Google's Year In Search: ವಾರ್ಷಿಕ Search Report ಜಾರಿಗೊಳಿಸಿದ Google, WHF Jobs ಹಾಗೂ e-Coursesಗಳ ಅತಿ ಹೆಚ್ಚು ಹುಡುಕಾಟ

Google's Year In Search 2020 - ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ಘೋಷಿಸಲಾಗಿದ್ದ ಲಾಕ್ ಡೌನ್ ಬಳಿಕ ಭಾರತದಲ್ಲಿ ಗೂಗಲ್ (Google) ನಲ್ಲಿ Work From Home Jobಗಳ ಹುಡುಕಾಟ ಅತಿ ಹೆಚ್ಚು ನಡೆಸಲಾಗಿದೆ. ಅದರಲ್ಲೂ ವಿಶೇಷವಾಗಿ ತೆಲಂಗಾಣದಲ್ಲಿ ಇದನ್ನು ಹೆಚ್ಚಿಗೆ ಹುಡುಕಲಾಗಿದೆ.

Written by - Nitin Tabib | Last Updated : Mar 26, 2021, 11:08 AM IST
  • ಕಳೆದ ವರ್ಷ ಗೂಗಲ್ ನಲ್ಲಿ ಜನ ಹೆಚ್ಚಾಗಿ ಹುಡುಕಿದ್ದೇನು ಗೊತ್ತಾ?
  • ಯಾವ ನಗರದಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಲಾಗಿದೆ?
  • ಯಾವ ರಾಜ್ಯ ಮುಂಚೂಣಿಯಲ್ಲಿದೆ ತಿಳಿದುಕೊಳ್ಳಲು ವರದಿ ಓದಿ.
Google's Year In Search: ವಾರ್ಷಿಕ Search Report ಜಾರಿಗೊಳಿಸಿದ Google, WHF Jobs ಹಾಗೂ e-Coursesಗಳ ಅತಿ ಹೆಚ್ಚು ಹುಡುಕಾಟ title=
Google's Year In Search 2020 (File Photo)

Google's Year In Search 2020 - ಸರ್ಚ್ ಇಂಜಿನ್ ದೈತ್ಯ Google ತನ್ನ 2020ನೆ ಸಾಲಿನ ವಾರ್ಷಿಕ ಸರ್ಚ್ (Google's Year In Search 2020) ವರದಿಯನ್ನು ಜಾರಿಗೊಳಿಸಿದೆ. ಈ ವರದಿಯಲ್ಲಿ ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ಘೋಷಿಸಲಾಗಿದ್ದ ಲಾಕ್ ಡೌನ್ ಬಳಿಕ ಭಾರತದಲ್ಲಿ ಗೂಗಲ್ ನಲ್ಲಿ Work From Home Job ಹಾಗೂ ಆನ್ಲೈನ್ ಕೋರ್ಸ್ ಗಳ ಬಗ್ಗೆ ಅತಿ ಹೆಚ್ಚು ಹುಡುಕಾಟ ನಡೆಸಲಾಗಿದೆ. ಹಾಗಾದರೆ ಬನ್ನಿ ಇವುಗಳನ್ನು ಹೊರತುಪಡಿಸಿ ಗೂಗಲ್ ನಲ್ಲಿ ಇನ್ಯಾವ ಸಂಗತಿಗಳ ಹೆಚ್ಚು ಹುಡುಕಾಟ ನಡೆಸಲಾಗಿದೆ ತಿಳಿದುಕೊಳ್ಳೋಣ.

ಎಷ್ಟು ಪ್ರತಿಶತ ಹೆಚ್ಚಳ
ಗೂಗಲ್ ವರದಿಯ ಪ್ರಕಾರವರ್ಷ 2019ರ ಹೋಲಿಕೆಯಲ್ಲಿ 2020ರಲ್ಲಿ ವರ್ಕ್ ಫ್ರಮ್ ಹೋಮ್ ಜಾಬ್ (WHF Jobs) ಗಳ ಹುಡುಕಾಟದಲ್ಲಿ ಶೇ.140ರಷ್ಟು ಏರಿಕೆಯಾಗಿದೆ. ಇನ್ನೊಂದೆಡೆ ಆನ್ಲೈನ್ ಕೋರ್ಸ್ ಗಳ (Online E-Courses) ಹುಡುಕಾಟದಲ್ಲಿ ಶೇ.85ರಷ್ಟು ಏರಿಕೆ ಕಂಡುಬಂದಿದೆ. ಇದಲ್ಲದೆ ಸರ್ಟಿಫಿಕೆಟ್ ಕೋರ್ಸ್ (Certificate Course) ಗಳ ಹುಡುಕಾಟ ಶೇ.50 ರಷ್ಟು ಏರಿಕೆ ಕಂಡಿದ್ದರೆ, ಆನ್ಲೈನ್ ನಲ್ಲಿ ಸರಕುಗಳ ಮಾರಾಟ ಹೇಗೆ ಮಾಡಬೇಕು? ಇದರ ಹುಡುಕಾಟ ಶೇ.65 ರಷ್ಟು ಏರಿಕೆಯಾಗಿದೆ.

