Alert! ನಂಬರ್ ಡಯಲ್ ಮಾಡುತ್ತಿದ್ದಂತೆ ನಿಮ್ಮ ವಾಟ್ಸ್ಆಪ್ ಖಾತೆ ಹ್ಯಾಕ್! ಇದು ಹೊಸ ಒಟಿಪಿ ಸ್ಕ್ಯಾಮ್

New WhastApp Scam - ಹೊಸ ಸ್ಕ್ಯಾಮ್ ಮೂಲಕ ವಾಟ್ಸಾಪ್ ಖಾತೆಗಳನ್ನು ಹ್ಯಾಕ್ ಮಾಡಲಾಗುತ್ತಿದೆ. ಸೈಬರ್ ಅಪರಾಧಿಗಳು ಕೇವಲ ಒಂದು ಸರಳ ಟ್ರಿಕ್ ಬಳಸಿ ನಿಮ್ಮ ಖಾತೆಗೆ ಪ್ರವೇಶ ಪಡೆಯುತ್ತಿದ್ದಾರೆ. ಇದಕ್ಕಾಗಿ ನಿಮ್ಮಿಂದ ಅವರು ಕೇವಲ ಒಂದು ಸಂಖ್ಯೆಯನ್ನು ಡಯಲ್ ಮಾಡಿಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : May 27, 2022, 11:51 AM IST
  • ಹೊಸ ಸ್ಕ್ಯಾಮ್ ಮೂಲಕ ವಾಟ್ಸಾಪ್ ಖಾತೆಗಳನ್ನು ಹ್ಯಾಕ್ ಮಾಡಲಾಗುತ್ತಿದೆ.
  • ಸೈಬರ್ ಅಪರಾಧಿಗಳು ಕೇವಲ ಒಂದು ಸರಳ ಟ್ರಿಕ್ ಬಳಸಿ ನಿಮ್ಮ ಖಾತೆಗೆ ಪ್ರವೇಶ ಪಡೆಯುತ್ತಿದ್ದಾರೆ.
  • ಇದಕ್ಕಾಗಿ ನಿಮ್ಮಿಂದ ಅವರು ಕೇವಲ ಒಂದು ಸಂಖ್ಯೆಯನ್ನು ಡಯಲ್ ಮಾಡಿಸುತ್ತಿದ್ದಾರೆ
Alert! ನಂಬರ್ ಡಯಲ್ ಮಾಡುತ್ತಿದ್ದಂತೆ ನಿಮ್ಮ ವಾಟ್ಸ್ಆಪ್ ಖಾತೆ ಹ್ಯಾಕ್!  ಇದು ಹೊಸ ಒಟಿಪಿ ಸ್ಕ್ಯಾಮ್   title=
New WhatsApp Scam

New WhatsApp OTP Scam - ವಾಟ್ಸ್ ಆಪ್ ಬಳಕೆದಾರರು ಸಾಕಷ್ಟು ಎಚ್ಚರಿಕೆವಹಿಸುವ ಅವಶ್ಯಕತೆ ಇದೆ. ಹೌದು, ಹೊಸದೊಂದು ವಾಟ್ಸ್ ಆಪ್ ಸ್ಕ್ಯಾಮ್ ಬಳಕೆದಾರರನ್ನು ತನ್ನ ಬಲೆಗೆ ಬೀಳಿಸುತ್ತಿದೆ. Cloudsek.com ಸಂಸ್ಥಾಪಕ ರಾಹುಲ್ ಸಸಿ ಈ ಹೊಸ  ಒಟಿಪಿ ಫ್ರಾಡ್ ಕುರಿತು ಮಾಹಿತಿ ನೀಡಿದ್ದು, ತನ್ಮೂಲಕ ವಂಚಕರು ನಿಮ್ಮ ಖಾತೆಗೆ ಅಕ್ರಮ ಪ್ರವೇಶ ಪಡೆಯುತ್ತಿದ್ದಾರೆ ಎಂದಿದ್ದಾರೆ. ಈ ಕುರಿತು ಟ್ವಿಟ್ಟರ್ ಪೋಸ್ಟ್ ಹಂಚಿಕೊಂಡು ಅವರು ಈ ಸ್ಕ್ಯಾಮ್ ಬಗ್ಗೆ ಮಾಹಿತಿ ನೀಡಿದ್ದಾರೆ. 
ಹೊಸ OTP ಸ್ಕ್ಯಾಮ್ ಈ ರೀತಿ ಕಾರ್ಯನಿರ್ವಹಿಸುತ್ತಿದೆ.

