Smartphone: ಮಳೆಯಿಂದಾಗಿ ನಿಮ್ಮ ಫೋನ್‌ನಲ್ಲಿ ನೀರು ಹೋಗಿದೆಯೇ? ಭಯಬಿಡಿ, ಈ ಸುಲಭ ಟ್ರಿಕ್ ಬಳಸಿ

ನಿಮ್ಮ ಫೋನ್ ಮಳೆಯಲ್ಲಿ ಒದ್ದೆಯಾದರೆ, ಅದನ್ನು ಪರೀಕ್ಷಿಸಲು ಪ್ರಯತ್ನಿಸಬೇಡಿ. ನೀವು ಮತ್ತೆ ಮತ್ತೆ ಗುಂಡಿಯನ್ನು ಒತ್ತುವ ಪ್ರಯತ್ನ ಮಾಡಿದರೆ, ಇನ್ನೂ ಹೆಚ್ಚು ನೀರು ಒಳಗೆ ಹರಿಯುತ್ತದೆ ಮತ್ತು ಇದು ಶಾರ್ಟ್ ಸರ್ಕ್ಯೂಟ್‌ಗೂ ಕಾರಣವಾಗಬಹುದು.

Written by - Yashaswini V | Last Updated : Jul 8, 2021, 11:45 AM IST
  • ಫೋನ್ ಮಳೆಯಲ್ಲಿ ಒದ್ದೆಯಾದರೆ, ಅದನ್ನು ಆಫ್ ಮಾಡಿ. ಇಲ್ಲದಿದ್ದರೆ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆ ಇರುತ್ತದೆ
  • ಫೋನ್ ಒದ್ದೆಯಾಗಿದ್ದರೆ ಅದನ್ನು ತಕ್ಷಣ ಆಫ್ ಮಾಡುವುದು ಒಳ್ಳೆಯದು
  • ಮಳೆಯಲ್ಲಿ ನೀವು ಹೊರಗೆ ಹೋಗುವಾಗ, ನಿಮ್ಮೊಂದಿಗೆ ಜಲನಿರೋಧಕ ಚೀಲವನ್ನು ಇರಿಸಿ
Smartphone: ಮಳೆಯಿಂದಾಗಿ ನಿಮ್ಮ ಫೋನ್‌ನಲ್ಲಿ ನೀರು ಹೋಗಿದೆಯೇ? ಭಯಬಿಡಿ, ಈ ಸುಲಭ ಟ್ರಿಕ್ ಬಳಸಿ title=
ಮ್ಯಾನ್ಸೂನ್ ಮಳೆಯಲ್ಲಿ ನಿಮ್ಮ ಸ್ಮಾರ್ಟ್ಫೋನ್ ಅನ್ನು ಸುರಕ್ಷಿತವಾಗಿಡುವುದು ಹೇಗೆ? ಇಲ್ಲಿದೆ ಸುಲಭ ಟ್ರಿಕ್

ಬೆಂಗಳೂರು: ಮಳೆಗಾಲ ಆರಂಭವಾಗಿದೆ. ಭಾರತದ ಅನೇಕ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮೊದಲೆಲ್ಲ ಮಳೆಗಾಲ ಆರಂಭವಾದರೆ ಶೀತ ಆಗುತ್ತೆ, ಜ್ವರ ಬರುತ್ತೆ ಎಂಬ ಕಾಳಜಿ ಹೆಚ್ಚಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಜನರಿಗೆ ತಮಗಿಂತ ತಮ್ಮ ಸ್ಮಾರ್ಟ್ಫೋನ್ (Smartphone) ಮೇಲಿನ ಕಾಳಜಿಯೇ ಹೆಚ್ಚಾಗಿದೆ. ಹಲವು ಬಾರಿ ಎಷ್ಟೇ ಸುರಕ್ಷಿತ ಕ್ರಮ ಕೈಗೊಂಡರೂ ಕೂಡ ಮಳೆಯಲ್ಲಿ ಫೋನ್ ಒದ್ದೆಯಾಗಿ ಹಾನಿಗೊಳಗಾಗುತ್ತದೆ. ಆದರೆ ಚಿಂತೆಬಿಡಿ, ಈ ಕೆಲವು ಸಿಂಪಲ್ ಸಲಹೆಗಳನ್ನು ಅನುಸರಿಸಿ ಮಳೆಯಲ್ಲಿ ನಿಮ್ಮ ಸ್ಮಾರ್ಟ್ಫೋನ್ ಅನ್ನು ಸುರಕ್ಷಿತವಾಗಿಡಬಹುದು.

