ಸ್ಮಾರ್ಟ್ಫೋನ್ ಕ್ಲೀನಿಂಗ್ ಸಲಹೆ: ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ ಸ್ಮಾರ್ಟ್ಫೋನ್... ಸ್ಮಾರ್ಟ್ಫೋನ್... ಸ್ಮಾರ್ಟ್ಫೋನ್... ಇದ್ದೇ ಇರುತ್ತದೆ. ನಾವು ಸ್ಮಾರ್ಟ್ಫೋನ್ ಅನ್ನು ಬಳಸುವುದಷ್ಟೇ ಅಲ್ಲ, ಆಗಾಗ್ಗೆ ಅದನ್ನು ಸ್ವಚ್ಚಗೊಳಿಸುವುದು ಕೂಡ ಬಹಳ ಮುಖ್ಯ. ಸ್ಮಾರ್ಟ್ಫೋನ್ ಅನ್ನು ಕ್ಲೀನ್ ಮಾಡಲು ಹಲವು ಪರಿಹಾರಗಳನ್ನು ಬಳಸಲಾಗುತ್ತದೆ.
ಕೆಲವೊಮ್ಮೆ ಆತುರಾತುರವಾಗಿ, ಕೈಗೆ ಸಿಕ್ಕಿದ್ದರಲ್ಲಿ ಸ್ಮಾರ್ಟ್ಫೋನ್ ಅನ್ನು ಕ್ಲೀನ್ ಮಾಡುವವರೇ ಹೆಚ್ಚು. ಆದರೆ, ಇದರಿಂದ ನಿಮ್ಮ ಫೋನ್ ಹಾಳಾಗಬಹುದು. ಅದನ್ನು ಸರಿಪಡಿಸಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಈ ಲೇಖನದಲ್ಲಿ ಕೆಲವು ಸ್ಮಾರ್ಟ್ಫೋನ್ ಕ್ಲೀನಿಂಗ್ ಟೂಲ್ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇವುಗಳಿಂದ ಸ್ಮಾರ್ಟ್ಫೋನ್ ಸ್ವಚ್ಚವಾಗುವುದರ ಜೊತೆಗೆ ಅದರಲ್ಲಿ ಯಾವುದೇ ರೀತಿಯ ಹಾನಿಯೂ ಆಗುವುದಿಲ್ಲ.
ಇದನ್ನೂ ಓದಿ- Amazon Great Freedom Festival: ಕೈಗೆಟುಕುವ ದರದಲ್ಲಿ ಸ್ಮಾರ್ಟ್ಫೋನ್ ಖರೀದಿಸಲು ಬೆಸ್ಟ್ ಡೀಲ್ಗಳು
ಮೈಕ್ರೋಫೈಬರ್ ಬಟ್ಟೆ :
ನಿಮ್ಮ ಸ್ಮಾರ್ಟ್ಫೋನ್ನ ಡಿಸ್ಪ್ಲೇ ಸುರಕ್ಷಿತವಾಗಿ ಇರುವಂತೆ ನಿಮ್ಮ ಸ್ಮಾರ್ಟ್ಫೋನ್ ಕ್ಲೀನ್ ಮಾಡಲು ಬಯಸಿದರೆ ಇದಕ್ಕಾಗಿ ನೀವು ಸಿಕ್ಕ ಸಿಕ್ಕ ಬಟ್ಟೆಯಲ್ಲಿ ಫೋನ್ ಅನ್ನು ಸ್ವಚ್ಛಗೊಳಿಸುವ ಬದಲಿಗೆ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಬೇಕು. ನೀವು ಮನೆಯಲ್ಲಿ ಸಿಗುವ ಯಾವುದೋ ಬಟ್ಟೆ ಬಳಸಿ ಸ್ಮಾರ್ಟ್ಫೋನ್ ಸ್ವಚ್ಚಗೊಳಿಸಿದರೆ ಸ್ಮಾರ್ಟ್ಫೋನ್ನ ಡಿಸ್ಪ್ಲೇ ಮತ್ತು ಬಾಡಿ ಸ್ಕ್ಯ್ರಾಚ್ ಆಗಬಹುದು. ಹಾಗಾಗಿ, ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಫೋನ್ ಕ್ಲೀನ್ ಮಾಡಿ. ಏಕೆಂದರೆ ಮೈಕ್ರೋಫೈಬರ್ ಬಟ್ಟೆ ಮೃದುವಾಗಿರುತ್ತದೆ ಮತ್ತು ಧೂಳಿನ ಕಣಗಳನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ.
ಇದನ್ನೂ ಓದಿ- ಈ 5G ಸ್ಮಾರ್ಟ್ಫೋನ್ ಮೇಲೆ ಹಿಂದೆದೂ ಕಾಣದ ರಿಯಾಯಿತಿ. !
ಆಲ್ಕೋಹಾಲ್ ಕ್ಲೀನರ್:
ಕೆಲವರು ಸ್ಮಾರ್ಟ್ ಫೋನ್ ಕ್ಲೀನ್ ಮಾಡಲು ವಾಟರ್ ಬೇಸ್ಡ್ ಕ್ಲೀನರ್ ಬಳಸುತ್ತಾರೆ. ಆದರೆ ಹಾಗೆ ಮಾಡುವುದರಿಂದ ಸ್ಮಾರ್ಟ್ ಫೋನ್ ಹಾಳಾಗುತ್ತದೆ. ವಾಸ್ತವವಾಗಿ, ವಾಟರ್ ಕ್ಲೀನರ್ಗಳು ನಿಮ್ಮ ಸ್ಮಾರ್ಟ್ಫೋನ್ನೊಳಗೆ ಹೋಗುತ್ತವೆ ಮತ್ತು ಇಲ್ಲಿ ಫ್ರೀಜ್ ಆಗುತ್ತವೆ, ಇದು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ನೀರಿನ ಹಾನಿಯನ್ನು ಉಂಟುಮಾಡಬಹುದು. ಈ ಕಾರಣದಿಂದಾಗಿ, ಡಿಸ್ಪ್ಲೇ, ಮೈಕ್ರೊಫೋನ್ ಹಾನಿಗೊಳಗಾಗಬಹುದು. ಅಲ್ಲದೆ ಇದು ಸ್ಮಾರ್ಟ್ಫೋನ್ನ ಸರ್ಕ್ಯೂಟ್ ಅನ್ನು ಹಾನಿಗೊಳಿಸುತ್ತದೆ ಮತ್ತು ಅದು ಸಂಪೂರ್ಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸಬಹುದು. ಹಾಗಾಗಿ, ಸ್ಮಾರ್ಟ್ಫೋನ್ ಡಿಸ್ಪ್ಲೇ ಅನ್ನು ಸ್ವಚ್ಛಗೊಳಿಸಲು ಒಂದೆರಡು ಹನಿ ಆಲ್ಕೋಹಾಲ್ ಕ್ಲೀನರ್ ಅನ್ನು ಬಳಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.