Slippers throw on Darshan case : ನಟ ದರ್ಶನ್ ಅಭಿನಯದ ಕ್ರಾಂತಿ ಚಲನಚಿತ್ರದ ಎರಡನೇಯ ಹಾಡಿನ ಬಿಡುಗಡೆ ಕಾರ್ಯಕ್ರಮ ಹೊಸಪೇಟೆ ನಗರದಲ್ಲಿ ನಡೆಯಿತು. ಅಂದು ಪುನೀತ್ ರಾಜಕುಮಾರ್ ಅಭಿಮಾನಿಗಳು ದರ್ಶನ ಕ್ರಾಂತಿ ಸಿನಿಮಾದ ಪೋಸ್ಟರ್ ಹರಿದ ಘಟನೆಯೂ ಸಹ ನಡೆದಿತ್ತು.
ಗೋಬಿ ಮಂಚೂರಿ ವಿಚಾರಕ್ಕೆ ಅಜ್ಜಿಯನ್ನು ಕೊಲೆ ಮಾಡಿದ ಮೊಮ್ಮಗ ಮತ್ತು ಆತನ ತಾಯಿ ಸೇರಿ ಒಟ್ಟು ಮೂವರನ್ನು ಬೆಂಗಳೂರಿನ ಕೆಂಗೇರಿ ಪೊಲೀಸರು 5 ವರ್ಷಗಳ ನಂತರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
PSI ಆಯ್ತು ಈಗ ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಅಕ್ರಮ ಬಯಲಾಗಿದೆ. ಬೆಳಗಾವಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಎಸ್ಪಿ ಸಂಜೀವ ಪಾಟೀಲ್ ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿ ವಿನೋದ್ ಹೆಸರಘಟ್ಟದ ಫಾರ್ಮ್ ಹೌಸ್ ನಲ್ಲಿ ಕಳೆದ 15 ದಿನಗಳಿಂದ ಕೆಲಸ ಮಾಡುತ್ತಿದ್ದ. ಜುಲೈ 22 ರಂದು ವಿನೋದ್ ಹಾಗೂ ಅಜಯ್ ಎಂಬುವರು ಸ್ಯಾಟ್ಲೈಟ್ ಬಸ್ ನಿಲ್ದಾಣದ ನ್ಯೂ ಟಿಂಬರ್ ಲೇಔಟ್ ನಲ್ಲಿ 113 ಕೆಜಿ ಮೌಲ್ಯದ ರೆಡ್ ಸ್ಯಾಂಡಲ್ ಮಾರಾಟ ಮಾಡುತ್ತಿದ್ದರು.
ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜ ಭವನ ಚಲೋ ಹಿನ್ನೆಲೆ ರಾಜ ಭವನಕ್ಕೆ ತೆರಳುವ ಮಾರ್ಗದ ಮಧ್ಯೆ ಬಿ.ಕೆ.ಹರಿಪ್ರಸಾದ್ರನ್ನು ವಶಕ್ಕೆ ಪಡೆಯಲಾಗಿದೆ.
ಸೌತ್ ಆಫ್ರಿಕಾದ ಬೆಂಜಮೀನ್ ಸಂಡೆ ಅಲಿಯಾಸ್ ಅಂಥೋನಿ ಆಟಿಕೆ ಬಾಕ್ಸ್ ಗಳಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಎನ್ ಸಿಬಿ ಅಧಿಕಾರಿಗಳು ಬೆಂಜಮೀನ್ ನ ಬಲೆಗೆ ಬೀಳಿಸಿದ್ದಾರೆ.
ಚಿಬಾಬಾಯಿ 72 ಗಂಟೆ ಅವಧಿಯಲ್ಲಿ 2 ಕಡೆ ಕೊರೊನಾ ಟೆಸ್ಟ್ (Corona test) ಮಾಡಿಸಿದ್ದ. ಜಯನಗರದ ಎಸ್.ಆರ್.ಲ್ಯಾಬ್ನಲ್ಲಿ ಪಾಸಿಟಿವ್ ವರದಿ ನೀಡಲಾಗಿತ್ತು. ಹೀಗಾಗಿ ಏರ್ಪೋರ್ಟ್ ರಸ್ತೆಯ ಸಿಂಜಿನ್ ಲ್ಯಾಬ್ನಿಂದ ನಕಲಿ ನೆಗೆಟಿವ್ ವರದಿ ಪಡೆದಿದ್ದ ಆರೋಪ ಚಿಬಾಬಾಯಿ ವಿರುದ್ಧ ಇತ್ತು.
ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಘಾಜಿಯಾಬಾದ್ ಇಂದಿರಾಪುರಂನ ನಿವಾಸಿ ಸಮಿತ್ ಕುಮಾರ್ (32) ಎಂಬಾತ ಮಾದಕ ವ್ಯಸನದಿಂದಾಗಿ ಕಳೆದ ಜನವರಿಯಲ್ಲಿ ಕೆಲಸ ಕಳೆದುಕೊಂಡಿದ್ದನು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.