Amazon Flipkart Sale: ಮೂರೇ ದಿನದಲ್ಲಿ ಮಾರಾಟವಾಯ್ತು 1 ಲಕ್ಷಕ್ಕೂ ಹೆಚ್ಚು Xiaomi Smart TV

Amazon Flipkart Sale: ಭಾರತದಲ್ಲಿ  ಅಮೆಜಾನ್ ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮತ್ತು ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇಸ್ ಸೇಲ್ ನಡೆಯುತ್ತಿದೆ. ಇದರಲ್ಲಿ ಶಿಯೋಮಿಯ ಸ್ಮಾರ್ಟ್ ಟಿವಿಗಳು ಭರ್ಜರಿಯಾಗಿ ಮಾರಾಟವಾಗುತಿದೆ. ಕಂಪನಿಯು ಮೂರು ದಿನಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಟಿವಿಗಳನ್ನು ಮಾರಾಟ ಮಾಡಿದೆ. 

Written by - Yashaswini V | Last Updated : Oct 6, 2021, 02:05 PM IST
  • ಫೆಸ್ಟಿವಲ್ ಸೇಲ್ ನಲ್ಲಿ ಶಿಯೋಮಿಯ ಸ್ಮಾರ್ಟ್ ಟಿವಿ ದೊಡ್ಡ ಹಿಟ್
  • ಶಿಯೋಮಿಯ ಈ ಮೂರು ಸ್ಮಾರ್ಟ್ ಟಿವಿಗಳು ಹೆಚ್ಚು ಮಾರಾಟ
  • ಮಾರಾಟದಲ್ಲಿ Xiaomi TV ಗಳ ಮೇಲೆ ಭಾರೀ ರಿಯಾಯಿತಿಗಳಿವೆ
Amazon Flipkart Sale: ಮೂರೇ ದಿನದಲ್ಲಿ ಮಾರಾಟವಾಯ್ತು 1 ಲಕ್ಷಕ್ಕೂ ಹೆಚ್ಚು Xiaomi Smart TV  title=
Amazon Flipkart Sale

Amazon Flipkart Sale: ಭಾರತದಲ್ಲಿ ಹಬ್ಬದ ಸೀಸನ್ ನಲ್ಲಿ ಹೆಚ್ಚಿನ ಶಾಪಿಂಗ್ ಮಾಡಲಾಗುತ್ತದೆ. ಕಂಪನಿಗಳು ಮತ್ತು ಗ್ರಾಹಕರು ಇಬ್ಬರೂ ದೇಶೀಯ ಲಾಭವನ್ನು ಪಡೆಯುತ್ತಾರೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನ ಪ್ರಮುಖ ಈವೆಂಟ್‌ಗಳಲ್ಲಿ ಅಗ್ರ ಬ್ರಾಂಡ್ Xiaomi ಇಂಡಿಯಾ ಬಹಳಷ್ಟು ಪ್ರಯೋಜನಗಳನ್ನು ಪಡೆದುಕೊಂಡಿದೆ. ಶಿಯೋಮಿ 3 ದಿನಗಳ ಮಾರಾಟದಲ್ಲಿ 1 ಲಕ್ಷಕ್ಕೂ ಹೆಚ್ಚು ಸ್ಮಾರ್ಟ್ ಟಿವಿಗಳನ್ನು ಮಾರಾಟ ಮಾಡಿರುವುದಾಗಿ ಎಂದು ಘೋಷಿಸಿದೆ. ಬ್ರಾಂಡ್‌ನ ಪ್ರಮುಖ ಕಾರ್ಯಕ್ರಮ 'ದೀಪಾವಳಿ ವಿತ್ ಎಂಐ' ಉತ್ಪನ್ನಗಳ ಮೇಲೆ ಉತ್ತಮ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡುತ್ತಿದೆ. Xiaomi ಉತ್ಪನ್ನಗಳು mi.com, Amazon Great Indian Shopping Festival ಮತ್ತು Flipkart Big Billion Days ಮಾರಾಟದಲ್ಲಿ ಹೆಚ್ಚು ರಿಯಾಯಿತಿ ಕೊಡುಗೆಗಳು ಲಭ್ಯವಿದೆ.

