Jio Offer: ಜಿಯೋ ಕಂಪನಿಯ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಕೊಡುಗೆಗಳ ಸುರಿಮಳೆ, ಹಲವು ಉಚಿತ OTT ಸೇವೆಗಳು ಲಭ್ಯ!

Jio Offer: ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ನಿಮ್ಮ ಮನರಂಜನೆಯ ಕಾಳಜಿಯನ್ನು ವಹಿಸುವ ರೀಚಾರ್ಜ್ ಪ್ಲಾನ್ ಗಾಗಿ ನೀವೂ ಕೂಡ ಒಂದು ವೇಳೆ ಹುಡುಕಾಟ ನಡೆಸುತ್ತಿದ್ದರೆ, ಇಂದು ನಾವು ನಿಮಗೆ ರಿಲಯನ್ಸ್ ಜಿಯೋ ಕಂಪನಿಯ ಅಂತಹುದೇ ಒಂದು ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.   

Written by - Nitin Tabib | Last Updated : Sep 11, 2022, 06:32 PM IST
  • ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿರುವ ಲಾಭಗಳ ಕುರಿತು ಹೇಳುವುದಾದರೆ,
  • ಈ ಯೋಜನೆಯು 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.
  • ಇದರಲ್ಲಿ ನಿಮಗೆ 300 ಎಂಬಿಪಿಎಸ್ ಸ್ಪೀಡ್ ನಲ್ಲಿ ಇಂಟರ್ನೆಟ್ ಕೂಡ ಒದಗಿಸಲಾಗುತ್ತದೆ.
Jio Offer: ಜಿಯೋ ಕಂಪನಿಯ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಕೊಡುಗೆಗಳ ಸುರಿಮಳೆ, ಹಲವು ಉಚಿತ OTT ಸೇವೆಗಳು ಲಭ್ಯ! title=
Jio Free OTT Prepaid Plan

Jio Free OTT Prepaid  Plan: ಭಾರತೀಯರ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳುವ ಟೆಲಿಕಾಂ ಕಂಪನಿಗಳಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ ಮುಂಚೂಣಿಯಲ್ಲಿದೆ. ಕಂಪನಿ ತನ್ನ ಬಳಕೆದಾರರ ಬಜೆಟ್ ಬಗ್ಗೆಯೂ ಕೂಡ ಕಾಳಜಿವಹಿಸುತ್ತದೆ ಮತ್ತು ಒಂದೇ ರೀಚಾರ್ಜ್ ಯೋಜನೆಯ ಅಡಿ ಹಲವು ಕೊಡುಗೆಗಳಿರುವ ಯೋಜನೆಗಳನ್ನು ಜಾರಿಗೆ ತರುತ್ತದೆ. ಇಂದು ನಾವು ನಿಮಗೆ ಜಿಯೋ ಕಂಪನಿಯ ಅಂತಹುದೇ ಒಂದು ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಯೋಜನೆ ನಿಮ್ಮ ಬಜೆಟ್ ನಲ್ಲಿಯೂ ಕೂಡ ಬರುತ್ತದೆ ಮತ್ತು ಯೋಜನೆಯ ಅಡಿ ನೀಡಲಾಗುವ ಲಾಭಗಳನ್ನು ನೀವೂ ಊಹಿಸಲು ಕೂಡ ಸಾಧ್ಯವಿಲ್ಲ.

ಯಾವ ಯೋಜನೆ? 
ನಾವು ನಿಮಗೆ ಹೇಳಲು ಹೊರಟಿರುವ ಜಿಯೋ ಕಂಪನಿಯ ಪ್ರಿಪೇಯ್ಡ್ ಪ್ಲ್ಯಾನ್ ಬೆಲೆ ರೂ.1499 ಆಗಿದೆ. ಈ ಯೋಜನೆಯ ಅಡಿ ನಿಮಗೆ ಇತರೆ ಯೋಜನೆಗಳಂತೆ ಲಾಭಗಳು ಸಿಗುವುದರ ಜೊತೆಗೆ ಕೆಲ ಹೆಚ್ಚುವರಿ ಲಾಭಗಳನ್ನು ಕೂಡ ನೀಡಲಾಗುತ್ತದೆ ಮತ್ತು ಅವು ಬಳಕೆದಾರರಿಗೆ ಇಷ್ಟ ಕೂಡ ಆಗುತ್ತಿವೆ. 

