ರೈತರ ಅಸಮಾಧಾನವನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಬಜೆಟ್ನಲ್ಲಿ ರೈತರಿಗೆ ದೊಡ್ಡ ಪರಿಹಾರ ನೀಡಬಹುದು. ಮುಂದಿನ ವರ್ಷದ ವೇಳೆಗೆ ರೈತರ ಆದಾಯ ದ್ವಿಗುಣಗೊಳ್ಳುವಂತೆ ಮೋದಿ ಸರ್ಕಾರವು ರೈತರಿಗೆ ಸಂಬಂಧಿಸಿದ ಯೋಜನೆಗಳನ್ನು ವಿಸ್ತರಿಸಬಹುದು ಎಂಬ ಊಹಾಪೋಹಗಳಿವೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಸಾಮಾನ್ಯ ಬಜೆಟ್ (Budget 2021) ಅನ್ನು ಇಂದು ಮಂಡಿಸಲಿದ್ದಾರೆ. ಈ ಬಜೆಟ್ ಪ್ರತಿಯೊಂದು ವಲಯಕ್ಕೂ ಹಲವು ವಿಧಗಳಲ್ಲಿ ಬಹಳ ವಿಶೇಷವಾಗಿದೆ. ಏಕೆಂದರೆ ಇದನ್ನು ಕರೋನಾ ಸಾಂಕ್ರಾಮಿಕದಂತಹ ಅನೇಕ ಸವಾಲುಗಳ ನಡುವೆ ಪ್ರಸ್ತುತಪಡಿಸಲಾಗುತ್ತಿದೆ.
ಭಾರತದ ಮೊದಲ ಬಜೆಟ್ ಅನ್ನು ಏಪ್ರಿಲ್ 7, 1860 ರಂದು ಮಂಡಿಸಲಾಯಿತು. ಆದರೆ ಸ್ವತಂತ್ರ ಭಾರತದ ಮೊದಲ ಬಜೆಟ್ ಅನ್ನು ಹಣಕಾಸು ಸಚಿವ ಆರ್.ಕೆ. ಷಣ್ಮುಖಮ್ ಚೆಟ್ಟಿ 26 ನವೆಂಬರ್ 1947 ರಂದು ಪ್ರಸ್ತುತಪಡಿಸಿದರು.
ಇಂದು ಕೇಂದ್ರದ ಬಜೆಟ್ ಮಂಡನೆ ಮಾಡುತ್ತಿರುವವರು ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆ ಆಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. ಇದರಿಂದಾಗಿ ಕೂಡ ಕೇಂದ್ರ ಬಜೆಟ್ ನಿಂದ ಕರ್ನಾಟಕಕ್ಕೆ ಭಾರೀ ಮಹತ್ವದ ಯೋಜನೆಗಳು ಮತ್ತು ಅನುದಾನ ಸಿಗಬಹುದೆಂಬ ನಿರೀಕ್ಷೆ ಹುಟ್ಟುಕೊಂಡಿದೆ.
ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಬಜೆಟ್ ಮುದ್ರಣವನ್ನು ಮಾಡಲಾಗುತ್ತಿಲ್ಲ. 'ಯೂನಿಯನ್ ಬಜೆಟ್ ಮೊಬೈಲ್ ಆ್ಯಪ್' ಮೂಲಕ ಸಾರ್ವಜನಿಕರಿಗೆ ಬಜೆಟ್ಗೆ ಸಂಬಂಧಿಸಿದ ಎಲ್ಲಾ ರೀತಿಯ ದಾಖಲೆಗಳು ಮತ್ತು ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.