ಈ ರಾಜ್ಯಗಳಲ್ಲಿ ಅತಿ ಹೆಚ್ಚು ವರ್ಕ್ ಫ್ರಮ್ ಹೋಮ್ ಹುಡುಕಾಟ ನಡೆಸಲಾಗಿದೆ
ವರ್ಕ್ ಫ್ರಮ್ ಹೋಮ್ ಅತಿ ಹೆಚ್ಚು ಹುಡುಕಾಟ ನಡೆಸಿದ ರಾಜ್ಯಗಳಲ್ಲಿ ತೆಲಂಗಾಣ ಮೊದಲ ಸ್ಥಾನದಲ್ಲಿದೆ. ಅಲ್ಲಿ ಗೂಗಲ್ ಸರ್ಚ್ (Google Search)ನಲ್ಲಿ ಅತಿ ಹೆಚ್ಚು ಬಾರಿ ಇದು ಹುಡುಕಾಟಕ್ಕೆ ಒಳಗಾಗಿದೆ. ಇದಾದ ಬಳಿಕ ಕರ್ನಾಟಕ, ಆಂಧ್ರ ಪ್ರದೇಶ, ಪುದುಚ್ಚೇರಿ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಇದು ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾಗಿದೆ.

ಇದನ್ನೂ ಓದಿ- Gmail App New Feature: ಇನ್ಮುಂದೆ Gmailನಲ್ಲಿ e-Mail Address ಅನ್ನು Copy ಅಥವಾ Remove ಮಾಡುವುದು ಇನ್ನಷ್ಟು ಸುಲಭವಾಗಿದೆ

ಸರ್ಚ್ ವಿಷಯದಲ್ಲಿ ಈ ನಗರಗಳು ಮುಂದಿವೆ
ವರ್ಕ್ ಫ್ರಮ್ ಹೋಮ್ ಅತಿ ಹೆಚ್ಚು ಹುಡುಕಾಟ ನಡೆಸಿದ ನಗರ ಎಂದರೆ ಅದು ಮಹಾರಾಷ್ಟ್ರದ ಮೀರಾ ಬಾಯಿಂದರ್ ಆಗಿದೆ. ಇದಲ್ಲದೆ ಸಿಕಿಂದ್ರಾಬಾದ್, ಠಾಣೆ, ಹೈದ್ರಾಬಾದ್, ಪಿಂಪ್ರಿ ಚಿಂಚವಡ್, ಗಾಜಿಯಾಬಾದ್, ಬೆಂಗಳೂರು, ನವಿ ಮುಂಬೈ, ವಿಶಾಖಾಪಟ್ಟಣಂ ಹಾಗೂ ಮೈಸೂರಿನಲ್ಲಿ ವರ್ಕ್ ಫ್ರಮ್ ಹೋಮ್ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾಗಿದೆ.

ಇದನ್ನೂ ಓದಿ-YouTube: ಭಾರತದ ಯೂಟ್ಯೂಬರ್​​ಗಳಿಗೆ 'ಬಿಗ್ ಶಾಕ್' ನೀಡಿದ ಗೂಗಲ್!

ಲಾಕ್ ಡೌನ್ ಹಿನ್ನೆಲೆ ಅತಿ ಹೆಚ್ಚು ಸರ್ಚ್ ಮಾಡಲಾಗಿದೆ
ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ಕೊರೊನಾ ಮಹಾಮಾರಿಯನ್ನು ತಡೆಯಲು ಕೇಂದ್ರ ಸರ್ಕಾರ ಸಂಪೂರ್ಣ ದೆಶ್ಯಾದ್ಯಂತ ಲಾಕ್ ಡೌನ್ ಘೋಷಿಸಿತ್ತು. ಈ ಕಾರಣದಿಂದ ಲಕ್ಷಾಂತರ ಜನರು ಮನೆಯಿಂದಲೇ ತಮ್ಮ ಕೆಲಸ ಮಾಡಿದ್ದಾರೆ. ಈ ಲಾಕ್ ಡೌನ್ ಹಿನ್ನೆಲೆ ಸಾವಿರಾರು ಜನರು ತಮ್ಮ ನೌಕರಿ ಕಳೆದುಕೊಂಡಿದ್ದಾರೆ. ಈ ಕಾರಣದಿಂದ ವರ್ಕ್ ಫ್ರಮ್ ಹೋಮ್ ಜಾಬ್ ಗಳು ಹೆಚ್ಚು ಹುಡುಕಾಟಕ್ಕೆ ಒಳಗಾಗಿವೆ.

ಇದನ್ನೂ ಓದಿ-International Women's Day: ಮಹಿಳೆಯರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ Google, ಫೇಸ್‌ಬುಕ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News