Flipkart Big Saving Days: ಕಡಿಮೆ ದರದಲ್ಲಿ iPhone ಖರೀದಿಸಿ, ಸಿಗಲಿದೆ 26 ಸಾವಿರ ಡಿಸ್ಕೌಂಟ್

Flipkart Big Saving Days: ನೀವು ಅಗ್ಗದ ದರದಲ್ಲಿ ಐಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ಫ್ಲಿಪ್ಕಾರ್ಟ್ನ ನ್ಯೂ ಸೇಲ್ ಉತ್ತಮ ಅವಕಾಶ ನೀಡುತ್ತಿದೆ.

Written by - Yashaswini V | Last Updated : Dec 18, 2020, 02:15 PM IST
  • ಅಗ್ಗದ ದರದಲ್ಲಿ ಐಫೋನ್ ಖರೀದಿಸಲು ಉತ್ತಮ ಅವಕಾಶ
  • ಆಪಲ್‌ನ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ
  • ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಯಲ್ಲಿ 10% ತ್ವರಿತ ರಿಯಾಯಿತಿ ಸಹ ಲಭ್ಯ
Flipkart Big Saving Days: ಕಡಿಮೆ ದರದಲ್ಲಿ  iPhone ಖರೀದಿಸಿ, ಸಿಗಲಿದೆ 26 ಸಾವಿರ ಡಿಸ್ಕೌಂಟ್ title=
buy iPhone by getting big discount (File Photo)

Flipkart Big Saving Days: ಇಂದಿನಿಂದ (ಡಿಸೆಂಬರ್ 18) ಎಲ್ಲಾ ಬಳಕೆದಾರರಿಗೆ ಹೊಸ ಸೇಲ್‌ನಲ್ಲಿ ಇ-ಕಾಮರ್ಸ್ ಕಂಪನಿಯು ಸ್ಮಾರ್ಟ್‌ಫೋನ್‌ಗಳಲ್ಲಿ ಭಾರಿ ರಿಯಾಯಿತಿ-ಕೊಡುಗೆಗಳನ್ನು ನೀಡುತ್ತಿದೆ. ನೀವು ಐಫೋನ್ ಅನ್ನು ಅಗ್ಗವಾಗಿ ಖರೀದಿಸಲು ಯೋಜಿಸುತ್ತಿದ್ದರೆ, ಫ್ಲಿಪ್ಕಾರ್ಟ್ನ ಹೊಸ ಸೇಲ್‌ನಲ್ಲಿ ಉತ್ತಮ ಅವಕಾಶವಿದೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಐಫೋನ್‌ಗಳಲ್ಲಿ ಭಾರೀ ರಿಯಾಯಿತಿಯನ್ನು ನೀಡುತ್ತಿದೆ. ಫ್ಲಿಪ್‌ಕಾರ್ಟ್‌ನ ಹೊಸ ಸೇಲ್‌ನಲ್ಲಿ ಐಫೋನ್‌ಗಳನ್ನು ಖರೀದಿಸಲು ಭಾರೀ ಡಿಸ್ಕೌಂಟ್ ಪಡೆಯಬಹುದಾಗಿದೆ.

Apple iPhone SE
ಫ್ಲಿಪ್‌ಕಾರ್ಟ್ (Flipkart) ಬಿಗ್ ಸೇವಿಂಗ್ ಡೆಲ್ ಸೇಲ್‌ನಲ್ಲಿ ಐಫೋನ್ ಎಸ್‌ಇ ಅನ್ನು 32,999 ರೂ.ಗಳಿಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಪಟ್ಟಿಯ ಪ್ರಕಾರ, ಇದರ ಮೂಲ ಬೆಲೆ 39,900 ರೂ., ಅಂದರೆ ಆಪಲ್‌ನ ಈ ಅಗ್ಗದ ಐಫೋನ್ ಸೇಲ್‌ನಲ್ಲಿ 6901 ರೂ.ಗಳ ರಿಯಾಯಿತಿ ಪಡೆಯುತ್ತಿದೆ. ಅದೇ ಸಮಯದಲ್ಲಿ ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿ ಈ ಫೋನ್ ಖರೀದಿಸಿದರೆ, ನಿಮಗೆ ಫೋನ್ 31,749 ರೂ.ಗಳಿಗೆ ಲಭ್ಯವಾಗಲಿದೆ.

Amazon Apple Days Sale: ಈ iPhone-ಟಿವಿಗಳ ಮೇಲೆ ಭಾರೀ ಡಿಸ್ಕೌಂಟ್

Apple iPhone XR
ಆಪಲ್ನ ಈ ಜನಪ್ರಿಯ ಐಫೋನ್ 38,999 ರೂ.ಗಳಿಗೆ ಲಭ್ಯವಿದೆ. ಇದರ ಮೂಲ ಬೆಲೆ 47,900 ರೂ. ಎಂದು ಹೇಳಲಾಗಿದೆ. ಅಂದರೆ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಐಫೋನ್ (iPhone) ಎಕ್ಸ್‌ಆರ್ 8901 ರೂ.ಗಳ ರಿಯಾಯಿತಿ ಪಡೆಯುತ್ತಿದೆ. ಅದೇ ಸಮಯದಲ್ಲಿ ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸುವ ಮೂಲಕ ಈ ಫೋನ್ ಅನ್ನು ಖರೀದಿಸಿದರೆ, ನಿಮಗೆ 10% ತ್ವರಿತ ರಿಯಾಯಿತಿ ಸಿಗುತ್ತದೆ.

ನಿಮ್ಮ ಫೋನ್‌ನಲ್ಲಿ ಕೂಡ ಗ್ರೀನ್ ಬ್ಲಿಂಕರ್ ಕಾಣಿಸುತ್ತಿದೆಯೇ? ಇದರ ಹಿಂದಿನ ರಹಸ್ಯವೇನು?

Apple iPhone 11 Pro
ಆಪಲ್‌ನ ಈ ಧನ್ಸು ಫೋನ್ 79,999 ರೂ.ಗಳಿಗೆ ಲಭ್ಯವಿದೆ. ಫ್ಲಿಪ್‌ಕಾರ್ಟ್ ಪಟ್ಟಿಯಲ್ಲಿ ಅದರ ಮೂಲ ಬೆಲೆಯನ್ನು 1,06,600 ರೂ. ಎಂದು ಹೇಳಲಾಗಿದೆ. ಅಂದರೆ, ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಐಫೋನ್ 11 ಪ್ರೊನಲ್ಲಿ 26,601 ರೂ.ಗಳ ರಿಯಾಯಿತಿಯನ್ನು ಪಡೆಯಲಾಗುತ್ತಿದೆ. ಹೆಚ್ಚುವರಿಯಾಗಿ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸುವ ಮೂಲಕ ಖರೀದಿಯಲ್ಲಿ 10% ತ್ವರಿತ ರಿಯಾಯಿತಿ ಸಹ ಲಭ್ಯವಿರುತ್ತದೆ. ಐಫೋನ್ 11 ಪ್ರೊ ಮೂರು 12 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾಗಳನ್ನು ಮತ್ತು 12 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

Trending News