ನವದೆಹಲಿ: ಫೇಸ್ಬುಕ್ (Facebook) ಒಂದು ಪ್ರಮುಖ ಸಾಮಾಜಿಕ ಜಾಲತಾನವಾಗಿದ್ದು, ಇದರಲ್ಲಿ ಪ್ರತಿಯೊಬ್ಬರು ಛಾಯಾಚಿತ್ರ ಹಾಗೂ ವೈಯಕ್ತಿಕ ಮಾಹಿತಿಯ ಜೊತೆಗೆ ತಮ್ಮ ಖಾತೆಯನ್ನು ಹೊಂದಿದ್ದಾರೆ. ಹೀಗಿರುವಾಗ ಅಲ್ಲಿರುವ ನಿಮ್ಮ ವೈಯಕ್ತಿಕ ಮಾಹಿತಿ ಸೇಫ್ ಆಗಿಲ್ಲ ಹಾಗೂ ಅದರ ದುರ್ಬಳಕೆಯಾಗುತ್ತಿದೆ ಎಂಬ ವಿಷಯ ನಿಮಗೆ ತಿಳಿದರೆ? ಹೌದು, ಫೇಸ್ ಬುಕ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಾರ್ಕ್ ಝಕರ್ಬರ್ಗ್ ಸೇರಿದಂತೆ ಫೇಸ್ ಬುಕ್ ನ ಸುಮಾರು 6 ಮಿಲಿಯನ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ. ಫೇಸ್ ಬುಕ್ CEO ಆಗಿರುವ ಮಾರ್ಕ್ ಝಕರ್ಬರ್ಗ್ (Facebook CEO Mark Zuckerberg) ಅವರ ಫೋನ್ ನಂಬರ್ ಕೂಡ 533 ಮಿಲಿಯನ್ ಫೇಸ್ ಬುಕ್ ಬಳಕೆದಾರರ ಡೇಟಾ ಲೀಕ್ ನಲ್ಲಿ ಶಾಮೀಲಾಗಿದೆ.
ವರದಿಗಳ ಪ್ರಕಾರ ಝಕರ್ಬರ್ಗ್ ಅವರ ಇತರೆ ಮಾಹಿತಿಗಳಾಗಿರುವ ಅವರ ಹೆಸರು, ಜನ್ಮ ದಿನಾಂಕ, ಸ್ಥಾನ, ಮದುವೆಯ ಮಾಹಿತಿ ಹಾಗೂ ಫೇಸ್ ಬುಕ್ ಬಳಕೆದಾರನ ಐಡಿಗೂ ಕೂಡ ಕನ್ನಹಾಕಲಾಗಿರುವ ದತ್ತಾಂಶಗಳಲ್ಲಿ ಶಾಮೀಲಾಗಿದೆ. ಇದರಲ್ಲಿ ಹೊಸದೇನು ಅಂತೀರಾ? ಕೇಳಿ ಹಾಗಾದ್ರೆ... ಫೇಸ್ ಬುಕ್ ಹಾಗೂ ವಾಟ್ಸ್ ಆಪ್ (WhatsApp)ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರಾಗಿರುವ ಮಾರ್ಕ್ ಝಕರ್ಬರ್ಗ್ Signal App ಬಳಕೆ ಮಾಡುತ್ತಾರೆ ಎಂಬ ಮಾಹಿತಿ ಇದರಿಂದ ಬಹಿರಂಗವಾಗಿದೆ.
