Interesting Research: ಸಾಮಾನ್ಯವಾಗಿ ಈ ನಾಣ್ನುಡಿಯನ್ನು ಕೇಳಿ ನಿಮಗೂ ಕೂಡ ಒಂದು ಕ್ಷಣ ಮೊಸಳೆ ಹಾಗೂ ಅಲಿಗೆಟರ್ ಯಾವಾಗಲು ಸುಳ್ಳು ಕಣ್ಣೀರನ್ನು ಸುರಿಸುತ್ತವೆ ಎಂದೆನಿಸಿರಬಹುದಲ್ಲವೇ? ಆದರೆ, ಈ ಕುರಿತು ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ ಎಂಬ ಸಂಗತಿ ಕೇಳಿ ನಿಮಗೂ ಕೂಡ ಆಶ್ಚರ್ಯವಾಗಬಹುದು. ಈ ಸಂಶೋಧನೆಯಲ್ಲಿ ಹಲವು ಸಂಗತಿಗಳು ನಿಜ ಸಾಬೀತಾಗಿವೆ. ಪ್ರಾಣಿಗಳಿಂದ ಹಿಡಿದು ಮನುಷ್ಯರವರೆಗೆ ಎಲ್ಲಾ ಪ್ರಾಣಿಗಳಲ್ಲಿಯೂ ಕೂಡ ಒಂದೇ ರೀತಿಯ ರಾಸಾಯನಿಕ ಕಂಡುಬರುತ್ತದೆ. ಅಷ್ಟೇ ಅಲ್ಲ ಎಲ್ಲಾ ಪ್ರಾಣಿಗಳಲ್ಲಿ ಕಣೀರು ಟೀಯರ್ ಡಾಕ್ಟ್ ನಿಂದ ಹೊರಬರುತ್ತದೆ. 2006 ರಲ್ಲಿ ಅಮೇರಿಕಾದಲ್ಲಿ ಅಲಿಗೆಟರ್ ಗಳ ಮೇಲೆ ಸಂಶೋಧನೆಯೊಂದನ್ನು ನಡೆಸಲಾಗಿದೆ. ಹೀಗಾಗಿ ನೀವೂ ಕೂಡ ಈ ನಾಣ್ನುಡಿಯ ಹಿಂದಿನ ಸತ್ಯ ಸಂಗತಿಯನ್ನು ತಿಳಿಯಲೇಬೇಕು
ಸಂಶೋಧನೆಯಲ್ಲಿ ಮಹತ್ವದ ಅಂಶ ಬಹಿರಂಗ
ಅಧ್ಯಯನದ ಪ್ರಕಾರ ಅಲಿಗೆಟರ್ ಗೆ ನೀರಿನಿಂದ ಹೊರಗೆ ಸ್ವಲ್ಪ ದೂರದಲ್ಲಿ ಒಣ ಜಾಗದಲ್ಲಿ ಆಹಾರ ನೀಡಲಾಗಿ, ಅದರ ಕಣ್ಣಿನಿಂದ ಕಣೀರು ಬರಲು ಆರಂಭಿಸಿತು ಎನ್ನಲಾಗುತ್ತದೆ. ಬಯೋ ಸೈನ್ಸ್ ಪ್ರಕಾರ, ಮೊಸಳೆಗಳು ಆಹಾರ ಸೇವಿಸುವ ವೇಳೆ ಕಣ್ಣೀರಿಡುತ್ತವೆ ಎನ್ನಲಾಗಿದೆ ಹಾಗೂ ಇದಕ್ಕೆ ಯಾವುದೇ ಭಾವನಾತ್ಮಕ ಸಂಬಂಧವಿಲ್ಲ. ಇದೇ ಕಾರಣದಿಂದ ಮೊಸಳೆ ಕಣ್ಣೀರು ಸುರಿಸಬೇಡ ಎನ್ನಲಾಗುತ್ತದೆ.
ಇದನ್ನೂ ಓದಿ-New Traffic Rules: ಇನ್ಮುಂದೆ ಕಡಿಮೆ ವೇಗದಲ್ಲಿ ವಾಹನ ಚಲಾಯಿಸಿದರೂ ಕೂಡ ದಂಡ ಬೀಳಲಿದೆ, ಏನಿದು ಹೊಸ ನಿಯಮ?
ಈ ಎರಡೂ ಪ್ರಾಣಿಗಳು ವಿಭಿನ್ನವಾಗಿವೆ
ಮೊಸಳೆಯಾಗಲಿ ಅಥವಾ ಅಲಿಗೆಟರ್ ಆಗಿರಲಿ ಎರಡೂ ಸರಿಸ್ರಪಗಳು ಆಹಾರ ಸೇವನೆಯ ವೇಳೆ ಕಣ್ಣೀರಿಡುತ್ತವೆ. ಅಲಿಗೆಟರ್ ಮುಖ ಯು ಆಕಾರದಲ್ಲಿದ್ದರೆ, ಮೊಸಳೆಯ ಮುಖ ವಿ ಆಕಾರದಲ್ಲಿರುತ್ತದೆ. ಮೊಸಳೆಯ ಹೋಲಿಕೆಯಲ್ಲಿ ಅಲಿಗೆಟರ್ ಮುಖ ತುಂಬಾ ಅಗಲವಾಗಿರುತ್ತದೆ ಮತ್ತು ದೊಡ್ಡದಾಗಿರುತ್ತದೆ. ನೊಣಗಳು ಮೊಸಳೆ ಕಣ್ಣೀರು ಕುಡಿಯುತ್ತವೆ ಎಂದು ಕೇಳಿ ನಿಮಗೂ ಆಶ್ಚರ್ಯವಗಬಹುದು. ಮೊಸಳೆಯ ಕಣ್ಣೀರಿನಲ್ಲಿ ಪ್ರೋಟೀನ್ ಹಾಗೂ ಖನಿಜಾಂಶಗಳು ಇರುತ್ತವೆ.
ಎರಡೂ ಕೂಡ ಕಣ್ಣೀರಿಡುತ್ತವೆ
ಇದರರ್ಥ, ಮೊಸಳೆ ಅಥವಾ ಅಲಿಗೆಟರ್ ಗಳು ಭಾವನಾ ಶೂನ್ಯವಾಗಿರುತ್ತವೆ ಎಂದಲ್ಲ. ಕೇವಲ ಆಹಾರ ಸೇವಿಸುವಾಗ ಎರಡೂ ಪ್ರಾಣಿಗಳ ಕಣ್ಣೀರಿನಿಂದ ನೀರು ಬರುತ್ತದೆ. ಮನುಷ್ಯರಂತೆಯೇ ಅವೂ ಕೂಡ ಭಾವನೆಗಳನ್ನು ಹೊಂದಿರುತ್ತವೆ. ಆದರೆ, ಹಲವು ಬಾರಿ ನಾವು ಈ ನಾಣ್ನುಡಿಯನ್ನು ಕೇಳಿ ಕನ್ಫ್ಯೂಸ್ ಆಗಿ ಬಿಡುತ್ತೇವೆ ಮತ್ತು ಮೊಸಳೆಗಳಿಗೆ ಭಾವನೆಗಳೇ ಇರುವುದಿಲ್ಲ ಎಂದು ತಿಳಿದುಕೊಳ್ಳುತ್ತೇವೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.