ಮಳೆಯಲ್ಲಿ ನಿಮ್ಮ ಸ್ಮಾರ್ಟ್ಫೋನ್ ಒದ್ದೆಯಾದಾಗ ಈ ಟಿಪ್ಸ್ ಅನುಸರಿಸಿ:
* ತಕ್ಷಣ ಫೋನ್ ಆಫ್ ಮಾಡಿ:
ಸ್ಮಾರ್ಟ್ಫೋನ್ / ಫೋನ್ ನೀರಿನಲ್ಲಿ ಒದ್ದೆಯಾಗಿದ್ದರೆ, ತಕ್ಷಣ ಅದನ್ನು ಆಫ್ ಮಾಡಿ. ಫೋನ್ ಒಳಗೆ ನೀರು ಬಂದರೆ, ಶಾರ್ಟ್ ಸರ್ಕ್ಯೂಟ್ ಸಹ ಸಂಭವಿಸಬಹುದು. ತಕ್ಷಣ ನಿಮ್ಮ ಫೋನ್ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರೀಕ್ಷಿಸಲು ಪ್ರಯತ್ನಿಸಬಾರದು ಎಂಬುದನ್ನು ನೆನಪಿಡಿ. ಸ್ಮಾರ್ಟ್ಫೋನ್ (Smartphone)/ ಫೋನ್  ಒದ್ದೆಯಾದ ಸಂದರ್ಭದಲ್ಲಿ  ಯಾವುದೇ ಗುಂಡಿಯನ್ನು ಒತ್ತಿ ಅದನ್ನು ಪರೀಕ್ಷಿಸುವ ಬದಲು ಮೊದಲು ಫೋನ್ ಆಫ್ ಮಾಡುವುದು ಜಾಣತನ.

* ಬ್ಯಾಟರಿಯನ್ನು ಸಹ ತೆಗೆದುಹಾಕಿ:
ಫೋನ್ ನೀರಿನಲ್ಲಿ ಅಥವಾ ಮಳೆಯಲ್ಲಿ ತೇವವಾಗಿದ್ದರೆ, ಅದರಿಂದ ಮೊದಲು ಬ್ಯಾಟರಿಯನ್ನು ತೆಗೆದುಹಾಕಿ, ಇದು ಫೋನ್‌ಗೆ ಬರುವ ಪವರ್ ಅನ್ನು ಕಡಿತಗೊಳಿಸುತ್ತದೆ. ನಿಮ್ಮ ಫೋನ್‌ನಲ್ಲಿ ತೆಗೆಯಲಾಗದ ಬ್ಯಾಟರಿ ಇದ್ದರೆ, ನೀವು ನೇರವಾಗಿ ಫೋನ್ ಅನ್ನು ಆಫ್ ಮಾಡಬೇಕು. ತೆಗೆಯಲಾಗದ ಬ್ಯಾಟರಿಗಳನ್ನು ಹೊಂದಿರುವ ಫೋನ್‌ಗಳು ಶಾರ್ಟ್ ಸರ್ಕ್ಯೂಟ್‌ಗಳಿಗೆ ಹೆಚ್ಚು ಒಳಗಾಗುತ್ತವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- World's Smallest 4G Smartphone: ಅನಾವರಣಗೊಂಡ ವಿಶ್ವದ ಅತ್ಯಂತ ಚಿಕ್ಕ 4G ಸ್ಮಾರ್ಟ್ಫೋನ್ Money Mist

* ನಂತರ ಉಳಿದ ಬಿಡಿಭಾಗಗಳನ್ನು ತೆಗೆದುಹಾಕಿ:
ಅದರ ನಂತರ ನೀವು ಫೋನ್ ಕವರ್, ಸಿಮ್ ಕಾರ್ಡ್ (Sim Card), ಮೆಮೊರಿ ಕಾರ್ಡ್ ಅನ್ನು ಫೋನ್‌ನಿಂದ ತೆಗೆದುಹಾಕಿ. ಹೀಗೆ ಮಾಡುವುದರಿಂದ ಶಾರ್ಟ್ ಸರ್ಕ್ಯೂಟ್ ಅಪಾಯ ಕಡಿಮೆಯಾಗುತ್ತದೆ. ಎಲ್ಲಾ ಬಿಡಿಭಾಗಗಳನ್ನು ತೆಗೆದ ನಂತರ, ಅವುಗಳನ್ನು ಟಿಶ್ಯೂ ಪೇಪರ್ ಅಥವಾ ವೃತ್ತಪತ್ರಿಕೆಗಳಿಂದ ಸ್ವಚ್ಛಗೊಳಿಸಿ. ಇದನ್ನು ಮಾಡುವುದರಿಂದ ಒಳಗಿನ ತೇವಾಂಶ ನಿವಾರಣೆಯಾಗುತ್ತದೆ.

