Voter ID Card: ನಿಮ್ಮ ವೋಟರ್ ಐಡಿ ಕಳೆದುಹೋಗಿದ್ಯಾ? ಈ ರೀತಿ ಸುಲಭವಾಗಿ ಡೌನ್‌ಲೋಡ್ ಮಾಡಿ

Voter ID Card: ಪ್ರಸ್ತುತ, ದೇಶಾದ್ಯಂತ ಲೋಕಸಭಾ ಚುನಾವಣೆಗಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಚುನಾವಣೆಯಲ್ಲಿ ಮತ ಹಾಕಲು ವೋಟರ್ ಐಡಿ ತುಂಬಾ ಅವಶ್ಯಕ. ಇಂತಹ ಸಂದರ್ಭದಲ್ಲಿ ನಿಮ್ಮ ವೋಟರ್ ಐಡಿ ಕಳೆದು ಹೋಗಿದ್ದರೆ ಚಿಂತಿಸುವ ಅಗತ್ಯವಿಲ್ಲ.  ಆನ್‌ಲೈನ್‌ನಲ್ಲಿ  ಸುಲಭವಾಗಿ ಮತದಾರರ ಗುರುತಿನ ಚೀಟಿಯನ್ನು  ಡೌನ್‌ಲೋಡ್ ಮಾಡಬಹುದು. 

Written by - Yashaswini V | Last Updated : Mar 28, 2024, 09:12 AM IST
  • ಚುನಾವಣೆಯಲ್ಲಿ ಯಾವುದೇ ನಾಗರೀಕರು ಮತದಾನದ ಹಕ್ಕನ್ನು ಚಲಾಯಿಸಲು ವೋಟರ್ ಐಡಿ ತುಂಬಾ ಅವಶ್ಯಕ
  • ಮತದಾರರ ಗುರುತಿನ ಚೀಟಿ ಎಂದರೆ ವೋಟರ್ ಐಡಿ ಇಲ್ಲದೆ ವೋಟ್ ಮಾಡಲು ಸಾಧ್ಯವಿಲ್ಲ.
  • ಒಂದೊಮ್ಮೆ ನಿಮ್ಮ ವೋಟರ್ ಐಡಿ ಅನ್ನು ಕಳೆದುಕೊಂಡಿದ್ದರೆ ನೀವು ಆನ್‌ಲೈನ್‌ನಲ್ಲಿ ಇದನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು
Voter ID Card: ನಿಮ್ಮ ವೋಟರ್ ಐಡಿ ಕಳೆದುಹೋಗಿದ್ಯಾ? ಈ ರೀತಿ ಸುಲಭವಾಗಿ ಡೌನ್‌ಲೋಡ್ ಮಾಡಿ title=

Voter ID Card: ಯಾವುದೇ ಚುನಾವಣೆ ಇರಲಿ ಮತದಾನ ಮಾಡುವುದು ಪ್ರತಿಯೊಬ್ಬ ನಾಗರೀಕರ ಮೂಲಭೂತ ಹಕ್ಕು ಮಾತ್ರವಲ್ಲ ಕರ್ತವ್ಯವೂ ಹೌದು. ನಮ್ಮ ಭಾರತದಲ್ಲಿ 18ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ ನಾಗರೀಕರಿಗೂ ಮತದಾನ ಮಾಡುವ ಹಕ್ಕಿದೆ. ಆದರೆ, ಮತದಾನ ಮಾಡಲು ಮತದಾರರ ಗುರುತಿನ ಚೀಟಿ ಎಂದರೆ ವೋಟರ್ ಐಡಿ ತುಂಬಾ ಅವಶ್ಯಕವಾದ ದಾಖಲೆ ಆಗಿದೆ. ಇದಿಲ್ಲದೆ ಮತ ಚಲಾಯಿಸಲು ಸಾಧ್ಯವಿಲ್ಲ. 

