದು
Jio Smartphone: ಜಬರ್ದಸ್ತ್ ಫೋನ್ ಬಿಡುಗಡೆ ಮಾಡಿದ Reliance Jio, ಬೆಲೆ ನಿಮ್ಮ ಬಜೆಟ್ ನಲ್ಲಿ, EMI ಆಪ್ಶನ್ ಕೂಡ ಇದೆ title=
JioPhone Next Update(File Photo)

ನವದೆಹಲಿ: Jio New Smartphone - ಬರುವ ದೀಪಾವಳಿಯಿಂದ (Diwali 2021) JioPhone Next ದೇಶಾದ್ಯಂತದ ಅಂಗಡಿಗಳಲ್ಲಿ ಲಭ್ಯವಿರಲಿದೆ ಎಂದು ರಿಲಯನ್ಸ್ ಜಿಯೋ ಹಾಗೂ ಗೂಗಲ್ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿವೆ. ಕಂಪನಿ ಈ ಫೋನ್ ಅನ್ನು ಮೇಡ್ ಇನ್ ಇಂಡಿಯಾ ಸ್ಮಾರ್ಟ್ ಫೋನ್ ಎಂದು ಹೇಳಿಕೊಂಡಿದೆ. ಅಷ್ಟೇ ಅಲ್ಲ ಈ ಫೋನ್ ಅನ್ನು ಅಗ್ಗದ ಬೆಲೆಯಲ್ಲಿ ಲಭ್ಯವಿರಿಸಲಾಗುವುದು ಎಂದೂ ಕೂಡ ಕಂಪನಿ ಹೇಳಿದೆ.

ಸುಲಭ ಕಂತುಗಳಲ್ಲಿಯೂ ಕೂಡ ನೀವು ಈ ಫೋನ್ (Jio Mobiles) ಅನ್ನು ಖರೀದಿಸಬಹುದು
ಗ್ರಾಹಕರು 'Jiophone Next' ಸ್ಮಾರ್ಟ್‌ಫೋನ್ ಅನ್ನು ಕಂತುಗಳಲ್ಲಿಯೂ ಸಹ  ಖರೀದಿಸಬಹುದು ಎಂದು ಜಿಯೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಫೋನ್ ಅನ್ನು ಕಂತುಗಳಲ್ಲಿ ಖರೀದಿಸಲು ಗ್ರಾಹಕರು ಆರಂಭದಲ್ಲಿ ರೂ 1,999 ಪಾವತಿಸಬೇಕಾಗುತ್ತದೆ ಮತ್ತು ಉಳಿದ ಮೊತ್ತವನ್ನು 18 ರಿಂದ 24 ತಿಂಗಳ ಕಂತುಗಳಲ್ಲಿ ಪಾವತಿಸಬಹುದು. ಈ ಕುರಿತು ಜಂಟಿ ಹೇಳಿಕೆ ನೀಡಿರುವ 'ಕಡಿಮೆ ಬೆಲೆಯ ಫೋನ್ ಅನ್ನು ಕಂತುಗಳ ಮೂಲಕ ಖರೀದಿಸುವ ಆಯ್ಕೆಯನ್ನು ನೀಡುತ್ತಿರುವುದು ಇದೇ ಮೊದಲು. ಈ ಆಯ್ಕೆಯು ಫೋನ್‌ನ ಖರೀದಿ ಬೆಲೆಯನ್ನು ಕೈಗೆಟುಕುವಂತೆ ಮಾಡುತ್ತದೆ ಮತ್ತು ಸಾಮಾನ್ಯ ಫೋನ್‌ನ ಬೆಲೆಗೆ ಇದು ಸಮನಾಗಿರುತ್ತದೆ' ಎಂದು ತಿಳಿಸಿದೆ. 

ಇದನ್ನೂ ಓದಿ-ದೀಪಾವಳಿಗೆ ಬಿಡುಗಡೆಯಾಗಲಿದೆ JioPhone Next, ಕೇವಲ 10% ಪಾವತಿಸಿ ಖರೀದಿಸಿ ಅಗ್ಗದ 4G ಸ್ಮಾರ್ಟ್‌ ಪೋನ್‌

