Airtel Bumper Offer: ಜಿಯೋ ಕಂಪನಿ ಹೊಸ ವರ್ಷಕ್ಕೆ ಹೊಸ ಪ್ಲಾನ್ ಬಿಡುಗಡೆ ಮಾಡಿದ ಬೆನ್ನಲ್ಲೇ ಏರ್‌ಟೆಲ್ ಕೂಡ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದೆ. ಏರ್‌ಟೆಲ್ ಕೂಡ ಹೊಸ ವರ್ಷಕ್ಕೆ ಹೊಸ ಪ್ಲಾನ್ ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರತಿ ದಿನ 2GB ಇಂಟರ್ನೆಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವಂತೆ ಜಿಯೋ ಮತ್ತು ಏರ್‌ಟೆಲ್ ಕಂಪನಿಗಳ ಪೈಪೋಟಿಯಿಂದ ಗ್ರಾಹಕರಿಗೆ ಲಾಭವಾಗುತ್ತಿದೆ.
ಏರ್‌ಟೆಲ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಹೊಸ ವರ್ಷಕ್ಕೆ ಹೊಸ ಯೋಜನೆಯೊಂದನ್ನು ಪರಿಚಯಿಸಿದೆ. ಹೊಸ ಪ್ಲಾನ್ ಬೆಲೆ 398 ರೂಪಾಯಿ. ಗ್ರಾಹಕರು ಈ ಪ್ಲಾನ್ ಹಾಕಿಸಿಕೊಂಡರೆ ಪ್ರತಿ ದಿನ 2GB ಇಂಟರ್ನೆಟ್ ಸೇರಿದಂತೆ 28-ದಿನ Disney + Hotstar subscription ಪಡೆಯಬಹುದಾಗಿದೆ. STD ಮತ್ತು ರೋಮಿಂಗ್‌ನಲ್ಲಿ ಅನ್ಲಿಮಿಟೆಡ್ ಕರೆಗಳನ್ನು ಸಹ ಮಾಡಬಹುದಾಗಿದೆ. ದಿನಕ್ಕೆ 100 SMS ಪ್ರಯೋಜನ ಇರುತ್ತದೆ.
ಇದನ್ನೂ ಓದಿ- IRCTC: ಟ್ರೈನ್ ಟಿಕೆಟ್ ಬುಕ್ಕಿಂಗ್'ನಿಂದ ಫುಡ್ ಆರ್ಡರ್ ಮಾಡುವವರೆಗೆ ಎಲ್ಲವನ್ನೂ ಇದೊಂದೇ ಆಪ್'ನಲ್ಲಿ ಮಾಡಿ!
ಏರ್‌ಟೆಲ್‌ನ ಈ ಹೊಸ ಪ್ರಿಪೇಯ್ಡ್ ಪ್ಲಾನ್ ನಿಮಗೆ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನಲ್ಲಿ ಲೈವ್ ಆಗಿ ಸಿಗುತ್ತದೆ. ಅಲ್ಲದೆ, ಈ ಯೋಜನೆಯನ್ನು ಏರ್‌ಟೆಲ್ ವೆಬ್‌ಸೈಟ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಆಗಿ ಕೂಡ ನೋಡಬಹುದಾಗಿದೆ. ಏರ್‌ಟೆಲ್‌ನ ಈ ಹೊಸ ಪ್ಲಾನ್ ನಿಮಗೆ 28 ದಿನಗಳವರೆಗೆ ಮಾತ್ರ ಮಾನ್ಯತೆಯನ್ನು ಹೊಂದಿರುತ್ತದೆ. ಈ ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರು ವೈಂಕ್ ಮೂಲಕ ಉಚಿತ ಹಲೋ ಟ್ಯೂನ್‌ಗಳನ್ನು ಸಹ ಪಡೆಯುತ್ತಾರೆ. ದೈನಂದಿನ 100 ಎಸ್‌ಎಂಎಸ್‌ಗಳ ಮಿತಿಯ ನಂತರ, ಗ್ರಾಹಕರಿಗೆ ಸ್ಥಳೀಯ ಎಸ್‌ಎಂಎಸ್‌ಗೆ ರೂ 1 ಮತ್ತು ಎಸ್‌ಟಿಡಿಗೆ ರೂ 1.5 ವಿಧಿಸಲಾಗುತ್ತದೆ.
ಇದನ್ನೂ ಓದಿ- iPhone ಬಳಕೆದಾರರಿಗೆ ಸರ್ಕಾರದಿಂದ ರೆಡ್ ಅಲರ್ಟ್..! ನಿರ್ಲಕ್ಷಿಸಿದ್ರೆ ಅಪಾಯ ಖಂಡಿತ...!
ಇತ್ತೀಚೆಗೆ ಜಿಯೋ ಕಂಪನಿ ಕೂಡ ಹೊಸ ವರ್ಷಕ್ಕೆಂದೇ ಹೊಸ ಪ್ಲಾನ್ ಬಿಡುಗಡೆ ಮಾಡಿತ್ತು. 2,025 ರೂಪಾಯಿಗಳ ಪ್ಲಾನ್ ಪರಿಚಯಿಸಿ ಅದರಲ್ಲಿ ಗ್ರಾಹಕರಿಗೆ ಪ್ರತಿ ದಿನ 2.5GB ಡೇಟಾವನ್ನು ನೀಡುತ್ತಿದೆ. ಅರ್ಹ ಗ್ರಾಹಕರು ಅನಿಯಮಿತವಾಗಿ 5G ಸೌಲಭ್ಯವನ್ನು ಪಡೆಯಬಹುದಾಗಿದೆ. ಜಿಯೋದ ಈ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಪ್ರತಿದಿನ 100 SMS ಮತ್ತು ಅನಿಯಮಿತ ವಾಯ್ಸ್ ಕಾಲ್ ಮಾಡಬಹುದಾಗಿದೆ. JioTV, JioCinema ಮತ್ತು JioCloud ಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಆದರೆ JioCinema ಪ್ರೀಮಿಯಂ ಪ್ರಯೋಜನ ಸೇರಿಸಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.