Pink WhatsApp: ಬಳಕೆದಾರರಲ್ಲಿ ಭೀತಿ ಸೃಷ್ಟಿಸಿದ ಪಿಂಕ್ ವಾಟ್ಸಾಪ್!

WhatsApp: ಪ್ರಸ್ತುತ ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್‌ನಲ್ಲಿ ಹೊಸ ಸಂದೇಶವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದುವೇ, 'ಪಿಂಕ್ ವಾಟ್ಸಾಪ್' ಅನ್ನು ಡೌನ್‌ಲೋಡ್ ಮಾಡುವ ಲಿಂಕ್. ಪಿಂಕ್ ವಾಟ್ಸಾಪ್ ಕ್ರೇಜ್ ನಿಂದಾಗಿ ನೀವೇನಾದರೂ ಈ ಲಿಂಕ್ ಡೌನ್‌ಲೋಡ್ ಮಾಡಿದರೆ ಸಂಕಷ್ಟಕ್ಕೆ ಸಿಲುಕಬಹುದು ಎಚ್ಚರ!

Written by - Yashaswini V | Last Updated : Jun 23, 2023, 09:33 AM IST
  • ಪಿಂಕ್ ವಾಟ್ಸಾಪ್ ಬಗ್ಗೆ ಮುಂಬೈ ಪೊಲೀಸರ ಎಚ್ಚರಿಕೆ
  • ಇದೊಂದು ವೈರಸ್. ಇದು ಪಿಂಕ್ ವಾಟ್ಸಾಪ್ ಸ್ಕ್ಯಾಮ್ ಎಂದು ಎಚ್ಚರಿಸಿರುವ ಮುಂಬೈ ಪೊಲೀಸ್
  • ಪ್ಲಾಟ್‌ಫಾರ್ಮ್‌ಗೆ ಲಿಂಕ್ ಮಾಡಲಾದ ಈ ಹೊಸ ವಂಚನೆಯ ಬಗ್ಗೆ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
Pink WhatsApp: ಬಳಕೆದಾರರಲ್ಲಿ ಭೀತಿ ಸೃಷ್ಟಿಸಿದ ಪಿಂಕ್ ವಾಟ್ಸಾಪ್! title=
Pink WhatsApp scam

Pink WhatsApp: ವಿಶ್ವದ ಜನಪ್ರಿಯ ಸಂದೇಶ ಸಾಧನವಾಗಿರುವ ವಾಟ್ಸಾಪ್ ಇತ್ತೀಚಿನ ದಿನಗಳಲ್ಲಿ ನಕಲಿ ಸುದ್ದಿ ಮತ್ತು ವಂಚನೆಗಳಿಗೆ ಹಾಟ್‌ಸ್ಪಾಟ್ ಆಗಿ ಮಾರ್ಪಟ್ಟಿದೆ. ಪ್ರಪಂಚದ ಜನಪ್ರಿಯ ಅಪ್ಲಿಕೇಶನ್ ಅನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ವಂಚಕರು ಸುಳ್ಳು ಸುದ್ದಿಯನ್ನು ಹರಡಲು ಮತ್ತು ಬಳಕೆದಾರರನ್ನು ವಂಚಿಸಲು ಇದರ ಜನಪ್ರಿಯತೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. 