ಸಾಮಾನ್ಯವಾಗಿ ಜನರು ತಮ್ಮ ಪ್ರಮುಖ ದಾಖಲೆಗಳನ್ನು ಎಲ್ಲಾದರೂ ಇಟ್ಟು ಮರೆಯುತ್ತಾರೆ. ವೋಟರ್ ಐಡಿ ವಿಷಯದಲ್ಲೂ ಕೂಡ ಇದು ಸಂಭವಿಸಬಹುದು. ಒಂದೊಮ್ಮೆ, ನಿಮ್ಮ ವೋಟರ್ ಐಡಿಯನ್ನು ಎಲ್ಲಾದರು ಇಟ್ಟು ಮರೆತಿದ್ದರೆ ಅಥವಾ ಕಳೆದುಕೊಂಡಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಡೌನ್‌ಲೋಡ್ ಮಾಡಬಹುದು. 

ಇದನ್ನೂ ಓದಿ- WhatsApp: ವಾಟ್ಸಾಪ್‌ನ ಚಾಟ್ ಪಟ್ಟಿಯಲ್ಲಿ ಶೀಘ್ರವೇ ಲಭ್ಯವಾಗಲಿದೆ ಈ ಸೌಲಭ್ಯ

ಚುನಾವಣೆಯಲ್ಲಿ ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಲು ನೀವು  ಚುನಾವಣೆಗೆ ಮುನ್ನ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ... 

ಇದನ್ನೂ ಓದಿ- Google Contacts: ಗೂಗಲ್ ಕಾಂಟ್ಯಾಕ್ಟ್ ಗೆ ಹೊಸ ವೈಶಿಷ್ಟ್ಯ, ಈಗ ಲಭ್ಯವಾಗಲಿದೆ ಈ ಸೌಲಭ್ಯ
 
ಮತದಾರರ ಗುರುತಿನ ಚೀಟಿಯನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವ ಸಂಪೂರ್ಣ  ಹಂತ-ಹಂತದ ಪ್ರಕ್ರಿಯೆ ಇಲ್ಲಿದೆ:-  
ಹಂತ- 1:
ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು , ಮೊದಲು ನಿಮ್ಮ ಕಂಪ್ಯೂಟರ್ ಅಥವಾ ಫೋನ್‌ನಲ್ಲಿ ರಾಷ್ಟ್ರ ಮತದಾರರ ಸೇವಾ ಪೋರ್ಟಲ್ (https://voters.eci.gov.in/) ಗೆ ಭೇಟಿ ನೀಡಿ. 

ಹಂತ- 2: ಈ ಪೋರ್ಟಲ್‌ನಲ್ಲಿ ಬಲಭಾಗದಲ್ಲಿ ಗೋಚರಿಸುವ  ಇ-ಎಪಿಕ್ ಡೌನ್‌ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 

ಹಂತ- 3: ನಂತರ ಮುಂದಿನ ವಿಂಡೋದಲ್ಲಿ ಕಾಣುವ ಲಾಗಿನ್ ಪುಟದಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಅಥವಾ EPIC ಸಂಖ್ಯೆಯನ್ನು ನಮೂದಿಸುವ ಮೂಲಕ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ನೀವು ಹುಡುಕಬಹುದು.

ಹಂತ-4 : ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ, ನೀವು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು. ಬಳಿಕ ಓಟಿಪಿಗಾಗಿ ವಿನಂತಿಸಿ. 

ಹಂತ-5: ಬಳಿಕ ನಿಮ್ಮ ನೋಂದಾಯಿತ  ನಂಬರ್‌ನಲ್ಲಿ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಸ್ವೀಕರಿಸುತ್ತೀರಿ. 

ಹಂತ-6 : ನಿಗದಿತ ಜಾಗದಲ್ಲಿ ಒಟಿಪಿ ನಮೂದಿಸುವ ಮೂಲಕ ನೀವು ನಿಮ್ಮ ವೋಟರ್ ಐಡಿಯನ್ನು ಆನ್‌ಲೈನ್‌ನಲ್ಲಿ ತೆರೆಯಬಹುದು. ಬಳಿಕ ಅದನ್ನು ಡೌನ್‌ಲೋಡ್ ಮಾಡಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News