* ಫೋನ್ ಅನ್ನು ಅಕ್ಕಿಯ ಮಧ್ಯದಲ್ಲಿ ಇರಿಸಿ:
ಫೋನಿನಿಂದ ಈ ಬಿಡಿಭಾಗಗಳನ್ನು ಸ್ವಚ್ಛಗೊಳಿಸಿದ ನಂತರ, ಫೋನ್ ಅನ್ನು ಅಕ್ಕಿಯ ಮಧ್ಯದಲ್ಲಿ ಇಡುವುದು ಉತ್ತಮ ಆಯ್ಕೆಯಾಗಿದೆ. ಅಕ್ಕಿ ತೇವಾಂಶವನ್ನು ವೇಗವಾಗಿ ಹೀರಿಕೊಳ್ಳುತ್ತದೆ. ಎಲ್ಲಾ ಬಿಡಿಭಾಗಗಳನ್ನು ಅಕ್ಕಿಗೆ ಒತ್ತಿ ಮತ್ತು ಅವುಗಳನ್ನು ಪಾತ್ರೆಯಲ್ಲಿ ಇರಿಸಿ. ಫೋನ್ ಅನ್ನು ಕನಿಷ್ಠ 24 ಗಂಟೆಗಳ ಕಾಲ ಅಕ್ಕಿಯಲ್ಲಿ ಇರಿಸಲು ಸೂಚಿಸಲಾಗುತ್ತದೆ.

* ಸಿಲಿಕಾ ಜೆಲ್ ಪ್ಯಾಕ್‌ಗಳು ತೇವಾಂಶವನ್ನು ಹೀರಿಕೊಳ್ಳುತ್ತವೆ : 
ಅಕ್ಕಿಗಿಂತ ಸಿಲಿಕಾ ಜೆಲ್ ಉತ್ತಮವಾಗಿದೆ. ಸಿಲಿಕಾ ಜೆಲ್ ಪ್ಯಾಕ್‌ಗಳನ್ನು ಹೆಚ್ಚಾಗಿ ಶೂ ಪೆಟ್ಟಿಗೆಗಳು, ಥರ್ಮೋಸ್‌ನಲ್ಲಿ ಬಳಸಲಾಗುತ್ತದೆ. ಸಿಲಿಕಾ ಜೆಲ್ ಪ್ಯಾಕ್ ಅನ್ನು ಅದರಲ್ಲಿ ತೇವಾಂಶ ಬರದಂತೆ ಇಡಲಾಗುತ್ತದೆ. ಇದು ತೇವಾಂಶವನ್ನು ತೆಗೆದುಹಾಕುತ್ತದೆ. ನಿಮ್ಮ ಆರ್ದ್ರ ಫೋನ್ ಅನ್ನು ಸಹ ನೀವು ಅದರಲ್ಲಿ ಇರಿಸಿಕೊಳ್ಳಬಹುದು. ಇದರಲ್ಲಿ ನೀವು ಕನಿಷ್ಠ 24 ಗಂಟೆಗಳ ಕಾಲ ಇಡಬೇಕು.

ಇದನ್ನೂ ಓದಿ- Protect Smartphones in Rain: ಮಾನ್ಸೂನ್‌ನಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ತೇವವಾಗದಂತೆ ರಕ್ಷಿಸುವುದು ಹೇಗೆ?

* ಡ್ರೈಯರ್ ಅಥವಾ ಹೀಟರ್‌ನಿಂದ ದೂರವಿರಿ: 
ನಿಮ್ಮ ಫೋನ್ ಒದ್ದೆಯಾಗಿದ್ದರೆ, ಅದನ್ನು ಡ್ರೈಯರ್ ಅಥವಾ ಹೀಟರ್‌ನಲ್ಲಿ ಒಣಗಿಸುವ ಸಾಹಸಕ್ಕೆ ಕೈ ಹಾಕಬೇಡಿ. ಇದು ಕೂಡ ಶಾರ್ಟ್ ಸರ್ಕ್ಯೂಟ್ ಅಪಾಯವನ್ನು ಹೊಂದಿರುತ್ತದೆ.