ಪ್ರಸ್ತುತ,  ವಾಟ್ಸಾಪ್‌ನಲ್ಲಿ ಹೊಸ ಸಂದೇಶವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅದರಲ್ಲಿ "ಪಿಂಕ್ ವಾಟ್ಸಾಪ್" ಡೌನ್‌ಲೋಡ್ ಮಾಡಲು ಲಿಂಕ್ ಕಳುಹಿಸಲಾಗುತ್ತಿದೆ. ಇದರಲ್ಲಿ ಹೊಸ ವೈಶಿಷ್ಟ್ಯಗಳೊಂದಿಗೆ ವಾಟ್ಸಾಪ್‌ನ ಹೊಸ ಲುಕ್ ಆನಂದಿಸಲು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಕೇಳಲಾಗುತ್ತಿದೆ. ಪಿಂಕ್ ವಾಟ್ಸಾಪ್ ಕ್ರೇಜ್ ನಿಂದಾಗಿ ನೀವೇನಾದರೂ ಈ ಲಿಂಕ್ ಡೌನ್‌ಲೋಡ್ ಮಾಡಿದರೆ ಸಂಕಷ್ಟಕ್ಕೆ ಸಿಲುಕಬಹುದು ಎಚ್ಚರ! ಈ ಬಗ್ಗೆ ಮುಂಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಹೌದು, ಪಿಂಕ್ ವಾಟ್ಸಾಪ್ ಬಗ್ಗೆ ಎಚ್ಚರಿಕೆ ನೀಡುರುವ ಮುಂಬೈ ಪೊಲೀಸರು ಇದೊಂದು ವೈರಸ್. ಇದು ಪಿಂಕ್ ವಾಟ್ಸಾಪ್ ಸ್ಕ್ಯಾಮ್ ಆಗಿದೆ. ಪ್ಲಾಟ್‌ಫಾರ್ಮ್‌ಗೆ ಲಿಂಕ್ ಮಾಡಲಾದ ಈ ಹೊಸ ವಂಚನೆಯ ಬಗ್ಗೆ ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.  ವಾಟ್ಸಾಪ್ ಬಳಕೆದಾರರು ಯಾವುದೇ ಕಾರಣಕ್ಕೂ ಇಂತಹ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ. 

ಇದನ್ನೂ ಓದಿ- Instagram ಸ್ಟೋರಿಯನ್ನು ಡೌನ್‌ಲೋಡ್ ಮಾಡಿ ಸೇವ್ ಮಾಡುವುದು ಹೇಗೆ?

ಏನಿದು ಪಿಂಕ್ ವಾಟ್ಸಾಪ್ ಸ್ಕ್ಯಾಮ್? 
ಪಿಂಕ್ ವಾಟ್ಸಾಪ್ ಸ್ಕ್ಯಾಮ್ ಬಗ್ಗೆ ಎಚ್ಚರಿಕೆ ನೀಡಿರುವ ಮುಂಬೈ ಪೊಲೀಸರು, ವಾಟ್ಸಾಪ್‌ನಲ್ಲಿ ಬಳಕೆದಾರರ ದಾರಿ ತಪ್ಪಿಸುವ ಅಥವಾ ಅವರನ್ನು ತಪ್ಪು ದಾರಿಗೆಳೆಯುವ ಸಂದೇಶವೊಂದು ತುಂಬಾ ಹರಿದಾಡುತ್ತಿದೆ. ಇದು ಉದ್ದೇಶಪೂರ್ವಕವಾಗಿ ನವೀಕರಣವನ್ನು ಪರಿಚಯಿಸುತ್ತದೆ ಮತ್ತು ಬಳಕೆದಾರರಿಗೆ ಪಿಂಕ್ ವಾಟ್ಸಾಪ್ ಆಸೆ ತೋರಿಸುವ ಮೂಲಕ ಹೊಸ ವೈಶಿಷ್ಟ್ಯಗಳ ಭರವಸೆಯನ್ನು ನೀಡುತ್ತದೆ. ಆದರೆ,  ಈ ಲಿಂಕ್ ಅನ್ನು ಕ್ಲಿಕ್ ಮಾಡುವುದರಿಂದ ಬಳಕೆದಾರರ ಫೋನ್ ಮೇಲೆ ಫಿಶಿಂಗ್ ದಾಳಿಗೆ ಕಾರಣವಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. 