ಶಿಯೋಮಿ ಇಂಡಿಯಾ ಹೇಳಿದ್ದೇನು?
ಮಾರಾಟದ ಯಶಸ್ಸಿನ ನಂತರ, ಈಶ್ವರ್ ನೀಲಕಂಠನ್, Xiaomi India SmartTV, "ನಾವು ಸ್ಮಾರ್ಟ್ ಟಿವಿ ವಿಭಾಗಕ್ಕೆ ಪ್ರವೇಶಿಸಿದಾಗ, ನಾವು ಮಾರುಕಟ್ಟೆಯ ಸಾಮರ್ಥ್ಯವನ್ನು ಗುರುತಿಸಿದ್ದೇವೆ. ನಮ್ಮ ಗುರಿ 'ಪ್ರತಿ ಭಾರತೀಯ ಮನೆಗೂ ಸ್ಮಾರ್ಟ್ ಟಿವಿ ನಾವೀನ್ಯತೆ' ಒದಗಿಸುವುದು. ರೆಡ್ಮಿ ಮತ್ತು ಎಂಐ ಮನೆಮಾತಾಗಿವೆ. ಜನಸಾಮಾನ್ಯರಿಗೆ ಬೇಕಾದ ಎಲ್ಲವನ್ನೂ ಟಿವಿ ಹೊಂದಿದೆ ಎಂದು ನಾವು ನಂಬುತ್ತೇವೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಒದಗಿಸುವುದು ನಮ್ಮ ಗುರಿ. ಜನರ ಬೇಡಿಕೆಗೆ ಅನುಗುಣವಾಗಿ ನಾವು ಹೊಸದನ್ನು ಮಾಡಲು ಪ್ರಯತ್ನಿಸುತ್ತೇವೆ ಎಂದರು.

ಇದನ್ನೂ ಓದಿ- ಎಚ್ಚರಿಕೆ! ಲಕ್ಷಾಂತರ Google Chrome ಬಳಕೆದಾರರು ಅಪಾಯದಲ್ಲಿ...!

ಈ ಮೂರು ಸ್ಮಾರ್ಟ್ ಟಿವಿಗಳ ಜನಪ್ರಿಯತೆ:
Xiaomi ಹಬ್ಬದ ಮಾರಾಟದ ಮೊದಲ ತರಂಗದಲ್ಲಿ ತನ್ನ 8 ಉತ್ಪನ್ನಗಳನ್ನು ಅಮೆಜಾನ್‌ನಲ್ಲಿ (Amzon) ಪಟ್ಟಿ ಮಾಡಲಾದ ಟಾಪ್ 10 ಬೆಸ್ಟ್ ಸೆಲ್ಲಿಂಗ್ ಸ್ಮಾರ್ಟ್ ಟಿವಿಗಳಲ್ಲಿ ಸೇರಿಸಿಕೊಂಡು ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ರೆಡ್ಮಿ ಸ್ಮಾರ್ಟ್ ಟಿವಿ X 50 ”, Mi TV 4A 32”, Mi TV 5X 43 ”ಈ ಮೂರು ಟಿವಿಗಳು ಜನರ ಮೊದಲ ಬೇಡಿಕೆಯಲ್ಲಿವೆ. 

ಇದನ್ನೂ ಓದಿ- Phone Gallery: ಫೋನ್‌ನಲ್ಲಿ ನಿಮ್ಮ ವೈಯಕ್ತಿಕ ಫೋಟೋ ಅಥವಾ ವಿಡಿಯೋ ಹೈಡ್ ಮಾಡುವುದು ಹೇಗೆ..?

ಈ ಮೂರು ಟಿವಿಗಳ ಬೆಲೆಯನ್ನು ತಿಳಿಯೋಣ:
ರೆಡ್ಮಿ ಸ್ಮಾರ್ಟ್ ಟಿವಿ ಎಕ್ಸ್ ಸರಣಿ (Redmi Smart TV X Series) - 31,749 ರೂ.
ರೆಡ್ಮಿ ಸ್ಮಾರ್ಟ್ ಟಿವಿ 32 ” (Redmi Smart TV 32”) - 13,249 ರೂ . 
ರೆಡ್ಮಿಸ್ಮಾರ್ಟ್ ಟಿವಿ 43” (Redmi Smart TV 43”)- 22,749 ರೂ .
Mi ಟಿವಿ 5 ಎಕ್ಸ್ ಸರಣಿ (Mi TV 5X Series) - 43,499 ರೂ .
Mi ಟಿವಿ ಕ್ಯೂಎಲ್ಇಡಿ 4 ಕೆ (Mi TV QLED 4k) - 57,749 ರೂ.
Mi ಟಿವಿ ಕ್ಯೂಎಲ್ಇಡಿ 75 (Mi TV QLED 75)-  1,23,749 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News