ಇತ್ತೀಚೆಗೆ ಯುಎಸ್ ನಲ್ಲಿ ವಿಮಾನವೊಂದನ್ನು ಸ್ಮಾರ್ಟ್ ಫೋನ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ನಂತರ ಸ್ಥಳಾಂತರಿಸಬೇಕಾಯಿತು. ಸ್ಮಾರ್ಟ್ಫೋನ್ನಲ್ಲಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಗಳು ತುಂಬಾ ಕಡಿಮೆ ಇದ್ದರೂ, ಸಹ ಇದರಲ್ಲಿ ಬೆಂಕಿ ಕಲಿಸಿಕೊಳ್ಳಲು ಕಾರಣವೇನು ಇಲ್ಲಿದೆ ನೋಡಿ. ಹೌದು ನಾವು ನಮ್ಮ ಮೊಬೈಲ್ ನಲ್ಲಿ ಹೇಗೆ ಬಳಸುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಿನ ಸ್ಮಾರ್ಟ್ಫೋನ್ಗಳು 4,500mAh ಅಥವಾ ಹೆಚ್ಚಿನ ಶಕ್ತಿಯನ್ನು ಹೊಂದಿರುವ ಬ್ಯಾಟರಿಯನ್ನು ಹೊಂದಿರುವುದರಿಂದ. ಇದರೊಂದಿಗೆ, ವೇಗದ ಚಾರ್ಜಿಂಗ್ ವೈಶಿಷ್ಟ್ಯಗಳು ಸಹ ಇರುತ್ತವೆ, ಆದ್ದರಿಂದ ನಿಮ್ಮ ಫೋನ್ ಅನ್ನು ಸರಿಯಾಗಿ ಬಳಸುವುದು ಬಹಳ ಮುಖ್ಯ. ಹೆಚ್ಚಿನ ಸಂದರ್ಭಗಳಲ್ಲಿ, ಸ್ಮಾರ್ಟ್ ಫೋನ್ ಬ್ರ್ಯಾಂಡ್ ಇದು ಬಳಕೆದಾರರ ತಪ್ಪು ಎಂದು ಹೇಳಿಕೊಂಡಿದೆ. ಫೋನ್ನಲ್ಲಿ ಬೆಂಕಿಯ ಹಿಂದೆ 10 ತಪ್ಪು ಬಳಕೆಯ ಬಗ್ಗೆ ಹೇಳಲಾಗುತ್ತಿದೆ. ಯಾವುಯಾವವು ಇಲ್ಲಿದೆ ನೋಡಿ..
1- ನಿಮ್ಮ ಫೋನ್ ಹಾಳಾಗಿದ್ದರೂ ಅದನ್ನು ಬಳಸುವುದು
ನಿಮ್ಮ ಆಕಸ್ಮಿಕ ಕುಸಿತದಿಂದ ನಿಮ್ಮ ಸ್ಮಾರ್ಟ್ ಫೋನ್(Smart Phone) ಹಾಳಾದರೆ, ಅದನ್ನು ಬಳಸಬೇಡಿ ಮತ್ತು ಅದನ್ನ ತಕ್ಷಣವೇ ಸೇವಾ ಕೇಂದ್ರದಲ್ಲಿ ಪರೀಕ್ಷಿಸಿ. ಏಕೆಂದರೆ ಕಟ್ ಆದ ಡಿಸಿಪ್ಲೆ ಅಥವಾ ಬಾಡಿ ಫ್ರೇಮ್ ನೀರು ಅಥವಾ ಬೆವರಿನಿಂದಾಗಿ ಫೋನಿನ ಬ್ಯಾಟರಿ ಅಥವಾ ಇತರ ಭಾಗಗಳನ್ನು ಹಾನಿಗೊಳಿಸಬಹುದು. ಹಾನಿಗೊಳಗಾದ ಫೋನ್ ಬಳಸುವುದು ಅಪಾಯಕಾರಿ.
ಇದನ್ನೂ ಓದಿ : ಕಡಿಮೆ ಬೆಲೆಯಲ್ಲಿ Micromax ಬಿಡುಗಡೆ ಮಾಡುತ್ತಿದೆ ಅದ್ಭುತ ಸ್ಮಾರ್ಟ್ಫೋನ್, ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ
2- ನಕಲಿ ಚಾರ್ಜರ್ ಬಳಸುವುದು ಬೇಡ
ವೇಗದ ಚಾರ್ಜಿಂಗ್ ಅಡಾಪ್ಟರು(Charger Adapter)ಗಳನ್ನು ಬಳಸುವಾಗ ಬಹಳ ಜಾಗರೂಕರಾಗಿರಿ. ನಿಮ್ಮ ಸ್ಮಾರ್ಟ್ಫೋನ್ನೊಂದಿಗೆ ಬಂದ ಚಾರ್ಜರ್ ಅನ್ನು ಯಾವಾಗಲೂ ಬಳಸಿ. ಹೆಚ್ಚಿನ ಪವರ್ ರೇಟಿಂಗ್ ಹೊಂದಿರುವ ಚಾರ್ಜರ್ ಅನ್ನು ಬಳಸುವುದರಿಂದ ನಿಮ್ಮ ಫೋನಿನ ಬ್ಯಾಟರಿಯನ್ನು ತಗ್ಗಿಸಬಹುದು. ಹಾಗೆಯೇ ಡೂಪ್ಲಿಕೇಟ್ ಚಾರ್ಜರ್ ಬಳಸಬೇಡಿ.