ವೈರಲ್ ಸಂದೇಶದಲ್ಲಿ ನೀಡಿರುವ ಲಿಂಕ್ ಕ್ಲಿಕ್ ಮಾಡಿದರೆ ಏನಾಗುತ್ತದೆ? 
>> ಈ ಲಿಂಕ್ ಕ್ಲಿಕ್ ಮಾಡಿ ಅದನ್ನು ಡೌನ್‌ಲೋಡ್ ಮಾಡುವುದೃಂದ ಬಳಕೆದಾರರ ಸೂಕ್ಷ್ಮ ಮಾಹಿತಿ ಕಳುವಾಗಬಹುದು. 
>> ಅವರ ಸಂಪರ್ಕ ಸಂಖ್ಯೆಗಳು ಮತ್ತು ಉಳಿಸಿದ ಚಿತ್ರಗಳ ಅನಧಿಕೃತವಾಗಿ ಬಳಕೆಯಾಗಬಹುದು.
>> ಬ್ಯಾಂಕ್ ಬಾಲನ್ಸ್ ಖಾಲಿ ಆಗಬಹುದು. 
>> ಸ್ಪ್ಯಾಮ್ ದಾಳಿಗೆ ಒಳಗಾಗಬಹುದು. 

ಇದನ್ನೂ ಓದಿ- WhatsApp ನಿಮ್ಮ ಬೇಹುಗಾರಿಕೆ ನಡೆಸುತ್ತಿದೆಯೇ? ಈ ಬಗ್ಗೆ ಸತ್ಯಾಂಶ ಬಿಚ್ಚಿಟ್ಟ ಗೂಗಲ್ ಹೇಳಿದ್ದೇನು?

ಇದರಿಂದ ಸುರಕ್ಷಿತವಾಗಿರುವುದು ಹೇಗೆ? 
ವಾಟ್ಸಾಪ್ ಬಳಕೆದಾರರು ವೈರಲ್ ಪಿಂಕ್ ವಾಟ್ಸಾಪ್ ಹಗರಣದಲ್ಲಿ ಸಿಲುಕಿಕೊಳ್ಳುವುದನ್ನು ಹೇಗೆ ತಪ್ಪಿಸಬಹುದು ಎಂಬ ಬಗ್ಗೆಯೂ ಕೂಡ ಪೊಲೀಸರು ಸಲಹೆ ನೀಡಿದ್ದಾರೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ. 
* ಮೊದಲನೆಯದಾಗಿ, ನಿಮ್ಮ ಮೊಬೈಲ್‌ನಲ್ಲಿ ನಕಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ್ದರೆ, ತಕ್ಷಣ ಅದನ್ನು ಅನ್‌ಇನ್‌ಸ್ಟಾಲ್ ಮಾಡಿ.
* ಯಾವುದೇ ಅಪರಿಚಿತ ಮೂಲಗಳಿಂದ ಸ್ವೀಕರಿಸಿದ ಲಿಂಕ್‌ಗಳ ದೃಢೀಕರಣವನ್ನು ನೀವು ಪರಿಶೀಲಿಸುವವರೆಗೆ ಕ್ಲಿಕ್ ಮಾಡುವುದನ್ನು ತಪ್ಪಿಸಿ.
* ಅಧಿಕೃತ Google Play Store ಅಥವಾ iOS ಆಪ್ ಸ್ಟೋರ್ ಅಥವಾ ಕಾನೂನುಬದ್ಧ ವೆಬ್‌ಸೈಟ್‌ಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ. 
* ಸರಿಯಾದ ದೃಢೀಕರಣ ಅಥವಾ ಪರಿಶೀಲನೆ ಇಲ್ಲದೆ ಇತರರಿಗೆ ಯಾವುದೇ ಲಿಂಕ್ ಅಥವಾ ಸಂದೇಶವನ್ನು ಫಾರ್ವರ್ಡ್ ಮಾಡಬೇಡಿ.
* ಲಾಗಿನ್ ರುಜುವಾತುಗಳು, ಪಾಸ್‌ವರ್ಡ್‌ಗಳು, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳು ಸೇರಿದಂತೆ ಅಂತಹ ಯಾವುದೇ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಯಾರೊಂದಿಗಾದರೂ ಹಂಚಿಕೊಳ್ಳುವ ತಪ್ಪನ್ನು ಎಂದಿಗೂ ಮಾಡಬೇಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News