ಇಂಟರ್ನೆಟ್ ಬಳಿಕ ಇದೀಗ ಸ್ಮಾರ್ಟ್ ಫೋನ್ ಕ್ರಾಂತಿಗೆ ಮುಂದಾದ ಜಿಯೋ (Jio Mobile Launch)
ಕಂಪನಿಯ ಪ್ರಕಾರ, ಈ ಸ್ಮಾರ್ಟ್‌ಫೋನ್ ಅನ್ನು ಕ್ವಾಲ್ಕಾಮ್ ಚಿಪ್‌ಸೆಟ್‌ (Qualcomm Chipset) ಒಳಗೊಂಡಿದೆ ಮತ್ತು ದೇಶಾದ್ಯಂತ ಎಲ್ಲಾ ಜಿಯೋಮಾರ್ಟ್ ಡಿಜಿಟಲ್ ರಿಟೇಲ್ ಸ್ಟೋರ್‌ಗಳಲ್ಲಿ ಲಭ್ಯವಿರಲಿದೆ. ಈ ಫೋನ್ ಅನ್ನು ಪ್ರಕಟಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, 'ಭಾರತೀಯರಿಗೆ ಹಬ್ಬದ ಋತುವಿನಲ್ಲಿ ಗೂಗಲ್ ಮತ್ತು ಜಿಯೋ ತಂಡಗಳು ಈ ಫೋನ್ ಅನ್ನು ಸಮಯಕ್ಕೆ ನೀಡುವಲ್ಲಿ ಯಶಸ್ವಿಯಾಗಿವೆ ಎಂಬುದನ್ನು ಪ್ರಕಟಿಸಲು ನನಗೆ ಅತೀವ ಸಂತೋಷವಾಗುತ್ತಿದೆ. ಕೋವಿಡ್-19 ಸಾಂಕ್ರಾಮಿಕ (Covid-19 Pandemic) ರೋಗದಿಂದಾಗಿ ಜಾಗತಿಕ ಪೂರೈಕೆ ಸರಪಳಿಯಲ್ಲಿನ ಸವಾಲುಗಳ ಹೊರತಾಗಿಯೂ ನಾವು ಈ ಫೋನ್ ತರುವಲ್ಲಿ ಯಶಸ್ವಿಯಾಗಿದ್ದೇವೆ. 135 ಕೋಟಿ ಭಾರತೀಯರ ಜೀವನವನ್ನು ಶ್ರೀಮಂತಗೊಳಿಸಲು, ಸಕ್ರಿಯಗೊಳಿಸಲು ಮತ್ತು ಸಶಕ್ತಗೊಳಿಸಲು ಡಿಜಿಟಲ್ ಕ್ರಾಂತಿಯ ಶಕ್ತಿಯಲ್ಲಿ  ನಾವು ಆಳವಾಗಿ ನಂಬಿಕೆ ಹೊಂದಿದ್ದೇವೆ. ಮೊದಲು ನಾವು ಇದನ್ನು ಇಂಟರ್ನೆಟ್ ಮೂಲಕ ಮಾಡಿದ್ದು, ಈ ಬಾರಿ ಅದೇ ಕ್ರಾಂತಿಯನ್ನು ನಾವು  ಸ್ಮಾರ್ಟ್‌ಫೋನ್ ಮೂಲಕ ಮಾಡುತ್ತೇವೆ' ಎಂದು ಹೇಳಿದ್ದಾರೆ. 

ಇದನ್ನೂ ಓದಿ-JioBook Laptop Update: ಶೀಘ್ರದಲ್ಲಿಯೇ JioBook ಲ್ಯಾಪ್ ಟಾಪ್ ಬಿಡುಗಡೆ, 4G ಕನೆಕ್ಟಿವಿಟಿ ಜೊತೆಗೆ ಈ ವೈಶಿಷ್ಟ್ಯಗಳು ಇರಲಿವೆ !

ವಿಶ್ವದ ಅತ್ಯಂತ ಅಗ್ಗದ ಸ್ಮಾರ್ಟ್ ಫೋನ್
ಕಂಪನಿ ತನ್ನ ಸ್ಮಾರ್ಟ್ ಫೋನ್ ಅನ್ನು ವಿಶ್ವದ ಅತ್ಯಂತ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಆಗಿದೆ ಎಂದು ಹೇಳಿಕೊಂಡಿದೆ. 10 ವಿವಿಧ ಭಾಷೆಗಳ ಸಪೋರ್ಟ್ ನೊಂದಿಗೆ ಈ ಫೋನ್ ಲಾಂಚ್ ಆಗುತ್ತಿದೆ. ಈ ಸ್ಮಾರ್ಟ್ ಫೋನ್ ವೈಶಿಷ್ಟ್ಯಗಳು ಕೂಡ ತುಂಬಾ ಆಕರ್ಷಕವಾಗಿದ್ದು, ಇತರ ಸ್ಮಾರ್ಟ್ ಫೋನ್ ಗಳೊಂದಿಗೆ ಪೈಪೋಟಿಗಾಗಿ ಅದನ್ನು ಸಿದ್ಧಗೊಳಿಸುತ್ತವೆ.

ಇದನ್ನೂ ಓದಿ-ಅತ್ಯಂತ ಕಡಿಮೆ ದರದ smartphone ಖರೀದಿಸಬೇಕೇ ? ಈ ದಿನದಿಂದ ಆರಂಭವಾಗಲಿದೆ jioPhone Next ಪ್ರಿ ಬುಕಿಂಗ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News