Happy New Year 2023: ಹೊಸ ವರ್ಷದಲ್ಲಿ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಲೆಕ್ಟ್ರಿಕ್ ಕಾರುಗಳು

Affordable Electric Cars In 2023: ತೈಲ ಬೆಲೆಗಳ ಏರಿಕೆಯಿಂದಾಗಿ ಬೇಸತ್ತಿರುವ ಜನರು ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಒಲವು ತೋರುತ್ತಿದ್ದಾರೆ. ಈ ವರ್ಷ 2022 ರಲ್ಲಿ ಅನೇಕ ಎಲೆಕ್ಟ್ರಿಕ್ ಕಾರ್ ಬಿಡುಗಡೆ ಆಗಿ ಜನರ ಮನಸೂರೆಗೊಂಡಿದ್ದವು. ಇದೀಗ ಮುಂದಿನ ವರ್ಷ 2023ರಲ್ಲೂ ಅನೇಕ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿವೆ. ವಿಶೇಷತೆ ಎಂದರೆ ಇವುಗಳ ಬೆಲೆಗಳು ಕೂಡ ಜನರನ್ನು ಆಕರ್ಷಿಸುತ್ತವೆ. 

Written by - Yashaswini V | Last Updated : Dec 14, 2022, 03:55 PM IST
  • ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಆಯ್ಕೆಗಳು ಹೆಚ್ಚುತ್ತಿವೆ.
  • ಪ್ರಸ್ತುತ ಹೆಚ್ಚಿನ ಕಂಪನಿಗಳ ಗಮನವು ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತರುವುದರ ಮೇಲೆ ಕೇಂದ್ರೀಕೃತವಾಗಿದೆ.
  • 2023ರಲ್ಲಿಯೂ ಅನೇಕ ಹೊಸ ಮಾದರಿಗಳು ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಗೆ ಪದಾರ್ಪಣೆ ಮಾಡಲು ಸಜ್ಜಾಗಿವೆ.
Happy New Year 2023: ಹೊಸ ವರ್ಷದಲ್ಲಿ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಲೆಕ್ಟ್ರಿಕ್ ಕಾರುಗಳು title=
Affordable Electric Cars

Affordable Electric Cars In 2023: ದಿನೇ ದಿನೇ ಗಗನಮುಖಿಯಾಗುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಹೈರಾಣಾಗಿರುವ ಜನರು ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಇದರಿಂದಾಗಿಯೇ ಪ್ರಸ್ತುತ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಾಗುತ್ತಿದೆ. ಹಾಗಾಗಿ ವಾಹನ ತಯಾರಿಕಾ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳ ತಯಾರಿಯತ್ತ ಹೆಚ್ಚು ಗಮನ ಹರಿಸಿವೆ. ಹೊಸ ವರ್ಷದಲ್ಲಿ ಎಂದರೆ 2023ರ ಆರಂಭದಲ್ಲಿಯೂ ಅತ್ಯುತ್ತಮ ಗುಣಮಟ್ಟದ ಮೂರು ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಗೆ ಪದಾರ್ಪಣೆ ಮಾಡಲು ಸಜ್ಜಾಗಿವೆ. ವಿಶೇಷವೆಂದರೆ ಈ ಎಲೆಕ್ಟ್ರಿಕ್ ಕಾರುಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿವೆ ಎಂದು ಹೇಳಲಾಗುತ್ತಿದೆ. 

ಮುಂದಿನ ತಿಂಗಳು ಅತ್ಯಾಕರ್ಷಕ ಬೆಲೆಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಮೂರು ಎಲೆಕ್ಟ್ರಿಕ್ ಕಾರುಗಳು:
1. ಟಾಟಾ ಟಿಯಾಗೊ ಇವಿ (Tata Tiago EV):

ಟಾಟಾ ಮೋಟಾರ್ಸ್ ಕಂಪನಿಯು ಈಗಾಗಲೇ ಟಿಯಾಗೊ ಇವಿಯನ್ನು ತನ್ನ ಅಗ್ಗದ ಎಲೆಕ್ಟ್ರಿಕ್ ಕಾರು ಎಂದು ಬಿಡುಗಡೆ ಮಾಡಿದ್ದು ಈ ಕಾರಿನ ವಿತರಣೆಯು ಮುಂದಿನ ತಿಂಗಳಿನಿಂದ ಅಂದರೆ ಜನವರಿ 2023ರಿಂದ ಪ್ರಾರಂಭವಾಗಲಿದೆ. ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಬೆಲೆ 8.49 ಲಕ್ಷದಿಂದ 11.79 ಲಕ್ಷದವರೆಗೆ ಇಇರಬಹುದು ಎಂದು ಊಹಿಸಲಾಗಿದೆ. 
ಟಾಟಾ ಟಿಯಾಗೊ ಇವಿ ಎರಡು ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಾಗಲಿದ್ದು ಒಮ್ಮೆ ಫುಲ್ ಚಾರ್ಜ್ ಮಾಡಿದ ಬಳಿಕ ಸುಮಾರು 315 ಕಿ.ಮೀ.ವರೆಗೆ ಕ್ರಮಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇದರ ಮತ್ತೊಂದು ವಿಶೇಷವೆಂದರೆ ಕೇವಲ 20 ಸಾವಿರ ರೂ.ಗಳಲ್ಲಿ ನೀವು ಈ ಕಾರ್ ಅನ್ನು ಬುಕ್ ಮಾಡಬಹುದಾಗಿದೆ.

