ಮಿಕ್ಸಿ ಜಾರ್‌ ಅನ್ನು ಎಷ್ಟೇ ತೊಳೆದರೂ ಬ್ಲೇಡ್ ಬಳಿ ಅಂಟಿರುವ ಜಿಡ್ಡು ಹೋಗ್ತಿಲ್ವಾ? ಹಾಗಾದ್ರೆ ಹೀಗೆ ಮಾಡಿ... ಒಂದು ಸೆಕೆಂಡ್‌ಲ್ಲಿ ಫುಲ್‌ ಕ್ಲೀನ್‌ ಆಗುತ್ತೆ!

Kitchen Cleaning Hacks: ಒಂದು ವೇಳೆ ಒತ್ತಡ ಹಾಕಿ ಸ್ವಚ್ಛ ಮಾಡಿದರೆ ಕೈಗಳಿಗೆ ಗಾಯವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಕಿಚನ್‌ ಟಿಪ್ಸ್‌ನ್ನು ಅನುಸರಿಸುವ ಮೂಲಕ ನಿಮಿಷಗಳಲ್ಲಿ ಮಿಕ್ಸರ್ ಜಾರ್‌ನ್ನು ಸ್ವಚ್ಛಗೊಳಿಸಬಹುದು.  

Written by - Bhavishya Shetty | Last Updated : Oct 5, 2024, 07:07 PM IST
    • ಮಿಕ್ಸರ್ ಜಾರ್ ಅನ್ನು ಸ್ವಚ್ಛಗೊಳಿಸುವುದು ತುಂಬಾ ಕಷ್ಟ
    • ಬ್ಲೇಡ್ ಬಳಿ ಸಂಗ್ರಹವಾಗಿರುವ ಕೊಳೆ ಮತ್ತು ಗ್ರೀಸ್ ಸುಲಭವಾಗಿ ಹೋಗಲ್ಲ
    • ಮಿಕ್ಸರ್ ಜಾರ್ ಅನ್ನು ಸ್ವಚ್ಛಗೊಳಿಸಲು ಐಸ್ ಕ್ಯೂಬ್‌ ಅನ್ನು ಜಾರ್‌ನೊಳಗೆ ಹಾಕಿ ತಿರುಗಿಸಿ
ಮಿಕ್ಸಿ ಜಾರ್‌ ಅನ್ನು ಎಷ್ಟೇ ತೊಳೆದರೂ ಬ್ಲೇಡ್ ಬಳಿ ಅಂಟಿರುವ ಜಿಡ್ಡು ಹೋಗ್ತಿಲ್ವಾ? ಹಾಗಾದ್ರೆ ಹೀಗೆ ಮಾಡಿ... ಒಂದು ಸೆಕೆಂಡ್‌ಲ್ಲಿ ಫುಲ್‌ ಕ್ಲೀನ್‌ ಆಗುತ್ತೆ! title=
Mixer jar cleaning hacks

Cleaning Hacks: ಮಿಕ್ಸರ್ ಜಾರ್ ಅನ್ನು ಸ್ವಚ್ಛಗೊಳಿಸುವುದು ತುಂಬಾ ಕಷ್ಟ. ಅದರಲ್ಲೂ ಬ್ಲೇಡ್ ಬಳಿ ಸಂಗ್ರಹವಾಗಿರುವ ಕೊಳೆ ಮತ್ತು ಗ್ರೀಸ್ ಸುಲಭವಾಗಿ ಹೋಗಲ್ಲ. ಒಂದು ವೇಳೆ ಒತ್ತಡ ಹಾಕಿ ಸ್ವಚ್ಛ ಮಾಡಿದರೆ ಕೈಗಳಿಗೆ ಗಾಯವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಕಿಚನ್‌ ಟಿಪ್ಸ್‌ನ್ನು ಅನುಸರಿಸುವ ಮೂಲಕ ನಿಮಿಷಗಳಲ್ಲಿ ಮಿಕ್ಸರ್ ಜಾರ್‌ನ್ನು ಸ್ವಚ್ಛಗೊಳಿಸಬಹುದು.

