Car Wash Tips At Home: ಬೇಸಿಗೆ ಆರಂಭಕ್ಕೂ ಮೊದಲೇ ದೇಶದ ಹಲವು ಭಾಗಗಳಲ್ಲಿ ನೀರಿಗೆ ಹಾಹಾಕಾರ ಏರ್ಪಟ್ಟಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿನಿಂದ (Bengaluru Water Crisis) ಜನರು ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಕಾರ್ ವಾಶ್ ಬಗ್ಗೆ ಖಂಡಿತವಾಗಿಯೂ ಚಿಂತಿಸಲೂ ಸಾಧ್ಯವಿಲ್ಲ. ಆದರೆ, ನೀವು ಕೆಲವು ಸರಳ ವಿಧಾನಗಳನ್ನು ಅನುಸರಿಸಿ ನೀರನ್ನು ವ್ಯರ್ಥಮಾಡದೆ ಸುಲಭವಾಗಿ ನಿಮ್ಮ ಕಾರ್ ವಾಶ್ ಮಾಡಬಹುದು.
ಹೌದು, ಕಾರ್ ಇರಲಿ ಅಥವಾ ಇನ್ನಾವುದೇ ವಾಹನವಿರಲಿ ಧೂಳಾಗುವುದು ಸರ್ವೇ ಸಾಮಾನ್ಯ. ಅದರಲ್ಲೂ ಬೇಸಿಗೆ ಕಾಲದಲ್ಲಿ ವಾಹನಗಳು ಕೊಳಕಾಗುವುದು ಸಾಮಾನ್ಯಕ್ಕಿಂತ ಕೊಂಚ ಹೆಚ್ಚೇ. ದ್ವಿಚಕ್ರ ವಾಹನಗಳಾದರೆ ಮನೆಯಲ್ಲಿಯೇ ಆಗಾಗ್ಗ ಸ್ವಚ್ಛಗೊಳಿಸುತ್ತೇವೆ. ಆದರೆ, ಕಾರ್ ಕ್ಲೀನ್ ಮಾಡುವುದು ಸುಲಭವಲ್ಲ, ಅದಕ್ಕಿಂತ ಹೆಚ್ಚಾಗಿ ಕಾರ್ ಕ್ಲೀನ್ ಮಾಡಲು ಹೆಚ್ಚು ನೀರು ಖರ್ಚಾಗುತ್ತದೆ. ಹಾಗಾಗಿಯೇ, ಕಾರ್ ಸ್ವಚ್ಛಗೊಳಿಸಲು ಕಾರನ್ನು ಕಾರ್ ಸೆಂಟರ್‌ಗೆ ಕೊಂಡೊಯ್ಯುಲಾಗುತ್ತದೆ.
ಹಾಗಂತ, ಪ್ರತಿ ಬಾರಿ ಕಾರ್ ಸೆಂಟರ್‌ಗೆ ಕೊಂಡೊಯ್ಯ್ದು ಕಾರ್ ಸ್ವಚ್ಛಗೊಳಿಸುವುದರಿಂದ ಸಮಯದ ಜೊತೆಗೆ ಹಣವೂ ವ್ಯರ್ಥವಾಗುತ್ತದೆ. ಹಾಗೆಂದು ಆಗಾಗ್ಗೆ ವಾಹನವನ್ನು ಸ್ವಚ್ಛಗೊಳಿಸದೆ ಬಿಟ್ಟರೆ ಅದು ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಆದರೆ, ನೀವು ಮನೆಯಲ್ಲಿ ಕೆಲವು ಸರಳ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಕಾರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
ಇದನ್ನೂ ಓದಿ- WhatsApp: ಹ್ಯಾಕರ್‌ಗಳಿಂದ ರಕ್ಷಣೆಗಾಗಿ ವಾಟ್ಸಾಪ್‌ನಲ್ಲಿ ಈ ಒಂದೇ ಒಂದು ಸೆಟ್ಟಿಂಗ್ ಬದಲಾಯಿಸಿ!