* ಹೆಡ್‌ಫೋನ್‌ಗಳು ಮತ್ತು ಯುಎಸ್‌ಬಿ ಬಳಸಬೇಡಿ:
ಫೋನ್ ಒದ್ದೆಯಾಗಿದ್ದರೆ ಅದರಲ್ಲಿ ಹೆಡ್‌ಫೋನ್‌ಗಳು (Headphone) ಮತ್ತು ಯುಎಸ್‌ಬಿ (USB) ಅನ್ನು ಸಂಪರ್ಕಿಸಬೇಡಿ. ಇದರಿಂದ ನಿಮ್ಮ ಫೋನ್‌ಗೆ ಹಾನಿಯಾಗಬಹುದು. ಫೋನ್ ಆನ್ ಆಗಿರುವಾಗ ನೀವು ಅವುಗಳನ್ನು ಬಳಸಬಹುದು. ಅದರ ನಂತರ ಫೋನ್ ಇನ್ನೂ ಸ್ಥಿರವಾಗದಿದ್ದರೆ, ಅದನ್ನು ಸೇವಾ ಕೇಂದ್ರಕ್ಕೆ ತೋರಿಸಿ.

* ಜಲನಿರೋಧಕ ಚೀಲವನ್ನು ಒಯ್ಯಿರಿ:
ಮಳೆಯಿಂದ (Rain) ನಿಮ್ಮ ಮೊಬೈಲ್ ಅನ್ನು ರಕ್ಷಿಸಲು ನೀವು ಜಲನಿರೋಧಕ ಚೀಲವನ್ನು ನಿಮ್ಮೊಂದಿಗೆ ಇಡುವುದು ಉತ್ತಮ. ನೀವು ಅದನ್ನು ಯಾವುದೇ ಆನ್‌ಲೈನ್ ಸೈಟ್‌ನಿಂದ ಖರೀದಿಸಬಹುದು. ಇದರ ಬೆಲೆ ಕೂಡ 99 ರೂಪಾಯಿ ಮಾತ್ರ. ಇದನ್ನು ಬಳಸುವ ಮೂಲಕ ನೀವು ನಿಮ್ಮ ಸಾವಿರಾರು ರೂ. ಮೌಲ್ಯದ ಫೋನ್ ಅನ್ನು ಸುರಕ್ಷಿತವಾಗಿರಿಸಬಹುದು.

ಇದನ್ನೂ ಓದಿ- Alert! ನೀವೂ ನಿಮ್ಮ ಸ್ಮಾರ್ಟ್ ಫೋನ್ ಗೆ Screen Guard ಬಳಸುತ್ತೀರಾ? ಈ ಸುದ್ದಿ ಓದಲು ಮರೆಯಬೇಡಿ

* ಬ್ಲೂಟೂತ್ ಹೆಡ್‌ಫೋನ್‌ಗಳು
ನೀವು ಮಳೆಯಲ್ಲಿ ಮುಖ್ಯವಾದ ಕರೆಗಳನ್ನು ಮಾಡಬೇಕಿದ್ದರೆ  ಫೋನ್ ಕೈಯಲ್ಲಿಡಿದು ಮಾತನಾಡುವ ಬದಲು ಬ್ಲೂಟೂತ್ ಹೆಡ್‌ಫೋನ್‌ಗಳನ್ನು ಬಳಸಬಹುದು. ನಂತರ ನೀವು ನಿಮ್ಮ ಫೋನ್ ಅನ್ನು ಫಾಯಿಲ್ ಅಥವಾ ದಪ್ಪ ಬಟ್ಟೆಯ ಒಳಗೆ ಇಟ್ಟು ಜೇಬಿನಲ್ಲಿ ಅಥವಾ ಸುರಕ್ಷಿತವಾಗಿರಿಸಿಕೊಳ್ಳಬಹುದು. ಕರೆ ಬಂದಾಗ ನೀವು ಬ್ಲೂಟೂತ್ ಹೆಡ್‌ಫೋನ್‌ಗಳೊಂದಿಗೆ ಕರೆ ಸ್ವೀಕರಿಸಿ ಮಾತನಾಡಬಹುದು. ಅನೇಕ ಬ್ಲೂಟೂತ್ ಹೆಡ್‌ಫೋನ್‌ಗಳು ಜಲನಿರೋಧಕವಾಗಿ ಬರುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News