3- ನಕಲಿ ಬ್ಯಾಟರಿಗಳನ್ನು ಬಳಸುವುದು
ಮೂರನೇ ವ್ಯಕ್ತಿ ಅಥವಾ ನಕಲಿ ಬ್ಯಾಟರಿ(Duplicate Battery)ಗಳನ್ನು ಎಂದಿಗೂ ಬಳಸಬೇಡಿ. ಅಂತಹ ಬ್ಯಾಟರಿಗಳನ್ನು ಬಳಸುವುದು ಗಂಭೀರ ಭದ್ರತಾ ಸಮಸ್ಯೆಗಳನ್ನು ಉಂಟುಮಾಡಬಹುದು. ಕೆಟ್ಟ ಲಿಥಿಯಂ-ಐಯಾನ್ ಬ್ಯಾಟರಿಯು ನಿಮ್ಮ ಫೋನ್ ಅತಿಯಾಗಿ ಬಿಸಿಯಾಗಲು, ಬೆಂಕಿ ಹತ್ತಿಕೊಳ್ಳಲು ಮತ್ತು ಸ್ಫೋಟಗೊಳ್ಳಲು ಕಾರಣವಾಗಬಹುದು.
4- ನಿಮ್ಮ ಫೋನ್ ಬಿಸಿಯಾಗಿರುವಾಗ ಬಳಸುವುದು
ನಿಮ್ಮ ಸ್ಮಾರ್ಟ್ಫೋನ್ ಅಸಾಮಾನ್ಯವಾಗಿ ಬಿಸಿಯಾಗುತ್ತಿರುವುದನ್ನು ನೀವು ಗಮನಿಸಿದರೆ, ಅದನ್ನು ಬದಿಗಿರಿಸಿ, ಚಾರ್ಜ್ ಮಾಡುವುದನ್ನು ತೆಗೆದುಹಾಕಿ ಮತ್ತು ಅದರಿಂದ ದೂರವಿರಿ.
5- ವಾಹನ ಚಾಲನೆ ಮಾಡುವಾಗ ಮೊಬೈಲ್ ಚಾರ್ಜ್ ಮಾಡಲು ಕಾರ್ ಚಾರ್ಜಿಂಗ್ ಅಡಾಪ್ಟರ್ ಬಳಸಿ
ಕಾರ್ ಚಾರ್ಜಿಂಗ್ ಅಡಾಪ್ಟರ್ ಬದಲಿಗೆ ಪವರ್ ಬ್ಯಾಂಕ್(Power Bank) ಬಳಸಿ. ಏಕೆಂದರೆ, ಭಾರತದಲ್ಲಿ, ಕಾರ್ ಮಾಲೀಕರು ಬಿಡಿಭಾಗಗಳನ್ನು ಮೂರನೇ ವ್ಯಕ್ತಿಯ ಮಾರಾಟಗಾರರಿಂದ ಸ್ಥಾಪಿಸುತ್ತಾರೆ, ಆಗಾಗ್ಗೆ ವೈರಿಂಗ್ನ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುತ್ತಾರೆ. ಕಾರ್ ಚಾರ್ಜಿಂಗ್ ಅಡಾಪ್ಟರ್ನೊಂದಿಗೆ ಚಾರ್ಜ್ ಮಾಡುವಾಗ, ಶಕ್ತಿಯು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು, ಇದು ನಿಮ್ಮ ಫೋನ್ಗೆ ಬೆಂಕಿ ಹಚ್ಚಲು ಕಾರಣವಾಗಬಹುದು.
ಇದನ್ನೂ ಓದಿ : WhatsApp ಬಳಕೆದಾರರಿಗೊಂದು ಗುಡ್ ನ್ಯೂಸ್, ಶೀಘ್ರದಲ್ಲೇ ಬರಲಿದೆ ಹೊಸ ಫೀಚರ್
6- ನಿಮ್ಮ ಫೋನ್ ಅನ್ನು ಹೆಚ್ಚು ಚಾರ್ಜ್ ಮಾಡುವುದು
ರಾತ್ರಿಯಿಡೀ ನಿಮ್ಮ ಫೋನ್ ಅನ್ನು ಚಾರ್ಜ್(Phone Charger) ಮಾಡಲು ಬಿಡಬೇಡಿ ಮತ್ತು ನಿಮ್ಮ ಫೋನ್ ಅನ್ನು 100%ಗೆ ಚಾರ್ಜ್ ಮಾಡುವುದು ಯಾವಾಗಲೂ ಅಗತ್ಯವಿಲ್ಲ. ಬ್ಯಾಟರಿಯ ಜೀವಿತಾವಧಿಯನ್ನು ಹೆಚ್ಚಿಸುವುದರಿಂದ 90% ನಂತರ ಬ್ಯಾಟರಿ ಚಾರ್ಜ್ ಮಾಡುವುದನ್ನು ನಿಲ್ಲಿಸುವುದು ಒಳ್ಳೆಯ ಅಭ್ಯಾಸವಾಗಿದೆ. ಅತಿಯಾದ ಚಾರ್ಜಿಂಗ್ ನಿಮ್ಮ ಫೋನಿನ ಬ್ಯಾಟರಿಯನ್ನು ವಿಸ್ತರಿಸುತ್ತದೆ, ಇದು ಬ್ಯಾಟರಿ ಸ್ಫೋಟಕ್ಕೆ ಕಾರಣವಾಗಬಹುದು.