ಇದನ್ನೂ ಓದಿ-Great Indian Festival Sale: ಮತ್ತೊಮ್ಮೆ ಬಂದಿದೆ ಅಗ್ಗದ ಆನ್‌ಲೈನ್ ಶಾಪಿಂಗ್‌ ! ಉತ್ಪನ್ನಗಳ ಮೇಲೆ ಸಿಗುತ್ತಿದೆ ಭಾರೀ ಆಫರ್

ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತಿರುವ ಲಾಭಗಳ ಕುರಿತು ಹೇಳುವುದಾದರೆ, ಈ ಯೋಜನೆಯು 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ನಿಮಗೆ 300 ಎಂಬಿಪಿಎಸ್ ಸ್ಪೀಡ್ ನಲ್ಲಿ ಇಂಟರ್ನೆಟ್ ಕೂಡ ಒದಗಿಸಲಾಗುತ್ತದೆ. ಇದರಲ್ಲಿ ನಿತ್ಯ 100 ಎಸ್.ಎಂ.ಎಸ್ ಸೌಲಭ್ಯವನ್ನು ಕೂಡ ಒದಗಿಸಲಾಗಿದೆ. ಇತರೆ ಪ್ರಿಪೇಯ್ಡ್ ಯೋಜನೆಗಳಂತೆ ಈ ಯೋಜನೆಯಲ್ಲಿ ಉಚಿತ ಅನಿಯಮಿತ ಕಾಲಿಂಗ್ ಕೂಡ ಒದಗಿಸಲಾಗಿದೆ. ಈ ಎಲ್ಲಾ ಸೌಲಭ್ಯಗಳು ನಿಮಗೆ ಕಮ್ಮಿ ಎನಿಸುತ್ತಿದ್ದರೆ. ಈಗ ನಾವು ನಿಮಗೆ ಈ ಯೋಜನೆಯ ಅಡಿ ಸಿಗುವ ಒಂದು ವಿಶಿಷ್ಟ ಸೌಲಭ್ಯದ ಕುರಿತು ಹೇಳುತ್ತಿದ್ದು, ಈ ಸೌಲಭ್ಯ ಈ ಯೋಜನೆಯನ್ನು ಇತರ ಕಂಪನಿಗಳ ಯೋಜನೆಗಳ ಹೋಲಿಕೆಯಲ್ಲಿ ಇದನ್ನು ಭಿನ್ನವಾಗಿಸುತ್ತದೆ.

ಇದನ್ನೂ ಓದಿ-iPhone 14 ಮೇಲೆ ಸಿಗುತ್ತಿದೆ ಭಾರೀ ಕ್ಯಾಶ್ ಬ್ಯಾಕ್.! 80 ಸಾವಿರ ಬೆಲೆಯ ಫೋನ್ ಸಿಗುತ್ತಿದೆ ಅಗ್ಗದ ಬೆಲೆಗೆ

ಯಾವ ವಿಶೇಷ ಸೌಲಭ್ಯ ಸಿಗುತ್ತದೆ
ಈ ಪ್ರಿಪೇಯ್ಡ್ ಯೋಜನೆಯಲ್ಲಿ ಬಳಕೆದಾರರಿಗೆ ಉಚಿತ ಓಟಿಟಿ ಚಂದಾದಾರಿಕೆಗಳನ್ನು ಸಹ ಒದಗಿಸಲಾಗುತ್ತದೆ. ಈ ಉಚಿತ ಚಂದಾದಾರಿಕೆಗಳಲ್ಲಿ Netflix, Amazon Prime ಸೇರಿದಂತೆ ಹಲವು ಓಟಿಟಿ ಚಂದಾದಾರಿಕೆಗಳು ಶಾಮೀಲಾಗಿವೆ. ಬಳಕೆದಾರರ ಮನರಂಜನೆಯನ್ನು ಗಮನದಲ್ಲಿಟ್ಟುಕೊಂಡು ಇವುಗಳನ್ನು ಯೋಜನೆಯಲ್ಲಿ ಶಾಮೀಲುಗೊಳಿಸಲಾಗಿದೆ ಮತ್ತು ಬಳಕೆದಾರರು ಕೂಡ ಇವುಗಳನ್ನು ತುಂಬಾ ಇಷ್ಟಪಡುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News