Unique Health Card:ಎಲ್ಲರಿಗೂ ಆಧಾರ್ ಕಾರ್ಡ್ ರೀತಿಯಲ್ಲಿಯೇ ಯುನಿಕ್ ಹೆಲ್ತ್ ಕಾರ್ಡ್ ಸಿಗಲಿದೆ. ಯಾವುದೇ ಓರ್ವ ರೋಗಿಗೆ ಆಯುಷ್ಮಾನ್ ಭಾರತ್ ಯೋಜನೆಯ ಅಡಿ ಚಿಕಿತ್ಸಾ ವೆಚ್ಚದ ಲಾಭ ಸಿಗಲಿದೆಯೇ ಅಥವಾ ಇಲ್ಲವೇ ಎಂಬುದು ಈ ಯುನಿಕ್ ಕಾರ್ಡ್ ನಿಂದ ಪತ್ತೆಹಚ್ಚಬಹುದು.
National Digital Health Mission: ದೇಶದ ಡಿಜಿಟಲ್ ಆರೋಗ್ಯ ಮೂಲಸೌಕರ್ಯವನ್ನು ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ (NDHM) ಅಡಿಯಲ್ಲಿ ಸಂಯೋಜಿಸಲಾಗುವುದು. ಈ ಯೋಜನೆಯಡಿ, ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.
ಈ ವಿಶಿಷ್ಟ ಕಾರ್ಡ್ನಿಂದ ಯಾರಿಗೆ ಎಲ್ಲಿ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ತಿಳಿಯುತ್ತದೆ. ಅಲ್ಲದೆ, ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಈ ವಿಶಿಷ್ಟ ಆರೋಗ್ಯ ಕಾರ್ಡ್ನಲ್ಲಿ ದಾಖಲಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.