Vi Offer - ಖಾಸಗಿ ಟೆಲಿಕಾಂ ಕಂಪನಿಯಾಗಿರುವ ವೊಡಾಫೋನ್ ಐಡಿಯಾ (Vodafone-Idea) ಅಥವಾ Vi ತನ್ನ ಕೆಲ ವಿಶೇಷ ಬಳಕೆದಾರರಿಗೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ, ಇದರಿಂದ ಬಳಕೆದಾರರು ಅವರ ಪ್ರತಿ ತಿಂಗಳು ರೀಚಾರ್ಜ್ ಮೇಲೆ ಕ್ಯಾಶ್ ಬ್ಯಾಕ್ ಪಡೆಯಬಹುದು. ಈ ಕೊಡುಗೆ ಏನು ಮತ್ತು ಯಾವ ಬಳಕೆದಾರರು ಇದರಿಂದ ಪ್ರಯೋಜನ ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಕಳೆದ ವರ್ಷ ಅನೇಕ ದೊಡ್ಡ ಟೆಲಿಕಾಂ ಕಂಪನಿಗಳು ತಮ್ಮ ಯೋಜನೆಗಳನ್ನು ದುಬಾರಿಯಾಗಿಸಿತ್ತು. ಇವುಗಳಲ್ಲಿ ವೊಡಾಫೋನ್ ಕೂಡಾ ಸೇರಿದೆ. ಆದರೆ ಹೊಸ ವರ್ಷದಂದು ವೋಡಾಫೋನ್ ತನ್ನ ಬಳಕೆದಾರರಿಗಾಗಿ ವಿಶಿಷ್ಟ ಮತ್ತು ಅಗ್ಗದ ಯೋಜನೆಗಳನ್ನು ತಂದಿದೆ.
ವೊಡಾಫೋನ್ ಐಡಿಯಾ ಈಗ 249 ರೂ. ಪ್ರಿಪೇಯ್ಡ್ ಯೋಜನೆಯೊಂದಿಗೆ 20 ರೂ. ರಿಯಾಯಿತಿ ಕೂಪನ್ ನೀಡುತ್ತಿದೆ. ವಿಐ ವೆಬ್ಸೈಟ್ ಪ್ರಕಾರ, ಮುಂದಿನ ರೀಚಾರ್ಜ್ನಲ್ಲಿ ರಿಯಾಯಿತಿ ಕೂಪನ್ ಬಳಕೆದಾರರಿಗೆ ಲಭ್ಯವಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.