ಹ್ಯಾಕರ್ ಗಳು ಮೊದಲು ನಿಮ್ಮನ್ನು ಮಾತಿಗೆ ಮರುಳಾಗಿಸಿ “**67*<10 digit number> ಅಥವಾ *405*<10 digit number>” ಸಂಖ್ಯೆಗೆ ಡಯಲ್ ಮಾಡಲು ಸೂಚಿಸುತ್ತಾರೆ. ಒಂದೊಮ್ಮೆ ಇವುಗಳಲ್ಲಿ ಯಾವುದೇ ಒಂದು ಸಂಖ್ಯೆಯನ್ನು ನೀವು ಡಯಲ್ ಮಾಡಿದರೆ, ನೀವು ನಿಮ್ಮ ವಾಟ್ಸ್ ಆಪ್ ಖಾತೆಯಿಂದ ಕೈತೊಳೆದುಕೊಳ್ಳಬೇಕು ಅಷ್ಟೇ.

ಇದನ್ನೂ ಓದಿ-Electricity: ಮತ್ತೆ ಮತ್ತೆ ಪವರ್ ಕಟ್ ಆಗ್ತೀದ್ಯಾ? ಈ ಕೆಲಸ ಮಾಡಿ ಕರೆಂಟ್ ಇಲ್ಲದೆಯೂ ಓಡುತ್ತೆ ಎಸಿ-ಕೂಲರ್

ವಾಸ್ತವದಲಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ನಲ್ಲಿ ಕರೆ ಫಾರ್ವರ್ಡ್ ವಿನಂತಿಗಳಿಗಾಗಿ ಈ ಸಂಖ್ಯೆಗಳನ್ನು ಬಳಸಲಾಗುತ್ತದೆ. ಹ್ಯಾಕರ್‌ಗಳು ನಿಮಗೆ ಆಮೀಷ ನೀಡುವ  ಮೂಲಕ ನಿಮ್ಮ ಸಂಖ್ಯೆಗೆ ಕರೆಯನ್ನು ಫಾರ್ವರ್ಡ್ ಮಾಡುವಂತೆ ಮಾಡುತ್ತಾರೆ. ಇದರ ನಂತರ, ಅವರು ನಿಮ್ಮ WhatsApp ಸಂಖ್ಯೆಯೊಂದಿಗೆ ಲಾಗಿನ್ ಆಗುತ್ತಾರೆ ಮತ್ತು ಕರೆ ಮೂಲಕ OTP ಕೇಳುತ್ತಾರೆ. ಈ ರೀತಿಯಾಗಿ ಹ್ಯಾಕರ್‌ಗಳು ನಿಮಗೆ ಗೊತ್ತಾಗದಂತೆ ನಿಮ್ಮ WhatsApp ಖಾತೆಗೆ ಪ್ರವೇಶವನ್ನು ಪಡೆಯುತ್ತಾರೆ.

ಇದನ್ನೂ ಓದಿ-Instagram Reels ತಯಾರಿಸುವುದು ಇನ್ಮುಂದೆ ಮತ್ತಷ್ಟು ಉತ್ತಮ ಅನುಭವ ನೀಡಲಿದೆ, ಹೊಸ ವೈಶಿಷ್ಯದಿಂದ ನೀವು ಈ ಕೆಲಸ ಮಾಡಬಹುದು

ಯಾವುದೇ ಒಂದು ಹೊಸ ಡಿವೈಸ್ ಮೇಲೆ ನೀವು ನಿಮ್ಮ ವಾಟ್ಸ್ ಆಪ್ ಖಾತೆಗೆ ಪ್ರವೇಶವನ್ನು ಪಡೆಯಲು ಬಯಸಿದರೆ, ಮೊದಲು ನಿಮಗೊಂದು ಓಟಿಪಿ ಬರುತ್ತದೆ. ಈ ಓಟಿಪಿ ನಿಮಗೆ ಎಸ್ಎಂಎಸ್ ಅಥವಾ ಕರೆಯ ಮೂಲಕ ಕಳುಹಿಸಲಾಗುತ್ತದೆ. ನಿಮಗೂ ಕೂಡ ಯಾರಾದರು ಆಮೀಷವೋಡ್ಡಿ ಕರೆ ಮಾಡಿ, ಮೇಲೆ ಸೂಚಿಸಿದ ನಂಬರ್ ಡಯಲ್ ಮಾಡಲು ಹೇಳಿದರೆ ತಕ್ಷಣವೇ ಎಚ್ಚೆತ್ತುಕೊಳ್ಳಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News