BSNL ಗ್ರಾಹಕರಿಗೊಂದು ಬಂಬಾಟ್ ಸುದ್ದಿ, ಕೇಂದ್ರ ಸಚಿವರ ಘೋಷಣೆ ಕೇಳಿ ನೀವು ಕುಣಿದು ಕುಪ್ಪಳಿಸುವಿರಿ

BSNL To Roll Out 5G: ಬಿಎಸ್ಎನ್ಎಲ್ ಗ್ರಾಹಕರಿಗೊಂದು ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ರಾಜ್ಯಗಳ ಐಟಿ ಸಚಿವರ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಹೊಸ ಟವರ್‌ಗಳ ಸ್ಥಾಪನೆಗೆ ಸರ್ಕಾರ 36,000 ಕೋಟಿ ರೂ.ವೆಚ್ಚ ಮಾಡಲಿದೆ ಎಂದು ಹೇಳಿದ್ದಾರೆ.

Written by - Nitin Tabib | Last Updated : Oct 4, 2022, 09:41 PM IST
  • 8 ತಿಂಗಳ ಅವಧಿಯಲ್ಲಿ ಎಲ್ಲಾ ರಾಜ್ಯ ಸರ್ಕಾರಗಳು ಪ್ರಧಾನಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲಾನ್‌ಗೆ ಸೇರ್ಪಡೆಗೊಂಡಿದ್ದಕ್ಕಾಗಿ ಎಲ್ಲಾ ರಾಜ್ಯ ಸಚಿವರನ್ನು ಶ್ಲಾಘಿಸಿದ್ದಾರೆ
  • ಮತ್ತು ಒಟ್ಟಾಗಿ ಕೆಲಸ ಮಾಡಿದರೆ ಫಲಿತಾಂಶಗಳು ಉತ್ತಮಗೊಳ್ಳುತ್ತಿವೆ ಎಂದು ಹೇಳಿದ್ದಾರೆ.
  • ಬಿಎಸ್‌ಎನ್‌ಎಲ್ ಅನ್ನು ಮರುಸ್ಥಾಪಿಸುವ ಮೂಲಕ ಸಂಪರ್ಕದ ಸಮಸ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಪರಿಹರಿಸಲಾಗುವುದು ಎಂದು ಸಭೆಯಲ್ಲಿ ಅವರು ಭರವಸೆ ನೀಡಿದ್ದಾರೆ.
BSNL ಗ್ರಾಹಕರಿಗೊಂದು ಬಂಬಾಟ್ ಸುದ್ದಿ, ಕೇಂದ್ರ ಸಚಿವರ ಘೋಷಣೆ ಕೇಳಿ ನೀವು ಕುಣಿದು ಕುಪ್ಪಳಿಸುವಿರಿ title=
BSNL To Roll Out 5G

BSNL To Roll Out 5G: BSNL ಬಳಕೆದಾರರಿಗೆ ಪಾಲಿಗೆ ಒಂದು ಭಾರಿ ಮಹತ್ವದ ಸುದ್ದಿ ಪ್ರಕಟವಾಗಿದೆ. ಗ್ರಾಹಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಈ ಮಹತ್ವದ ಘೋಷಣೆ ಮಾಡಿದೆ. ಭಾರತ ಸರ್ಕಾರವು ಮುಂಬರುವ 2 ವರ್ಷಗಳಲ್ಲಿ 25000 ಟೆಲಿಕಾಂ ಟವರ್‌ಗಳನ್ನು ಅಂದರೆ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದೆ. ಕೇಂದ್ರ ಸಂಪರ್ಕ ಸಚಿವೆ ಅಶ್ವಿನಿ ವೈಷ್ಣವ್ ಈ ವಿಷಯ ಪ್ರಕಟಿಸಿದ್ದಾರೆ. ಹೊಸ ಟವರ್‌ಗಳ ಸ್ಥಾಪನೆಗೆ ಸರ್ಕಾರ 36 ಸಾವಿರ ಕೋಟಿ ರೂ.ಗಳನ್ನು ಮಂಜೂರು ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸಚಿವರು ನೀಡಿದ ಮಾಹಿತಿ ಏನು?
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು 5ಜಿ ಸೇವೆಗೆ ಚಾಲನೆ ನೀಡಿರುವುದು ನಿಮಗೆಲ್ಲಾ ತಿಳಿದ ಸಂಗತಿಯೇ ಆಗಿದೆ. ಆದರೆ, ಇದೀಗ ಕೇಂದ್ರ ಸಚಿವರಾಗಿರುವ ಅಶ್ವಿನಿ ವೈಷ್ಣವ್ ರಾಜ್ಯಗಳ ಐಟಿ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಸಭೆಯಲ್ಲಿ, ಬಹುತೇಕ ಎಲ್ಲಾ ರಾಜ್ಯಗಳ ಐಟಿ ಸಚಿವರು ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ಈ ಸಂಪರ್ಕವನ್ನು ಒಂದು ಸವಾಲು ಎಂದು ಬಣ್ಣಿಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ 6ನೇ ಭಾರತೀಯ ಮೊಬೈಲ್ ಕಾಂಗ್ರೆಸ್ ಸಮಾವೇಶದ ನೇಪಥ್ಯದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಜೊತೆಗೆ ರಾಜ್ಯದ ಎಲ್ಲಾ ಸಚಿವರ ಈ ಸಂಭೆ ನಡೆದಿದ್ದು, ಇದೀಗ ಭಾರಿ ಮಹತ್ವ ಪಡೆದುಕೊಂಡಿದೆ. ದೇಶಾದ್ಯಂತದ ನೆಟ್ವರ್ಕ್ ಗೆ ಬಂಧಿಸಿದಂತೆ, ಸಂಪರ್ಕವನ್ನು ಸುಧಾರಿಸಲು ರಾಜ್ಯಗಳು ಹೆವಿ ಲಿಫ್ಟಿಂಗ್ ಮಾಡಬೇಕಾದ ಅವಶ್ಯಕತೆ ಇದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇದನ್ನೂ ನೋಡಿ-Good News: Jio ಬಳಕೆದಾರರಿಗೊಂದು ಬಂಬಾಟ್ ಸುದ್ದಿ, ನಾಳೆಯಿಂದ Jio True 5G ಸೇವೆ ಆರಂಭ

