ನವದೆಹಲಿ : How to Protect Your WhatsApp Account - ನಿಮ್ಮ ವಾಟ್ಸಾಪ್ ಖಾತೆಯನ್ನು ಯಾರೂ ಹ್ಯಾಕ್ ಮಾಡಬಾರದು ಎಂದು ಎಂದು ನೀವು ಕೂಡ ಬಯಸುತ್ತಿದ್ದರೆ ತಕ್ಷಣ ನಿಮ್ಮ ಸೆಟ್ಟಿಂಗ್ಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ. ಈ ದಿನಗಳಲ್ಲಿ ಹ್ಯಾಕರ್ಸ್ ವಾಟ್ಸಾಪ್ ಖಾತೆಗೆ ಪ್ರವೇಶ ಪಡೆಯಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಸೈಬರ್ ಭದ್ರತಾ ತಜ್ಞ Zak Doffman ಪ್ರಕಾರ, ಈ ಮೂಲಕ ಹ್ಯಾಕರ್ಸ್ ತಮ್ಮ ಸಾಧನದಲ್ಲಿ ನಿಮ್ಮ ವಾಟ್ಸಾಪ್ ಅನ್ನು ಲಾಗ್ ಮಾಡುತ್ತಾರೆ. ಈ ವಿಧಾನದ ಕುರಿತು ಸೈಬರ್ ತಜ್ಞರು ವಿವರವಾದ ಮಾಹಿತಿ ನೀಡಿದ್ದಾರೆ.
ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಈ ಖತರ್ನಾಕ್ ಪದ್ಧತಿ
ನೀವು ಹೊಸ ಸಾಧನದಲ್ಲಿ ವಾಟ್ಸಾಪ್ ಖಾತೆಯನ್ನು ಲಾಗಿನ್ ಮಾಡಿದಾಗಲೆಲ್ಲಾ, ನಿಮ್ಮ ನೋಂದಾಯಿತ ಫೋನ್ ಸಂಖ್ಯೆಗೆ ವಾಟ್ಸಾಪ್ ಪರಿಶೀಲನೆ ಎಸ್ಎಂಎಸ್ ಕಳುಹಿಸುತ್ತದೆ. ಒಂದು ವೇಳೆ ತಪ್ಪಾಗಿ ಮೋಸಗಾರನ ಕೈಗೆ ನಿಮ್ಮ ಫೋನ್ ತಲುಪಿದ್ದಾರೆ ಮತ್ತು ಲಾಕ್ ಪರದೆಯಲ್ಲಿ SMS ನ ಪೂರ್ವವೀಕ್ಷಣೆಯನ್ನು ತೋರಿಸಲು ಸೆಟ್ಟಿಂಗ್ ಅನ್ನು ಹೊಂದಿಸಿದ್ದರೆ, ನೀವು ದೊಡ್ಡ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ.
ಅಷ್ಟೇ ಅಲ್ಲ ಇತ್ತೀಚಿಗೆ ಕೆಲ ಮಾಲ್ವೇಯರ್ (Malware) ಗಳೂ ಕೂಡ ಬಂದಿವೆ. ಅವುಗಳನ್ನು ಬಳಸಿ ಹ್ಯಾಕರ್ ಗಳು ದೂರದಲ್ಲಿಯೆ ಕುಳಿತು ನಿಮ್ಮ ಫೋನ್ ನಲ್ಲಿ ಬರುವ ಈ 6 ಅಂಕಿಗಳ ಕೋಡ್ ಅನ್ನು ಪಡೆದುಕೊಳ್ಳಬಹುದು. ಈ ಕೋಡ್ ಬಳಸುತ್ತಲೇ ನಿಮ್ಮ ವಾಟ್ಸ್ ಆಪ್ (WhatsApp) ಖಾತೆ ಆತನ ಫೋನ್ ನಲ್ಲಿ ಸಕ್ರೀಯಗೊಳ್ಳುತ್ತದೆ. ನಿಮ್ಮ ವಾಟ್ಸ್ ಆಪ್ (WhatsApp Hacking) ಖಾತೆಯನ್ನು ಬಳಸಿ ಆತ ನಿಮ್ಮ ಬಂಧುಮಿತ್ರರಿಂದ ಹಣವನ್ನು ಕೂಡ ಲಪಟಾಯಿಸಬಹುದು. ಇಂತಹದೊಂದು ಸ್ಕ್ಯಾಮ್ ಕುರಿತು Express.co.uk ಕಳೆದ ವರ್ಷ ತನ್ನ ಒಂದು ವರದಿಯಲ್ಲಿ ಬಹಿರಂಗಗೊಳಿಸಿತ್ತು. ಕಳೆದ ಕೆಲ ದಿನಗಳಿಂದ ಇಂತಹ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಆದರೆ, ಕೇವಲ ಒಂದು ವಾಟ್ಸ್ ಆಪ್ ಸೆಟ್ಟಿಂಗ್ ಮಾಡುವ ಮೂಲಕ ನೀವು ಇಂತಹ ಅಪಾಯದಿಂದ ಪಾರಾಗಬಹುದು.