ಇದನ್ನೂ ಓದಿ- ಹೋಂಡಾ ಆಕ್ಟಿವಾಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳಿವು

2. ಎಂಜಿ ಏರ್ ಇವಿ (MG Air EV):
ಪ್ರಸಿದ್ದ ಕಾರು ತಯಾರಕ ಎಂಜಿ ಕೂಟ ತನ್ನ ಮಿನಿ ಎಲೆಕ್ಟ್ರಿಕ್ ಕಾರ್ ಎಂಜಿ ಏರ್ ಇವಿ ಅನ್ನು ಭಾರತದಲ್ಲಿ ಪರಿಚಯಿಸಲು ಸಿದ್ಧತೆ ನಡೆಸಿದೆ. ಹೊಸ ವರ್ಷದಲ್ಲಿ ಜನವರಿ ತಿಂಗಳಿನಲ್ಲಿ ಗ್ರೇಟರ್ ನೋಯ್ಡಾದಲ್ಲಿ ನಡೆಯಲಿರುವ 2023 ಆಟೋ ಎಕ್ಸ್‌ಪೋದಲ್ಲಿ ಈ ಕಾರನ್ನು ಪರಿಚಯಿಸುವ ನಿರೀಕ್ಷೆ ಇದೆ.  ಎಂಜಿ ಏರ್ ಇವಿ ಇಂಡೋನೇಷ್ಯಾದಲ್ಲಿರುವ ವುಲಿಂಗ್ ಏರ್ ಇವಿ ಆಧಾರಿತ ಎಲೆಕ್ಟ್ರಿಕ್ ಕಾರ್ ಆಗಿದ್ದು ಇದರ ಉದ್ದ 2.9 ಮೀಟರ್ ಮತ್ತು ವೀಲ್ ಬೇಸ್ 2.01 ಮೀಟರ್ ಎನ್ನಲಾಗಿದೆ. ಈ ಕಾರು ಡಬಲ್  10.25-ಇಂಚಿನ ಸ್ಕ್ರೀನ್, 150 ಕಿಮೀ ನೈಜ ಶ್ರೇಣಿ ಮತ್ತು 25 kWh ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ ಎನ್ನಲಾಗಿದೆ.

ಇದನ್ನೂ ಓದಿ-  Car Safety Tips: ಈ ಡಿವೈಸ್ ಅಳವಡಿಸಿದರೆ ಯಾರೂ ನಿಮ್ಮ ಕಾರನ್ನು ಸುಲಭವಾಗಿ ಕಳುವು ಮಾಡಲಾರರು!

3. ಸಿಟ್ರೊಯೆನ್ ಇಸಿ3 (Citroën eC3):
ಸಿಟ್ರೊಯೆನ್ ತನ್ನ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ C3 ಅನ್ನು ಈ ವರ್ಷ ಬಿಡುಗಡೆ ಮಾಡಿತು. ಮುಂದಿನ ವರ್ಷ 2023ರಲ್ಲಿ ಭಾರತದಲ್ಲಿ ಇದರ ಎಲೆಕ್ಟ್ರಿಕ್ ಆವೃತ್ತಿ ಬಿಡುಗಡೆ ಆಗಲಿದೆ. ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿರುವ ಈ ಎಲೆಕ್ಟ್ರಿಕ್ ಕಾರಿನ ಹೆಸರು ಸಿಟ್ರೊಯೆನ್ ಇಸಿ 3 ಎಂದು ತಿಳಿದುಬಂದಿದೆ. ಇದು eCMP ಆರ್ಕಿಟೆಕ್ಚರ್ ಅನ್ನು ಆಧರಿಸಿದೆ. ಫುಲ್ ಚಾರ್ಜಿಂಗ್ ನಲ್ಲಿ ಈ ಕಾರಿನ ಚಾಲನಾ ವ್ಯಾಪ್ತಿ ಸುಮಾರು 300 ಕಿಮೀ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News