Flipkart Big Billion Days Sale: ಅತ್ಯಂತ ಕಡಿಮೆ ಬೆಲೆಗೆ Apple iPhone 14 ಖರೀದಿಸಿ

Flipkart Big Saving Days Sale: ಪ್ರಮುಖ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟ ಪ್ರಾರಂಭಿಸಿದೆ. ಇಲ್ಲಿ ಐಫೋನ್ ಖರೀದಿಯ ಮೇಲೆ ನಿಮಗೆ ದೊಡ್ಡ ಮೊತ್ತದ ರಿಯಾಯತಿ ಸಿಗುತ್ತಿದೆ. ಈ ಡೀಲ್ ಬಗ್ಗೆ ತಿಳಿದುಕೊಂಡು ಇಂದೇ ನಿಮ್ಮಿಷ್ಟದ ಐಫೋನ್ ಖರೀದಿಸಿರಿ.

Written by - Puttaraj K Alur | Last Updated : Jan 15, 2023, 10:53 AM IST
  • ಪ್ರಮುಖ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟ ಪ್ರಾರಂಭಿಸಿದೆ
  • ಐಫೋನ್ ಖರೀದಿಯ ಮೇಲೆ ಗ್ರಾಹಕರಿಗೆ ಭರ್ಜರಿ ರಿಯಾಯತಿ ದೊರೆಯುತ್ತಿದೆ
  • ಕ್ಯಾಶ್‍ಬ್ಯಾಕ್ ಮತ್ತು ಎಕ್ಸ್ಚೇಂಜ್‍ ಆಫರ್ ಜೊತೆಗೆ ಹಲವಾರು ಪ್ರಯೋಜನಗಳು
Flipkart Big Billion Days Sale: ಅತ್ಯಂತ ಕಡಿಮೆ ಬೆಲೆಗೆ Apple iPhone 14 ಖರೀದಿಸಿ  title=
ಐಫೋನ್ ಖರೀದಿ ಮೇಲೆ ಭರ್ಜರಿ ಆಫರ್!

ನವದೆಹಲಿ: ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟ ಪ್ರಾರಂಭಿಸಿದೆ. ಇ-ಕಾಮರ್ಸ್ ಕಂಪನಿಯು ಹಲವಾರು ಉತ್ಪನ್ನಗಳ ಶ್ರೇಣಿಯ ಮೇಲೆ ದೊಡ್ಡ ರಿಯಾಯಿತಿ ನೀಡುತ್ತಿದೆ. ಆದರೆ ಪ್ರತಿಯೊಬ್ಬರ ಕಣ್ಣು ಇದೀಗ ಐಫೋನ್ 14 ಡೀಲ್ ಮೇಲಿದೆ. ಕಡಿಮೆ ಬೆಲೆಗೆ ಐಫೋನ್ ಖರೀದಿಸಬೇಕು ಅನ್ನೋರಿಗೆ ಇಲ್ಲಿದೆ ಸುವರ್ಣಾವಕಾಶ. ಫ್ಲಿಪ್‌ಕಾರ್ಟ್ ಕಡಿಮೆ ಬೆಲೆಗೆ ಐಫೋನ್ 14 ಮಾರಾಟ ಮಾಡುತ್ತಿದೆ.

ಹೌದು, ಐಫೋನ್ 14 ಖರೀದಿ ಮೇಲೆ ನೀವು ಪ್ರಸ್ತುತ ಸುಮಾರು 15 ಸಾವಿರ ರೂ.ಗಳ ರಿಯಾಯಿತಿ ಪಡೆಯಬಹುದು. ಐಫೋನ್ 14 ಪ್ರಸ್ತುತ 66,999 ರೂ.ಗೆ ಮಾರಾಟವಾಗುತ್ತಿದೆ. ಆದರೆ ಇದರ ಮೂಲ ಬೆಲೆ 79,900 ರೂ. ಆಗಿದೆ. iPhone 14 ಖರೀದಿಯ ಮೇಲೆ ಸುಮಾರು 13 ಸಾವಿರ ರೂ.ಗಳ ರಿಯಾಯಿತಿ ಜೊತೆಗೆ ನೀವು ICICI ಬ್ಯಾಂಕ್ ಅಥವಾ ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿಸಿದರೆ ಹೆಚ್ಚಿನ ರಿಯಾಯಿತಿ ಸಿಗುತ್ತದೆ.

ಇದನ್ನೂ ಓದಿ: ಕೇವಲ 599 ರೂಪಾಯಿ ಪಾವತಿಸಿ ಖರೀದಿಸಿ Motorola ಮತ್ತು RedmiSmartphone

ಆಫರ್‌ ಪ್ರಕಾರ ಯಾವುದೇ ಕಾರ್ಡ್ ಬಳಸುವುದರಿಂದ ನೀವು 1 ಸಾವಿರ ರೂ.ಗಳ ರಿಯಾಯಿತಿ ಪಡೆಯಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವಾಗ ಶೇ.5ರಷ್ಟು ಅನಿಯಮಿತ ಕ್ಯಾಶ್‌ಬ್ಯಾಕ್ ಕೊಡುಗೆಯೂ ಇದೆ. ಫ್ಲಿಪ್‌ಕಾರ್ಟ್ ಐಫೋನ್ 14 ಖರೀದಿಯ ಮೇಲೆ ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದ್ದು, ಇದರಲ್ಲಿ ನೀವು 20 ಸಾವಿರ ರೂ.ವರೆಗೆ ಪಡೆಯಬಹುದು.  

ಐಫೋನ್ 14 ಜೊತೆಗೆ ಫ್ಲಿಪ್‌ಕಾರ್ಟ್ ಐಫೋನ್ 14 Plus  ಸಹ ಆಫರ್‌ನಲ್ಲಿ ಮಾರಾಟ ಮಾಡುತ್ತಿದೆ. ಇದರ ಮೂಲ ಬೆಲೆ 89,900 ರೂ. ಆಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ 75,999 ರೂ. ಗೆ ಲಭ್ಯವಿದೆ. ಬ್ಯಾಂಕ್ ರಿಯಾಯಿತಿ ಮತ್ತು ಇತರ ಕೊಡುಗೆಯ ಪ್ರಯೋಜನದ ಬಳಿಕ iPhone 14 Plus ನಿಮಗೆ 69,999 ರೂ.ಗೆ ಸಿಗುತ್ತದೆ.  

ಇದನ್ನೂ ಓದಿ: LeEco S1 Pro: 11 ಸಾವಿರಕ್ಕೆ ಚೀನಾದಿಂದ ಐಫೋನ್ ಹೋಲುವ ಸ್ಮಾರ್ಟ್‍ಫೋನ್ ಬಿಡುಗಡೆ​

iPhone 14 ಮತ್ತು iPhone 14 Plus ಎರಡನ್ನೂ ಭಾರತದ Apple ಸ್ಟೋರ್‌ನಲ್ಲಿ ಆನ್‌ಲೈನ್‌ನಲ್ಲಿ ಮೂಲ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ ನೀವು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಬಳಸಿ ಖರೀದಿಸಿದರೆ 6,000 ರೂ. ಕ್ಯಾಶ್‌ಬ್ಯಾಕ್ ಸಿಗುತ್ತದೆ. ಕಳೆದ ವರ್ಷ  ಬಿಡುಗಡೆಯಾದ ಐಫೋನ್ 14  6.1-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ, A15 ಬಯೋನಿಕ್ ಪ್ರೊಸೆಸರ್, ಹಿಂಭಾಗದಲ್ಲಿ 12 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾಗಳು ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News