Rishab Pant Health Update: ಟೀಂ ಇಂಡಿಯಾಗೆ ಒಂದಲ್ಲ ಹಲವಾರು ಬಾರಿ ಐತಿಹಾಸಿಕ ಜಯ ತಂದುಕೊಟ್ಟ ಡ್ಯಾಶಿಂಗ್ ವಿಕೆಟ್ ಕೀಪರ್ ಕಂ ಬ್ಯಾಟ್ಸ್ ಮನ್ ರಿಷಬ್ ಪಂತ್ ಚೇತರಿಕೆ ವೇಗವಾಗಿ ಸಾಗುತ್ತಿದೆ. ಇದನ್ನು ಕಂಡು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಅಚ್ಚರಿ ವ್ಯಕ್ತಪಡಿಸಿದೆ.
Rishab Pant Health Update: ರಿಷಬ್ ಪಂತ್ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇದು ಟೀಂ ಇಂಡಿಯಾಗೆ ದೊಡ್ಡ ಸುದ್ದಿ ಎಂದೇ ಹೇಳಬಹುದು. ಆದರೆ ಅವರಿಗೆ ಅನೇಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬೆಲ್ಲಾ ವದಂತಿಗಳು ಹರಿದಾಡತೊಡಗಿದವು, ಆದರೆ ಬಿಸಿಸಿಐ ಮೂಲವೊಂದು ಮಾಧ್ಯಮದ ಜೊತೆ ಮಾತನಾಡುತ್ತಾ ಈ ಎಲ್ಲಾ ವಿಷಯಗಳನ್ನು ಅಲ್ಲಗಳೆದಿದೆ.
Rishab Pant Health Update: 25ರ ಹರೆಯದ ರಿಷಬ್ ಪಂತ್ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅದರ ಶೀರ್ಷಿಕೆಯಲ್ಲಿ, 'ಒಂದು ಹೆಜ್ಜೆ ಮುಂದೆ, ಒಂದು ಹೆಜ್ಜೆ ಬಲಶಾಲಿ, ಒಂದು ಹೆಜ್ಜೆ ಉತ್ತಮ' ಎಂದು ಬರೆದಿದ್ದಾರೆ. ಪಂತ್ ಊರುಗೋಲಿನ ಸಹಾಯದಿಂದ ನಡೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.
Cricketers Visit Mahakaleshwar Temple: 3ನೇ ಏಕದಿನ ಪಂದ್ಯಕ್ಕೂ ಮುನ್ನ ಭಾರತದ ಆಟಗಾರರು ಉಜ್ಜಯಿನಿಯ ದೇವಸ್ಥಾನದಲ್ಲಿ ಭಸ್ಮಾರ್ಥದಲ್ಲಿ ಪಾಲ್ಗೊಂಡಿದ್ದರು. ಟೀಂ ಇಂಡಿಯಾದ ಆಟಗಾರರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಸಾಮಾನ್ಯ ಜನರ ನಡುವೆ ಕುಳಿತು ಭಸ್ಮಾರ್ಥಿಯನ್ನು ವೀಕ್ಷಿಸಿದರು. ಈ ವೇಳೆ ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ಶಿವಭಕ್ತಿಯಲ್ಲಿ ಮಗ್ನರಾಗಿದ್ದರು.
Rishabh Pant Injury: ರಿಷಬ್ ಪಂತ್ ದೀರ್ಘಕಾಲದವರೆಗೆ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಇನ್ನು ಈ ಸಂದರ್ಭದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಗೆ 2 ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳ ಆಯ್ಕೆ ಮಾಡುವುದು ಹೊಸ ಆಯ್ಕೆ ಸಮಿತಿಗೆ ದೊಡ್ಡ ಸವಾಲಾಗಿದೆ.
Rishabh Pant Health Bulletine: ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ಮಾತನಾಡಿ, ಡಿಡಿಸಿಎ ತಂಡ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಪಂತ್ ಅವರ ಆರೋಗ್ಯದ ಮೇಲೆ ನಿಗಾ ಇಡಲಿದೆ. ಅಗತ್ಯವಿದ್ದರೆ ನಾವು ಅವರನ್ನು ದೆಹಲಿಗೆ ಸ್ಥಳಾಂತರಿಸುತ್ತೇವೆ. ಪ್ಲಾಸ್ಟಿಕ್ ಸರ್ಜರಿಗಾಗಿ ದೆಹಲಿಗೆ ಕರೆದೊಯ್ಯುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.