BSNL 4G Network: BSNLನಿಂದ ಮೊಟ್ಟಮೊದಲ 4G ಕರೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

4G Networks In India - ಭಾರತ ಇಂದು ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಹೌದು, ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್,  BSNLನ ಭಾರತೀಯ 4G Network ನಿಂದ ಮೊದಲ ಕರೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

Written by - Nitin Tabib | Last Updated : Oct 10, 2021, 10:46 PM IST
  • ಮೇಡ್ ಅಂಡ್ ದಿಸೈನ್ದ್ ಇನ್ ಇಂಡಿಯಾ 4G ಸೇವೆ ಆರಂಭ.
  • ಕೇಂದ್ರ ಸಚಿವರ ಮೊಟ್ಟಮೊದಲ 4G ಕರೆ.
  • ಆತ್ಮನಿರ್ಭರ ಭಾರತದತ್ತ ಮತ್ತೊಂದು ಹೆಜ್ಜೆ.
BSNL 4G Network: BSNLನಿಂದ ಮೊಟ್ಟಮೊದಲ 4G ಕರೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ title=
BSNL 4G Network (File Photo)

ನವದೆಹಲಿ: BSNL India - ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಭಾನುವಾರ ಬಿಎಸ್‌ಎನ್‌ಎಲ್‌ನ ಭಾರತೀಯ 4 ಜಿ ನೆಟ್‌ವರ್ಕ್ (BSNL 4G) ನಿಂದ ಮೊದಲ ಕರೆಯನ್ನು ಮಾಡಿದ್ದಾರೆ  ಮತ್ತು ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸ್ವಾವಲಂಬಿ ಭಾರತದ (Atmanirbhar Bharat) ದೃಷ್ಟಿಕೋನ ರೂಪುಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ-BSNL Plans: BSNLನ ಹೊಸ ಸೂಪರ್ ಸ್ಟಾರ್ ಪ್ಲಾನ್, 2000GB ಡೇಟಾ ಜೊತೆಗೆ ಹಲವು ಸೌಲಭ್ಯ, ಬೆಲೆ ಕೇಳಿ ದಂಗಾಗುವಿರಿ

ದೀರ್ಘ ಕಾಲದಿಂದ BSNL 4G Network ಮೇಲೆ ಕಾರ್ಯನಿರ್ವಹಿಸುತ್ತಿದೆ
BSNL ಭಾರತೀಯ ತಂತ್ರಜ್ಞಾನದ ಸಹಾಯದಿಂದ 4G ನೆಟ್‌ವರ್ಕ್‌ ರೂಪಿಸಲು ದೀರ್ಘಕಾಲ ಕೆಲಸ ಮಾಡುತ್ತಿದೆ. ಈ ವರ್ಷದ ಜನವರಿಯಲ್ಲಿ, ಮುಂಬರುವ 4 ಜಿ ಟೆಂಡರ್‌ನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಭಾರತೀಯ ಕಂಪನಿಗಳಿಂದ ಬಿಎಸ್‌ಎನ್‌ಎಲ್ ಪ್ರೂಫ್ ಆಫ್ ಕಾನ್ಸೆಪ್ಟ್ (ಪಿಒಸಿ) ಗಾಗಿ ಆಸಕ್ತಿಯನ್ನು ವ್ಯಕ್ತಪಡಿಸಿತ್ತು. ಇಲಾಖೆಯ ಮಾಹಿತಿಯ ಪ್ರಕಾರ, ಜುಲೈನಲ್ಲಿ 5 ಬಿಡ್ಡರ್‌ಗಳಿಗೆ ಉದ್ದೇಶ ಪತ್ರ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ-BSNL ಗ್ರಾಹಕರಿಗೆ ಸಿಹಿ ಸುದ್ದಿ : ಈ ಪ್ಲಾನ್ ರಿಚಾರ್ಜ್ ಮಾಡಿ 95 ದಿನಗಳವರೆಗೆ ಪ್ರತಿದಿನ 3GB ಡೇಟಾ, ಅನಿಯಮಿತ ಕರೆ!

ಇಲ್ಲಿ ಗಮನಿಸಬೇಕಾದ  ಮುಖ್ಯ ಸಂಗತಿಯೆಂದರೆ BSNL 4G ಭಾರತದ ಹಲವು ಪ್ರದೇಶಗಳಲ್ಲಿ ಲೈವ್ ಆಗಿದೆ ಮತ್ತು ಕಂಪನಿಯು ಈಗ ತನ್ನ ಗ್ರಾಹಕರಿಗೆ ಡಿಸೆಂಬರ್ 31 ರವರೆಗೆ ಉಚಿತ 4G ಸಿಮ್ ನೀಡುತ್ತಿದೆ.

ಇದನ್ನೂ ಓದಿ-BSNL ಅದ್ಭುತ ಪ್ಲಾನ್: ನಿತ್ಯ 5 ಜಿಬಿ ಇಂಟರ್ನೆಟ್ ಜೊತೆಗೆ ಸಿಗಲಿದೆ ಈ ಸೌಲಭ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News