Airtel Best Recharge Plan - ಮೊಬೈಲ್ ಚಂದಾದಾರರ ಸಂಖ್ಯೆಗೆ ಸಂಬಂಧಿಸಿದಂತೆ, ರಿಲಾಯನ್ಸ್ ಜಿಯೋ ನಂತರ ಭಾರತಿ ಏರ್ಟೆಲ್ (Bharti Airtel) ಬರುತ್ತದೆ. ಏರ್ಟೆಲ್ ತನ್ನ ಗ್ರಾಹಕರಿಗೆ ವಿಭಿನ್ನ ಸಿಂಧುತ್ವದ ಹೊಂದಿರುವ ಹಲವು ಯೋಜನೆಗಳನ್ನು ನೀಡುತ್ತಿದೆ ಕಂಪನಿಯ ಅನೇಕ ಯೋಜನೆಗಳು ಬಹುತೇಕ ಒಂದೇ ರೀತಿಯ ಬೆಲೆ ಹೊಂದಿವೆ. ಇಂತಹ ಪರಿಸ್ಥಿತಿಯಲ್ಲಿ, ಗ್ರಾಹಕರಿಗೆ ಸರಿಯಾದ ಯೋಜನೆಯನ್ನು ಆಯ್ಕೆ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ಇಂದು ನಾವು ಏರ್ಟೆಲ್ನ ಪ್ಲಾನ್ (Airtel Recharge Plan) ವೊಂದರ ಮಾಹಿತಿಯನ್ನು ನೀಡಲಿದ್ದು, ಇದರಲ್ಲಿ ನಿಮಗೆ 1 ರೂಪಾಯಿಗೂ ಕೂಡ ಕಮ್ಮಿ ಬೆಲೆಗೆ ಡಬಲ್ ಡೇಟಾ ಪ್ರಯೋಜನವನ್ನು (Recharge Plan With Double Data Benefit) ಪಡೆಯಬಹುದು. ರೂ.298 ಬೆಲೆಯ ಈ ಪ್ಲಾನ್ ಅನ್ನು ನೀವು 299 ರೂ.ಗೆ ಹೋಲಿಸಿದರೆ ಹೆಚ್ಚಿನ ಡೇಟಾ ಮತ್ತು ಬಹುತೇಕ ಸಮಾನ ವ್ಯಾಲಿಡಿಟಿಯನ್ನು ನೀಡುತ್ತದೆ.
Airtel ರೂ.299 ರ ಪ್ಲಾನ್
30 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಯೋಜನೆಯಲ್ಲಿ ಗ್ರಾಹಕರಿಗೆ 30 ಜಿಬಿ ಡೇಟಾ ನೀಡಲಾಗಿದೆ. ವಿಶೇಷವೆಂದರೆ ಈ ಡೇಟಾವು ಯಾವುದೇ ದೈನಂದಿನ ಮಿತಿಯೊಂದಿಗೆ ಬರುವುದಿಲ್ಲ. ಈ ಡೇಟಾವನ್ನು 30 ದಿನಗಳಲ್ಲಿ ಯಾವ ಸಮಯದಲ್ಲಿ ಬೇಕಾದರೂ ಕೂಡ ನೀವು ಬಳಸಬಹುದು. ಯೋಜನೆಯಲ್ಲಿ ಎಲ್ಲಾ ನೆಟ್ವರ್ಕ್ಗಳಲ್ಲಿ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ಗಳನ್ನು ನೀಡಲಾಗಿದೆ. ಇದರ ಜೊತೆಗೆ, ಗ್ರಾಹಕರು Prime Video Mobile Edition, Free Hellotunes ಹಾಗೂ Wynk Musicಗೆ ಉಚಿತ ಪ್ರವೇಶವನ್ನು ನೀವು ಪಡೆಯಬಹುದು.
Airtel ರೂ.298ರ ಪ್ಲಾನ್
ಈ ಪ್ಲಾನ್ ಕೂಡ ಸುಮಾರು ಒಂದು ತಿಂಗಳ ಕಾಲ ಸಿಂಧುತ್ವ ಹೊಂದಿದೆ. ಈ ಪ್ಲಾನ್ ನಲ್ಲಿ 28 ದಿನಗಳ ಅವಧಿಗೆ ನಿಮಗೆ ನಿತ್ಯ ಎರಡು ಜಿಬಿ ಡೇಟಾ ನೀಡಲಾಗುತ್ತದೆ. ಈ ರೀತಿಯಾಗಿ ಒಟ್ಟು ಡೇಟಾ 56 ಜಿಬಿ ಡೇಟಾ ನಿಮಗೆ ಸಿಗಲಿದೆ. ಯೋಜನೆಯಲ್ಲಿ ಎಲ್ಲಾ ನೆಟ್ವರ್ಕ್ಗಳಲ್ಲಿ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ಗಳನ್ನು ಸಹ ನೀಡಲಾಗಿದೆ. ಇದರ ಜೊತೆಗೆ, ಗ್ರಾಹಕರಿಗೆ Prime Video Mobile Edition, Free Hellotunes ಹಾಗೂ Wynk Music ಲಾಭ ಕೂಡ ಸಿಗಲಿದೆ.
ಇದನ್ನೂ ಓದಿ-WhatsApp Stop Alert! WhatsApp ಬಳಕೆದಾರರಿಗೊಂದು ಶಾಕಿಂಗ್ ಸುದ್ದಿ, ಶೀಘ್ರದಲ್ಲಿಯೇ ವಾಟ್ಸ್ ಆಪ್ ಬಂದ್ !
ಯಾವ ಯೋಜನೆಯಲ್ಲಿ ನಿಮಗೆ ಲಾಭ ಸಿಗಲಿದೆ?
ಹಾಗೆ ನೋಡಿದರೆ ಎರಡು ಯೋಜನೆಗಳು ಒಂದೇ ರೀತಿಯದ್ದಾಗಿವೆ. ವ್ಯಾಲಿಡಿಟಿ ವಿಷಯದಲ್ಲಿ 299ರ ಯೋಜನೆಯಲ್ಲಿ 30 ದಿನಗಳು ಸಿಕ್ಕರೆ, 298ರ ಯೋಜನೆಯಲ್ಲಿ 28 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಆದರೆ, ಎರಡೂ ಯೋಜನೆಯ ಡೇಟಾದಲ್ಲಿ ಅಂತರವಿದ. ಮೊದಲ ಯೋಜನೆಯಲ್ಲಿ ನಿಮಗೆ 26ಜಿಬಿ ಡೇಟಾ ದೊರೆತರೆ, ಎರಡನೆಯ ಯೋಜನೆಯಲ್ಲಿ 56ಜಿಬಿ ಡೇಟಾ ಸಿಗುತ್ತದೆ. ಎರಡು ಯೋಜನೆಗಳು ಉಚಿತ ಕಾಲಿಂಗ್ ಹಾಗೂ SMSಗಳೊಂದಿಗೆ ಬರುತ್ತವೆ. ಹೀಗಿರುವಾಗ ನಿತ್ಯ ನಿಮ್ಮೆ ಡೇಟಾ ಬಳಕೆ 2 ಜಿಬಿಗಿಂತ ಕಮ್ಮಿಯಾಗಿದ್ದಾರೆ ರೂ.298ರ ಯೋಜನೆ ನಿಮಗೆ ಲಾಭಕಾರಿಯಾಗಿದೆ.
ಇದನ್ನೂ ಓದಿ-Child Safety Updates: ತೀವ್ರ ಟೀಕೆಯ ನಂತರ ವಿಳಂಬಗೊಳಿಸಲು ಮುಂದಾದ Apple
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.