ನವದೆಹಲಿ: ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಟ್ವಿಟರ್ ಖರೀದಿಸಿದ ನಂತರ ಅವರ ಹೇಳಿಕೆಗಳು ಮತ್ತು ಟ್ವೀಟ್ಗಳಿಂದ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಇದೀಗ ಎಲೋನ್ ಮಸ್ಕ್ ಅವರ ಟ್ವೀಟ್ ಅಚ್ಚರಿ ಮೂಡಿಸಿದೆ. ಈ ಟ್ವೀಟ್ ನಲ್ಲಿ ಮುಂದಿನ ದಿನಗಳಲ್ಲಿ ಟ್ವಿಟರ್ ಅನ್ನು ಉಚಿತವಾಗಿ ಬಳಸುವುದಿಲ್ಲ. ಕೆಲವು ಬಳಕೆದಾರರು ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಅವರು ಸೂಚಿಸಿದ್ದಾರೆ. ಆದಾಗ್ಯೂ, ಸಾಂದರ್ಭಿಕ ಬಳಕೆದಾರರಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡ ಎಲೋನ್ ಮಸ್ಕ್:
ಮಸ್ಕ್ ಟ್ವೀಟ್ನಲ್ಲಿ, "ಟ್ವಿಟರ್ ಯಾವಾಗಲೂ ಸಾಂದರ್ಭಿಕ ಬಳಕೆದಾರರಿಗೆ ಉಚಿತವಾಗಿರುತ್ತದೆ, ಆದರೆ ಇದು ವಾಣಿಜ್ಯ/ಸರ್ಕಾರಿ ಬಳಕೆದಾರರಿಗೆ ಸ್ವಲ್ಪ ದುಬಾರಿಯಾಗಬಹುದು." ವಾಣಿಜ್ಯ ಮತ್ತು ಸರ್ಕಾರಿ ಬಳಕೆದಾರರಿಗೆ ಟ್ವಿಟರ್ ಇಂಕ್ ನಾಮಮಾತ್ರ ಶುಲ್ಕವನ್ನು ವಿಧಿಸಬಹುದು ಎಂದು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಮಂಗಳವಾರ ಹೇಳಿದ್ದಾರೆ.
Ultimately, the downfall of the Freemasons was giving away their stonecutting services for nothing
— Elon Musk (@elonmusk) May 3, 2022
ಇದನ್ನೂ ಓದಿ- ಬೇಸಿಗೆಯಲ್ಲಿ ವಿದ್ಯುತ್ ಇಲ್ಲದಿದ್ದರೂ ಮನೆ ತಂಪಾಗಿರಿಸಲು ಈ ವಿಶೇಷ ಟಿಪ್ಸ್ ಅನುಸರಿಸಿ
ಬದಲಾವಣೆಯ ಮನಸ್ಥಿತಿಯಲ್ಲಿ ಎಲೋನ್ ಮಸ್ಕ್:
ವರದಿಗಳ ಪ್ರಕಾರ, ಟ್ವಿಟರ್ ಅನ್ನು $ 44 ಶತಕೋಟಿಗೆ ಖರೀದಿಸಿದ ನಂತರ, ಎಲೋನ್ ಮಸ್ಕ್ ಈಗ ಅನೇಕ ದೊಡ್ಡ ಬದಲಾವಣೆಗಳನ್ನು ಮಾಡುವ ಮನಸ್ಥಿತಿಯಲ್ಲಿದ್ದಾರೆ. ಸಿಇಒ ಪರಾಗ್ ಅಗರ್ವಾಲ್ ಮತ್ತು ನೀತಿ ಮುಖ್ಯಸ್ಥ ವಿಜಯ ಗಡ್ಡೆ ಅವರನ್ನು ಕಂಪನಿಯಿಂದ ತೆಗೆದುಹಾಕಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- ವಾಟ್ಸಾಪ್ ಭರ್ಜರಿ ಆಫರ್! ಪೇಮೆಂಟ್ ಮೇಲೆ ಸಿಗಲಿದೆ ಕ್ಯಾಶ್ಬ್ಯಾಕ್
ಎಡಿಟ್ ವೈಶಿಷ್ಟ್ಯ ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಟ್ವಿಟ್ಟರ್:
ಜನಪ್ರಿಯ ಸಾಮಾಜಿಕ ಮಾಧ್ಯಮ ಟ್ವಿಟರ್ ತನ್ನ ಬಳಕೆದಾರರಿಗೆ ತಮ್ಮ ಟ್ವೀಟ್ಗಳಲ್ಲಿನ ತಪ್ಪುಗಳನ್ನು ಸರಿಪಡಿಸಲು ಸಹಾಯ ಮಾಡಲು ಎಡಿಟ್ ವೈಶಿಷ್ಟ್ಯವನ್ನು ಪರಿಚಯಿಸಲು ಯೋಜಿಸುತ್ತಿದೆ. ಸಾಮಾಜಿಕ ಮಾಧ್ಯಮ ವೇದಿಕೆಯು ತನ್ನ ಶೀಘ್ರದಲ್ಲೇ ಎಡಿಟ್ ಬಟನ್ ಒದಗಿಸಲು ಸಜ್ಜಾಗಿದೆ. ಅಪ್ಲಿಕೇಶನ್ ಸಂಶೋಧಕರು ಮತ್ತು ರಿವರ್ಸ್ ಎಂಜಿನಿಯರ್ ಜೇನ್ ಮಂಚುನ್ ವಾಂಗ್ ಮಂಗಳವಾರ ಹೊಸ ವೈಶಿಷ್ಟ್ಯದ ಮೊದಲ ನೋಟವನ್ನು ಬಹಿರಂಗಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.