7- ಚಾರ್ಜ್ ಮಾಡುವಾಗ ಫೋನ್ ಅನ್ನು ಸೂರ್ಯನ ಬೆಳಕಿನಿಂದ ದೂರವಿಡಿ
ಫೋನ್ ಚಾರ್ಜ್ ಮಾಡುವಾಗ, ನಿಮ್ಮ ಫೋನಿನಲ್ಲಿ ಬೇರೆಲ್ಲಿಂದಲೂ ಶಾಖ ಬರುತ್ತಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ, ಇದನ್ನು ನೇರ ಸೂರ್ಯನ ಬೆಳಕು ಅಥವಾ ಇತರ ಬಿಸಿ ವಸ್ತುಗಳಿಂದ ದೂರವಿಡಿ, ವಿಶೇಷವಾಗಿ ಚಾರ್ಜ್ ಮಾಡುವಾಗ.
8- ನಿಮ್ಮ ಸ್ಮಾರ್ಟ್ ಫೋನ್ ಮೇಲೆ ಅನಗತ್ಯ ಒತ್ತಡವನ್ನು ಹೇರುವುದು
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಅನಗತ್ಯ ಒತ್ತಡವನ್ನು ಹೇರಬೇಡಿ, ವಿಶೇಷವಾಗಿ ಚಾರ್ಜ್(Charger) ಮಾಡುವಾಗ, ಅದರ ಮೇಲೆ ಏನನ್ನೂ ಹಾಕಬೇಡಿ.
9- ನಿಮ್ಮ ಸ್ಮಾರ್ಟ್ ಫೋನ್ ಅನ್ನು ಪವರ್ ಸ್ಟ್ರಿಪ್ ಅಥವಾ ಎಕ್ಸ್ಟೆನ್ಶನ್ ಕಾರ್ಡ್ ಗೆ ಪ್ಲಗ್ ಮಾಡುವ ಮೂಲಕ ಚಾರ್ಜ್ ಮಾಡುವುದು
ಪವರ್ ಸ್ಟ್ರಿಪ್ ಅಥವಾ ಎಕ್ಸ್ಟೆನ್ಶನ್ ಕಾರ್ಡ್ ಬಳಸಿ ಶಾರ್ಟ್ ಸರ್ಕ್ಯೂಟ್(Shock Serket) ಅಪಾಯವನ್ನು ಹೆಚ್ಚಿಸುತ್ತದೆ, ಆದ್ದರಿಂದ ಫೋನ್ ಚಾರ್ಜ್ ಮಾಡುವಾಗ ಇದನ್ನು ಯಾವಾಗಲೂ ನೆನಪಿನಲ್ಲಿಡಿ.
ಇದನ್ನೂ ಓದಿ : Google Play Store: 19 ಸಾವಿರಕ್ಕೂ ಅಧಿಕ ಆಪ್ ಗಳು ಅನ್ಸೇಫ್, ಬಳಕೆದಾರರ ವೈಯಕ್ತಿಕ ಡೇಟಾ ಅಪಾಯದಲ್ಲಿ
10- ಸ್ಥಳೀಯ ಅಂಗಡಿಯಲ್ಲಿ ಫೋನ್ ರಿಪೇರಿಗೆ ಕೊಡಬೇಡಿ
ನಿಮ್ಮ ಮನೆಯ ಹತ್ತಿರದ ಸ್ಥಳೀಯ ಅಂಗಡಿಯಲ್ಲಿ ನಿಮ್ಮ ಫೋನ್ ರಿಪೇರಿಗೆ ಕೊಡಬೇಡಿ. ಯಾವಾಗಲೂ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಅಧಿಕೃತ ಸೇವಾ ಕೇಂದ್ರದಿಂದ ಮಾತ್ರ ದುರಸ್ತಿ ಮಾಡಿಕೊಳ್ಳಿ. ನಿರ್ದಿಷ್ಟ ಸಾಧನವನ್ನು ಸರಿಪಡಿಸಲು ಸ್ಥಳೀಯ ಅಂಗಡಿಗಳಲ್ಲಿ ಸರಿಯಾದ ರೀತಿಯ ಉಪಕರಣಗಳು ಇಲ್ಲದಿರಬಹುದು, ಇದು ಫೋನ್ನ ಸರ್ಕ್ಯೂಟ್ರಿಯಲ್ಲಿ ದೋಷಗಳಿಗೆ ಕಾರಣವಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.