ಇದನ್ನೂ ಓದಿ-ಇನ್ಮುಂದೆ ನೀವು WhatsApp ನಲ್ಲಿಯೂ ಕೂಡ Log Out ಆಗ್ಬಹುದು
ತುಂಬಾ ಉಪಯುಕ್ತವಾಗಿದೆ WhatsAppನ ಈ ಸೆಟ್ಟಿಂಗ್
WhatsApp ತನ್ನ ಬಳಕೆದಾರರಿಗೆ ಟೂ ಸ್ಟೆಪ್ ವೆರಿಫಿಕೆಶನ್ (Two Step Verification) ಹೆಸರಿನ ವೈಶಿಷ್ಟ್ಯವೊಂದನ್ನು ನೀಡುತ್ತದೆ. ಇದರಲ್ಲಿ ನೀವು 6 ಸಂಖ್ಯೆಯ ಒಂದು ಕೋಡ್ ಸೆಟ್ ಮಾಡಬೇಕು. ಯಾವುದೇ ಒಂದು ಹೊಸ ಡಿವೈಸ್ ಮೇಲೆ ನೀವು ನಿಮ್ಮ ವಾಟ್ಸ್ ಆಪ್ ಖಾತೆಗೆ ಲಾಗಿನ್ ಮಾದಾಗ. WhatsApp ಈ ಕೋಡ್ ಅನ್ನು ನಮೂದಿಸಲು ಸಲಹೆ ನೀಡುತ್ತದೆ ಅಷ್ಟೇ ಅಲ್ಲ WhatsApp ಮಧ್ಯದಲ್ಲಿ ಯಾವಾಗ ಬೇಕಾದರೂ ಕೂಡ ಈ ಕೋಡ್ ನಮೂದಿಸಲು ಸೂಚಿಸಬಹುದು.
ಇದನ್ನೂ ಓದಿ -Whatsapp Privacy Policy : ನಿಮ್ಮ ಮಾಹಿತಿಯನ್ನು ಕದ್ದು ಓದುತ್ತಾ ವಾಟ್ಸಾಪ್..? ಮತ್ತೆ ಬದಲಾಗಿದೆ ಪ್ರೈವೆಸಿ ಪಾಲಿಸಿ..!
ಈ ವೈಶಿಷ್ಟ್ಯವನ್ನು ಈ ರೀತಿ ಅಳವಡಿಸಿ
- ಟೂ ಸ್ಟೆಪ್ ವೆರಿಫಿಕೆಶನ್ ಅನ್ನು ಸಕ್ರೀಯಗೊಳಿಸಲು ಮೊದಲು ನೀವು ನಿಮ್ಮ ವಾಟ್ಸ್ ಆಪ್ ಖಾತೆಯನ್ನು ತೆರೆಯಬೇಕು.
- ಬಳಿಕ ನಿಮ್ಮ ವಾಟ್ಸ್ ಆಪ್ ಖಾತೆಯ ಸೆಟ್ಟಿಂಗ್ಸ್ (WhatsApp Settings)ವಿಭಾಗಕ್ಕೆ ಭೇಟಿ ನೀಡಿ Account ಸೆಕ್ಷನ್ ಗೆ ಹೋಗಿ.
- ಇಲ್ಲಿ ನಿಮಗೆ Two Step Verification ಆಯ್ಕೆ ಸಿಗಲಿದೆ.
- ಒಂದೊಮ್ಮೆ ನೀವು Enable ಆಯ್ಕೆಯನ್ನು ಸಕ್ರೀಯಗೊಳಿಸಿದರೆ, ನಿಮಗೆ ನಿಮ್ಮ ನೆಚ್ಚಿನ ಆರು ಅಂಕಿಗಳ ಕೋಡ್ ನಮೂದಿಸಲು ಸೂಚಿಸಲಾಗುತ್ತದೆ.
ಇದನ್ನೂ ಓದಿ-Sandes ಆ್ಯಪ್ನಲ್ಲಿರುವ ಈ ವಿಶಿಷ್ಟ್ಯಗಳನ್ನು ನೀವು Whatsappನಲ್ಲಿಯೂ ನೋಡಿರಲಿಕ್ಕಿಲ್ಲ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.