ಮನೆಯಲ್ಲಿ ಕಾರ್ ಕ್ಲೀನ್ ಮಾಡಲು ಇಲ್ಲಿದೆ ಸುಲಭ ವಿಧಾನ :
ಕಾರ್ ಶಾಂಪೂ ಬಳಕೆ:
ಕಾರ್ ಕ್ಲೀನ್ ಮಾಡಲು ಸಾಬೂನಿಗಿಂತ ಕಾರ್ ಶಾಂಪೂವನ್ನು ಬಳಸುವುದು ಹೆಚ್ಚು ಸೂಕ್ತ. ಅದರಲ್ಲೂ ನೇರವಾಗಿ ಶಾಂಪೂವನ್ನು ಕಾರಿಗೆ ಅನ್ವಯಿಸುವ ಬದಲು ಒಂದು ಬಕೆಟ್ ನಲ್ಲಿ ಅರ್ಧದಷ್ಟು ನೀರನ್ನು ತೆಗೆದುಕೊಂಡು ಅದರಲ್ಲಿ ಕಾರ್ ಶಾಂಪೂವನ್ನು ಹಾಕಿ ಕಲಕಿ. ನಂತರ ಒಂದು ಬಟ್ಟೆಯನ್ನು ಅದರಲ್ಲಿ ಅಡ್ಡಿ ಕಾರ್ ಅನ್ನು ಸ್ವಚ್ಛಗೊಳಿಸಬಹುದು.
ಶುದ್ಧವಾದ ನೀರು:
ಒಮ್ಮೆ ಶಾಂಪೂ ಮಿಶ್ರಿತ ನೀರಿನಿಂದ ಕಾರನ್ನು ಸ್ವಚ್ಛಗೊಳಿಸಿದ ಬಳಿಕ, ಇನ್ನೊಂದು ಬಕೆಟ್ ನಲ್ಲಿ ಸ್ವಚ್ಛವಾದ ನೀರನ್ನು ತೆಗೆದುಕೊಂಡು ಮತ್ತೊಂದು ಶುದ್ಧವಾದ ಬಟ್ಟೆಯನ್ನು ಬಳಸಿ ಈ ನೀರಿನಲ್ಲಿ ಅದ್ದಿ ಒಂದೆರಡು ಬಾರಿ ಕಾರನ್ನು ಸ್ವಚ್ಛಗೊಳಿಸಿ. ಇದರಿಂದ ಕಾರಿನ ಬಣ್ಣವೂ ಹಾಳಾಗುವುದಿಲ್ಲ. ಜೊತೆಗೆ ಕಾರಿಗೂ ಯಾವುದೇ ರೀತಿ ಹಾನಿಯಾಗುವುದಿಲ್ಲ.
ಪಾಲಿಶ್ ಬಳಕೆ:
ಕಾರು ಸ್ವಚ್ಛಗೊಳ್ಳುವುದರ ಜೊತೆಗೆ ನಿಮ್ಮ ಕಾರ್ ಫಳ-ಫಳ ಹೊಳೆಯುವಂತೆ ಮಾಡಲು ನೀವು ಬಯಸಿದರೆ ಕಾರ್ ಸ್ವಚ್ಛಗೊಳಿಸಿ ಅದು ಒಣಗಿದ ನಂತರ ಉತ್ತಮ ಗುಣಮಟ್ಟದ ಪಾಲಿಶ್ ಅನ್ನು ಬಳಸಬಹುದು. ಇದರಿಂದ ನಿಮ್ಮ ಕಾರ್ ಹೊಸ ಕಾರಿನಂತೆಯೇ ಫಳ-ಫಳ ಹೊಳೆಯುತ್ತದೆ.
ಇದನ್ನೂ ಓದಿ- ಭಾರತದಲ್ಲಿ ಮರುಬಿಡುಗಡೆಯಾಗಿದೆ Hero Vida V1 Plus, ಪವರ್ಫುಲ್ ಬ್ಯಾಟರಿ ಜೊತೆಗೆ ಹಲವು ವೈಶಿಷ್ಟ್ಯಗಳ ಸೇರ್ಪಡೆ!
ಕಾರ್ ಸ್ವಚ್ಛಗೊಳಿಸುವಾಗ ಈ ವಿಷಯವನ್ನು ನೆನಪಿನಲ್ಲಿಡಿ:
ನೀವು ಮನೆಯಲ್ಲಿ ಕಾರ್ ಸ್ವಚ್ಛಗೊಳಿಸುವಾಗ ಅಪ್ಪಿತಪ್ಪಿಯೂ ಹಳೆಯ ಟವೆಲ್ ಅಥವಾ ಟಿ-ಶರ್ಟ್‌ನಿಂದ ನಿಮ್ಮ ಕಾರ್ ಅನ್ನು ಸ್ವಚ್ಛಗೊಳಿಸಬಾರದು ಎಂಬುದನ್ನೂ ನೆನಪಿನಲ್ಲಿಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.