BSNL ಸೇವೆ ಉತ್ತಮವಾಗಲಿದೆ
8 ತಿಂಗಳ ಅವಧಿಯಲ್ಲಿ ಎಲ್ಲಾ ರಾಜ್ಯ ಸರ್ಕಾರಗಳು ಪ್ರಧಾನಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲಾನ್‌ಗೆ ಸೇರ್ಪಡೆಗೊಂಡಿದ್ದಕ್ಕಾಗಿ ಎಲ್ಲಾ ರಾಜ್ಯ ಸಚಿವರನ್ನು ಶ್ಲಾಘಿಸಿದ್ದಾರೆ ಮತ್ತು ಒಟ್ಟಾಗಿ ಕೆಲಸ ಮಾಡಿದರೆ ಫಲಿತಾಂಶಗಳು ಉತ್ತಮಗೊಳ್ಳುತ್ತಿವೆ ಎಂದು ಹೇಳಿದ್ದಾರೆ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಅನ್ನು ಮರುಸ್ಥಾಪಿಸುವ ಮೂಲಕ ಸಂಪರ್ಕದ ಸಮಸ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಪರಿಹರಿಸಲಾಗುವುದು ಎಂದು ಸಭೆಯಲ್ಲಿ ಅವರು ಭರವಸೆ ನೀಡಿದ್ದಾರೆ. "ಬಿಎಸ್‌ಎನ್‌ಎಲ್‌ನ ಪುನರುಜ್ಜೀವನಕ್ಕಾಗಿ ನಾವು 1.64 ಲಕ್ಷ ಕೋಟಿ ರೂ.ಗಳನ್ನು ಹೊಂದಿದ್ದೇವೆ, ಇದು ಅದರ ಬಂಡವಾಳ ಹೂಡಿಕೆ ಅಗತ್ಯತೆ ಮತ್ತು ತಂತ್ರಜ್ಞಾನದ ಉನ್ನತೀಕರಣದ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುತ್ತದೆ" ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Reliance Jio Laptop: 20 ಸಾವಿರಕ್ಕೂ ಕಡಿಮೆ ಬೆಲೆಗೆ ಭಾರತದಲ್ಲಿ ಬಿಡುಗಡೆಯಾಗಿದೆ ಜಿಯೋಬುಕ್, ಖರೀದಿಸುವುದು ಹೇಗೆ?

ಹಲವು ನಗರಗಳಲ್ಲಿ 5ಜಿ ಸೇವೆ ಲಭ್ಯವಾಗಲಿದೆ
ಇನ್ನು 6 ತಿಂಗಳಲ್ಲಿ ದೇಶದ 200ಕ್ಕೂ ಹೆಚ್ಚು ನಗರಗಳು 5ಜಿ ಸೇವೆಯನ್ನು ಪಡೆದುಕೊಳ್ಳಲು ಆರಂಭಿಸಲಿದೆ ಎಂದು ಈ ಹಿಂದೆ ಕೇಂದ್ರ ಸಚಿವರು ಘೋಷಿಸಿದ್ದರು ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ ಬಳಿಕ ಅವರು ಈ ಘೋಷಣೆ ಮಾಡಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News