ಇದನ್ನೂ ಓದಿ: ಕಪ್ಪು ಬಣ್ಣದ ಈ ಹಣ್ಣನ್ನು 5 ದಿನಗಳ ಕಾಲ ಬಿಡದೆ ತಿಂದರೆ ಬೇರಿನಿಂದಲೇ ಬಿಳಿಕೂದಲು ಶಾಶ್ವತವಾಗಿ ಕಪ್ಪಾಗಿಸುತ್ತೆ

ಮಿಕ್ಸರ್ ಜಾರ್ ಅನ್ನು ಸ್ವಚ್ಛಗೊಳಿಸಲು ಐಸ್ ಕ್ಯೂಬ್‌ ಅನ್ನು ಜಾರ್‌ನೊಳಗೆ ಹಾಕಿ ತಿರುಗಿಸಿ. ಲಿಕ್ವಿಡ್ ಡಿಶ್‌ವಾಶ್ ಸೋಪ್ ಅನ್ನು ಸಹ ಸೇರಿಸಿ. ಸುಮಾರು ಎರಡರಿಂದ ನಾಲ್ಕು ನಿಮಿಷಗಳ ಕಾಲ ತಿರುಗಿಸಿ. ಮಿಕ್ಸರ್ ಜಾರ್‌ನಲ್ಲಿ ಐಸ್ ಮತ್ತು ಸೋಪ್ ಅನ್ನು ಒಟ್ಟಿಗೆ ಬೆರೆಸಿದರೆ, ಎಲ್ಲಾ ಕೊಳೆ ಮತ್ತು ಗ್ರೀಸ್ ಹೊರಬರುತ್ತದೆ. ಆ ಕೊಳಕು ನೀರನ್ನು ಚೆಲ್ಲಿ. ಇದಾದ ನಂತರ ಟ್ಯಾಪ್ ನೀರಿನಿಂದ ಮತ್ತೊಮ್ಮೆ ಸ್ವಚ್ಛಗೊಳಿಸಿ. ಈ ಟಿಪ್ಸ್‌ ಫಾಲೋ ಮಾಡಿದರೆ ಬ್ಲೆಂಡರ್ ಜಾರ್‌ನ ಬ್ಲೇಡ್‌ಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಅಂಟಿಕೊಂಡಿರುವ ಎಲ್ಲಾ ಕೊಳಕುಗಳನ್ನು ಸ್ವಚ್ಛವಾಗುತ್ತದೆ.

ಇದನ್ನೂ ಓದಿ: ಬಿಗ್‌ಬಾಸ್‌ಗೆ ಅವಮಾನ ಮಾಡಿದ್ರೂ ಹೊರಹೋಗ್ತಿಲ್ಲ ಜಗದೀಶ್!? ಬದಲಾಗಿ...ಈ ವಾರ ಗೇಟ್‌ಪಾಸ್‌ ಪಡೆದುಕೊಂಡವರು ಈ ಮಹಿಳಾ ಸ್ಪರ್ಧಿ!

ಒಂದು ವೇಳೆ ಈ ಟಿಪ್ಸ್‌ ಕೂಡ ಕೆಲಸ ಮಾಡದಿದ್ದರೆ, ಮಿಕ್ಸರ್ ಜಾರ್‌ಗೆ ಅಡಿಗೆ ಸೋಡಾ, ವಿನೆಗರ್ ಮತ್ತು ಸ್ವಲ್ಪ ನೀರು ಸೇರಿಸಿ. ಇದನ್ನು ಮಿಕ್ಸಿಯಲ್ಲಿ ತಿರುಗಿಸಿ. ಎಲ್ಲಾ ಕೊಳಕು ಒಂದೇ ಬಾರಿಗೆ ಸ್ವಚ್ಛಗೊಳಿಸಲ್ಪಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News