Amazon Fab Phone Fest: ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ ಕೇವಲ 3,000ರೂ.ಗೆ ಲಭ್ಯ

Amazon Fab Phone Fest: ಅಮೆಜಾನ್‌ನಲ್ಲಿ ಫ್ಯಾಬ್ ಫೋನ್‌ಗಳ ಫೆಸ್ಟ್ ಸೇಲ್ ನಡೆಯುತ್ತಿದೆ. ಈ ಸೇಲ್ನಲ್ಲಿ ನೀವು ಸ್ಟ್ರಾಂಗ್ ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಉತ್ತಮ ಅವಕಾಶವಿದೆ. 

Written by - Yashaswini V | Last Updated : Jun 30, 2022, 01:38 PM IST
  • ಅಮೆಜಾನ್‌ನಲ್ಲಿ ಫ್ಯಾಬ್ ಫೋನ್ಸ್ ಮಾರಾಟ ನಡೆಯುತ್ತಿದೆ.
  • ಈ ಮಾರಾಟವು ಜೂನ್ 28 ರಿಂದ ಪ್ರಾರಂಭವಾಯಿತು
  • ಇಂದು ಅಂದರೆ ಜೂನ್ 30 ಮಾರಾಟದ ಕೊನೆಯ ದಿನವಾಗಿದೆ.
Amazon Fab Phone Fest: ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ ಕೇವಲ 3,000ರೂ.ಗೆ ಲಭ್ಯ title=
Amazon Fab Phones Fest

ಅಮೆಜಾನ್‌ನಲ್ಲಿ ಫ್ಯಾಬ್ ಫೋನ್ಸ್ ಫೆಸ್ಟ್ :  ಅಮೆಜಾನ್‌ನಲ್ಲಿ ಫ್ಯಾಬ್ ಫೋನ್ಸ್ ಮಾರಾಟ ನಡೆಯುತ್ತಿದೆ. ಈ ಮಾರಾಟವು ಜೂನ್ 28 ರಿಂದ ಪ್ರಾರಂಭವಾಯಿತು ಮತ್ತು ಇಂದು ಅಂದರೆ ಜೂನ್ 30 ಮಾರಾಟದ ಕೊನೆಯ ದಿನವಾಗಿದೆ. ಮಾರಾಟದ ಸಮಯದಲ್ಲಿ, ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳು ಅಗ್ಗವಾಗಿ ದೊರೆಯುತ್ತವೆ. ನೀವು ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಇದು ಸುವರ್ಣಾವಕಾಶವಾಗಿದೆ. 

ನೀವು ಸ್ಟ್ರಾಂಗ್ ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ ಅಮೆಜಾನ್‌ನಲ್ಲಿ ಫ್ಯಾಬ್ ಫೋನ್ಸ್ ಮಾರಾಟದಲ್ಲಿ ನೀವು ಮೂರು ದಿನಗಳವರೆಗೆ ಬಾಳಿಕೆ ಬರುವ ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಅನ್ನು ಕೇವಲ ಮೂರು ಸಾವಿರ ರೂ.ಗಳಿಗೆ ಖರೀದಿಸಬಹುದು.

ಅಮೆಜಾನ್‌ನಲ್ಲಿ ಫ್ಯಾಬ್ ಫೋನ್ಸ್ ಫೆಸ್ಟ್- Tecno POVA 3 ಕೊಡುಗೆಗಳು ಮತ್ತು ರಿಯಾಯಿತಿಗಳು: -
Tecno POVA 3 (128GB ಸ್ಟೋರೇಜ್) ನ ಬಿಡುಗಡೆ ಬೆಲೆ ರೂ 14,999 ಆದರೆ ಅಮೆಜಾನ್‌ನಲ್ಲಿ ಈ ಫೋನ್ ಮೇಲೆ ಶೇ. 13 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಹಾಗಾಗಿ ಈ ಫೋನ್ ಅನ್ನು 12,999ರೂ.ಗಳಿಗೆ ಖರೀದಿಸಬಹುದು.  ಇದಲ್ಲದೆ, ಫೋನ್‌ನಲ್ಲಿ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಯೂ ಇದೆ, ಇದು ಫೋನ್‌ನ ಬೆಲೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. 

ಇದನ್ನೂ ಓದಿ- ಇಂತಹ ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಜೀವ ಉಳಿಸುತ್ತೆ ಸ್ಮಾರ್ಟ್‌ಫೋನ್

ಅಮೆಜಾನ್‌ನಲ್ಲಿ ಫ್ಯಾಬ್ ಫೋನ್ಸ್ ಫೆಸ್ಟ್- Tecno POVA 3 ಬ್ಯಾಂಕ್ ಆಫರ್:-
ನೀವು Tecno POVA 3 ಸ್ಮಾರ್ಟ್‌ಫೋನ್  ಅನ್ನು ಖರೀದಿಸಲು ಎಸ್ಬಿಐ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ ನೀವು ಒಂದು ಸಾವಿರ ರೂ.ಗಳ ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ. ಅದರ ನಂತರ ಫೋನ್ ಬೆಲೆ 11,999 ರೂ. ಅದರ ನಂತರ ವಿನಿಮಯ ಕೊಡುಗೆಯೂ ಇದೆ.

ಇದನ್ನೂ ಓದಿ- Google Search: ಗೂಗಲ್‌ನಲ್ಲಿ ಮರೆತೂ ಸಹ ಈ ವಿಷಯಗಳನ್ನು ಹುಡುಕಬೇಡಿ, ಜೈಲು ಪಾಲಾಗಬಹುದು ಎಚ್ಚರ!

ಅಮೆಜಾನ್‌ನಲ್ಲಿ ಫ್ಯಾಬ್ ಫೋನ್ಸ್ ಫೆಸ್ಟ್- Tecno POVA 3 ಎಕ್ಸ್ಚೇಂಜ್ ಆಫರ್:-
Tecno POVA 3 ನಲ್ಲಿ ರೂ.8,950 ವಿನಿಮಯ ಕೊಡುಗೆ ಇದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ನೀವು ವಿನಿಮಯ ಮಾಡಿಕೊಂಡರೆ, ನೀವು ತುಂಬಾ ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಲೇಟೆಸ್ಟ್ ಆಗಿದ್ದರೆ ಮಾತ್ರ ಈ ಕೊಡುಗೆಯ ಲಾಭ ಪಡೆಯಬಹುದು. ಈ ಎಲ್ಲಾ ಕೊಡುಗೆಗಳ ಲಾಭ ಪಡೆಯಲು ಸಾಧ್ಯವಾದರೆ ಫೋನ್ ಅನ್ನು 3,049 ರೂ. ಗಳಿಗೆ ಖರೀದಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News