ಈ ಕುರಿತು ನಡೆದ ಒಂದು ಸಂಶೋಧನೆ ಪ್ರಕಾರ, ಫೇಸ್ ಬುಕ್ ನ CEO ಆಗಿರುವ ಮಾರ್ಕ್ ಝಕರ್ಬರ್ಗ್ ತಮ್ಮ ಖಾಸಗಿತನತ್ವವನ್ನು ಗಮನದಲ್ಲಿಟ್ಟುಕೊಂಡು ಸಿಗ್ನಲ್ ಆಪ್ ಬಳಸುತ್ತಿದ್ದು, ಈ ಆಪ್ ಕೂಡ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಸೌಲಭ್ಯ ಇದೆ. ಇದರಲ್ಲಿ ವಿಶೇಷ ಸಂಗತಿ ಎಂದರೆ ಈ ಆಪ್ ಫೇಸ್ ಬುಕ್ ಕಂಪನಿಯ ಆಪ್ ಆಗಿಲ್ಲ. ಸಿಕ್ಯೋರಿಟಿ ಎಕ್ಸ್ಪರ್ಟ್ ಆಗಿರುವ ಡೇವ್ ವಾಕರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾರ್ಕ್ ಅವರ ಸೋರಿಕೆಯಗಿರುವ ಫೋನ್ ನಂಬರ್ ಅನ್ನು ಸ್ಕ್ರೀನ್ ಶಾಟ್ ನೊಂದಿಗೆ ಪೋಸ್ಟ್ ಮಾಡಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅವರು, 'ಮಾರ್ಕ್ ಝಕರ್ಬರ್ಗ್ ಸಿಗ್ನಲ್ ವೇದಿಕೆಯಲ್ಲಿದ್ದಾರೆ' ಎಂದು ಬರೆದಿದ್ದಾರೆ. ಈ ಕುರಿತಾದ ಮತ್ತೊಂದು ಟ್ವೀಟ್ ನಲ್ಲಿ ಅವರು, "533 ಮಿಲಿಯನ್ ಫೇಸ್ ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗುವುದರ ಜೊತೆಗೆ ಮಾರ್ಕ್ ಅವರ ಡೇಟಾ ಕೂಡ ಸೋರಿಕೆಯಾಗಿದೆ ಹಾಗೂ ಇದೊಂದು ಕಿರಿಕಿರಿ ನೀಡುವ ಸಂಗತಿಯಾಗಿದೆ" ಎಂದು ಬರೆದಿದ್ದಾರೆ.
In another turn of events, Mark Zuckerberg also respects his own privacy, by using a chat app that has end-to-end encryption and isn't owned by @facebook
This is the number associated with his account from the recent facebook leak. https://t.co/AXbXrF4ZxE
— Dave Walker (@Daviey) April 4, 2021
ಪ್ರಭಾವಕ್ಕೊಳಗಾದ 60 ಲಕ್ಷ ಭಾರತೀಯ ಬಳಕೆದಾರರು
ಈ ಡೇಟಾ ಲೀಕ್ ನಲ್ಲಿ ಶಾಮೀಲಾಗಿರುವ 533 ಬಳಕೆದಾರರ ಮಾಹಿತಿಯಲ್ಲಿ 32 ಮಿಲಿಯನ್ ಅಮೇರಿಕಾ, 11 ಮಿಲಿಯನ್ ಯುಕೆ ಹಾಗೂ 6 ಮಿಲಿಯನ್ ಭಾರತೀಯ ದತಾಂಶ ಕೂಡ ಶಾಮೀಲಾಗಿದೆ. ಸೋರಿಕೆಯಾಗಿರುವ ದತ್ತಾಂಶಗಳಲ್ಲಿ ಬಳಕೆದಾರರ ಕಾಂಟಾಕ್ಟ್ ನಂಬರ್ ಜೊತೆಗೆ ಅವರ ವೈಯಕ್ತಿಕ ಮಾಹಿತಿಗಲಾಗಿರುವ ಲೋಕೇಶನ್, ಸಂಪೂರ್ಣ ಹೆಸರು, ಜನ್ಮ ದಿನಾಂಕ, ಫೇಸ್ ಬುಕ್ ಐಡಿ ಹಾಗೂ ಇ-ಮೇಲ್ ಐಡಿಗಳೂ ಕೂಡ ಶಾಮೀಲಾಗಿವೆ.
ಇದನ್ನೂ ಓದಿ-Deadly Mobile Number: ಈ ನಿಗೂಢ ಮೊಬೈಲ್ ಸಂಖ್ಯೆಯ ಕಥೆ ನಿಮಗೆ ಗೊತ್ತಾ?
ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ನ ನೂತನ ಪ್ರೈವಸಿ ಪಾಲಸಿಯಿಂದ ಕಿರಿಕಿರಿಗೊಂಡ ಬಳಕೆದಾರರು, ಈ ರೀತಿಯ ಇತರೆ ವೇದಿಕೆಗಳಾಗಿರುವ ಟೆಲಿಗ್ರಾಂ ಹಾಗೂ ಸಿಗ್ನಲನತ್ತ ವಾಲುತ್ತಿರುವ ಹಿನ್ನೆಲೆ ಈ ಮಾಹಿತಿ ಬಹಿರಂಗ ಭಾರಿ ಮಹತ್ವ ಪಡೆದುಕೊಂಡಿದೆ. ವಾಟ್ಸ್ ಆಪ್ ನ ಈ ವಿವಾದಾತ್ಮಕ ನೀತಿ ಮೇ 15, 2021ರಿಂದ ಜಾರಿಗೆ ಬರಲಿದೆ. ನೂತನ ಗೌಪ್ಯತಾ ನೀತಿಯ (WhatsApp Privacy Policy) ಪ್ರಕಾರ ಫೇಸ್ ಬುಕ್ ಯಾವ ರೀತಿ ಬಿಸನೆಸ್ ಅಕೌಂಟ್ ಗಳ ಮೂಲಕ ಬಳಕೆದಾರರ ಚಾಟ್ ವರೆಗೆ ತಲುಪಲಿದೆ ಎಂಬುದನ್ನು ಹೇಳಲಾಗಿದೆ.
ಇದನ್ನೂ ಓದಿ-Facebook Data Leak: 53 ಕೋಟಿಗೂ ಅಧಿಕ ಬಳಕೆದಾರರ ಫೋನ್ ನಂಬರ್ ಡಾಟಾ ಲೀಕ್
ಫೇಸ್ ಬುಕ್ ನ ಇತರ ಸಹ ಸಂಸ್ಥಾಪಕರಾಗಿರುವ ಕ್ರಿಸ್ ಹ್ಯೂಸ್ ಹಾಗೂ ಡಸ್ಟಿನ್ ಮಾಸ್ಕೋವಿಟ್ಜ್ ಅವರ ವೈಯಕ್ತಿಕ ಮಾಹಿತಿಗಳೂ ಕೂಡ ಈ ಡೇಟಾ ಲೀಕ್ ನಲ್ಲಿ ಶಾಮೀಲಾಗಿವೆ. ಬ್ಲೂಮ್ ಬರ್ಗ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಕಳುವು ಮಾಡಲಾಗಿರುವ ಫೋನ್ ನಂಬರ್ ಡೇಟಾ ಬೇಸ್ ಅನ್ನು ಒಂದು ಹ್ಯಾಕರ್ ಫೋರಮ್ ನಲ್ಲಿ ಪೋಸ್ಟ್ ಮಾಡಲಾಗಿದೆ ಹಾಗೂ ಬೇಸಿಕ್ ಕಂಪ್ಯೂಟಿಂಗ್ ಸ್ಕಿಲ್ ಇರುವ ಯಾವುದೇ ವ್ಯಕ್ತಿ ಇದನ್ನು ಪಡೆಯಬಹುದಾಗಿದೆ. ಈ ಕುರಿತು ಮಾತನಾಡಿರುವ ಮತ್ತೋರ್ವ ಸಿಕ್ಯೂರಿಟಿ ತಜ್ಞ ಎಲೋನ್ ಗೈಲ್, ಈ ದತ್ತಾಂಶಗಳನ್ನೂ 2020 ರಲ್ಲಿ ಸೋರಿಕೆ ಮಾಡಲಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ-Gmail ಬಳಕೆದಾರರಿಗೆ ಒಳ್ಳೆಯ ಸುದ್ದಿ, ಜೂನ್ವರೆಗೆ ಉಚಿತವಾಗಿ ಸಿಗಲಿದೆ ಈ ಸೇವೆ