ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಜಗತ್ತಿನಾದ್ಯಂತ ಜನರು ವಿಶ್ವ ನಿದ್ರಾ ದಿನವನ್ನು ಆಚರಿಸುತ್ತಾರೆ. ಈ ವರ್ಷ ಈ ದಿನವನ್ನು ಮಾರ್ಚ್ 17 ರಂದು ಆಚರಿಸಲಾಗುತ್ತದೆ. ನಿದ್ರೆಯ ಕೊರತೆಯು ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ಈ ದಿನ ನಿದ್ರೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. 2008 ರಿಂದ ವಿಶ್ವ ನಿದ್ರಾ ದಿನವನ್ನು ಪ್ರಮುಖ ದಿನಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.
ರಾತ್ರಿ ಸರಿಯಾಗಿ ನಿದ್ದೆ ಮಾಡುವುದು ಉತ್ತಮ ಆರೋಗ್ಯಕ್ಕೆ ಬಹಳ ಮುಖ್ಯ. ಪ್ರತಿ ರಾತ್ರಿ 8ರಿಂದ 9 ಗಂಟೆಗಳ ನಿದ್ದೆ ಮಾಡುವುದು ಅವಶ್ಯಕ. ಇದರಿಂದ ದೇಹ ಮತ್ತು ಮನಸ್ಸಿಗೆ ಶಕ್ತಿ ಸಿಗುತ್ತದೆ.
ಉತ್ತಮ ನಿದ್ರೆ ಮಾಡುವುದು ಬಹಳ ಮುಖ್ಯ. ಆದರೆ ಇದು ಅನೇಕ ಜನರಿಗೆ ಇದು ಸಾಧ್ಯವಿಲ್ಲ. ಇಡೀ ದಿನದ ಕೆಲಸ ಮತ್ತು ಆಯಾಸದ ನಂತರ ರಾತ್ರಿಯಲ್ಲಿ ಆಳವಾದ ನಿದ್ರೆ ಮಾಡಬೇಕೆಂದು ಪ್ರತಿಯೊಬ್ಬರ ಬಯಕೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.