IND vs ENG: ಶತಕ, ಸಿಕ್ಸರ್, ರನ್ ಮಳೆ… ಒಂದೇ ಏಟಿಗೆ 5 ದಾಖಲೆಗಳನ್ನು ಮುರಿದ ಯಶಸ್ವಿ ಜೈಸ್ವಾಲ್! ವಿರಾಟ್-ಕಾಂಬ್ಳಿ ರೆಕಾರ್ಡ್’ಗಳೂ ಪುಡಿಪುಡಿ

Yashasvi Jaiswal Records: ಅಂತಿಮ ಟೆಸ್ಟ್’ನ ಮೊದಲ ಇನ್ನಿಂಗ್ಸ್‌’ನ ನಂತರ ಯಶಸ್ವಿ ಜೈಸ್ವಾಲ್ ಭಾರತದ ಪರ ಅತಿ ವೇಗದ 1000 ಟೆಸ್ಟ್ ರನ್‌’ಗಳನ್ನು ಪೂರೈಸಿದ್ದಾರೆ. ಕೇವಲ 9ನೇ ಪಂದ್ಯದಲ್ಲಿ ಈ ಸಾಧನೆ ಪೂರೈಸಿದ್ದು, ವಿನೋದ್ ಕಾಂಬ್ಳಿಯನ್ನು ಹಿಂದಿಕ್ಕಿದ್ದಾರೆ. ಅಂದರೆ ಕಾಂಬ್ಳಿ 1000 ಟೆಸ್ಟ್ ರನ್ ಪೂರೈಸಲು 12 ಪಂದ್ಯಗಳನ್ನು ತೆಗೆದುಕೊಂಡಿದ್ದರು.

Written by - Bhavishya Shetty | Last Updated : Mar 7, 2024, 09:39 PM IST
    • ಯಶಸ್ವಿ ಜೈಸ್ವಾಲ್ ಭಾರತದ ಪರ ಅತಿ ವೇಗದ 1000 ಟೆಸ್ಟ್ ರನ್‌’ಗಳನ್ನು ಪೂರೈಸಿದ್ದಾರೆ
    • ವಿರಾಟ್ ಕೊಹ್ಲಿಯಂತಹ ಅನುಭವಿ ಆಟಗಾರರ ದಾಖಲೆಗಳು ಕೂಡ ಬ್ರೇಕ್
    • ಒಂದು ವರ್ಷದಲ್ಲಿ ಶ್ರೇಷ್ಠರ ಪಟ್ಟಿಯಲ್ಲಿ ಸ್ಥಾನ ಪಡೆದ ಯಶಸ್ವಿ ಜೈಸ್ವಾಲ್
IND vs ENG: ಶತಕ, ಸಿಕ್ಸರ್, ರನ್ ಮಳೆ… ಒಂದೇ ಏಟಿಗೆ 5 ದಾಖಲೆಗಳನ್ನು ಮುರಿದ ಯಶಸ್ವಿ ಜೈಸ್ವಾಲ್! ವಿರಾಟ್-ಕಾಂಬ್ಳಿ ರೆಕಾರ್ಡ್’ಗಳೂ ಪುಡಿಪುಡಿ title=
Yashasvi Jaiswal

Yashasvi Jaiswal Records: ಯಶಸ್ವಿ ಜೈಸ್ವಾಲ್… ಇದು ಕಳೆದ ಒಂದು ವರ್ಷದಲ್ಲಿ ಶ್ರೇಷ್ಠರ ಪಟ್ಟಿಯಲ್ಲಿ ಸ್ಥಾನ ಪಡೆದ ಹೆಸರು. ಕೇವಲ 23 ವರ್ಷ ವಯಸ್ಸಿನ ಯಶಸ್ವಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದಾಖಲೆಗಳ ರಾಶಿಯನ್ನೇ ಸೃಷ್ಟಿಸಿದ್ದಾರೆ. ಇದೀಗ ವಿನೋದ್ ಕಾಂಬ್ಳಿ ಮತ್ತು ವಿರಾಟ್ ಕೊಹ್ಲಿಯಂತಹ ಅನುಭವಿ ಆಟಗಾರರ ದಾಖಲೆಗಳು ಕೂಡ ಬ್ರೇಕ್ ಆಗಿವೆ.

ಇದನ್ನೂ ಓದಿ: 300 ವರ್ಷಗಳ ಬಳಿಕ ಶಿವರಾತ್ರಿಯಂದೇ ರಾಜಯೋಗ: ಈ ಜನ್ಮರಾಶಿಗೆ ಬಂಗಾರದ ದಿನಗಳು ಆರಂಭ, ಶಿವಾನುಗ್ರಹದಿಂದ ಬದುಕಲ್ಲಿ ಮುನ್ನಡೆಯೇ!

ಅಂತಿಮ ಟೆಸ್ಟ್’ನ ಮೊದಲ ಇನ್ನಿಂಗ್ಸ್‌’ನ ನಂತರ ಯಶಸ್ವಿ ಜೈಸ್ವಾಲ್ ಭಾರತದ ಪರ ಅತಿ ವೇಗದ 1000 ಟೆಸ್ಟ್ ರನ್‌’ಗಳನ್ನು ಪೂರೈಸಿದ್ದಾರೆ. ಕೇವಲ 9ನೇ ಪಂದ್ಯದಲ್ಲಿ ಈ ಸಾಧನೆ ಪೂರೈಸಿದ್ದು, ವಿನೋದ್ ಕಾಂಬ್ಳಿಯನ್ನು ಹಿಂದಿಕ್ಕಿದ್ದಾರೆ. ಅಂದರೆ ಕಾಂಬ್ಳಿ 1000 ಟೆಸ್ಟ್ ರನ್ ಪೂರೈಸಲು 12 ಪಂದ್ಯಗಳನ್ನು ತೆಗೆದುಕೊಂಡಿದ್ದರು.

5ನೇ ಟೆಸ್ಟ್‌’ನಲ್ಲಿ ಜೈಸ್ವಾಲ್ 57 ರನ್‌’ಗಳ ಇನ್ನಿಂಗ್ಸ್ ಆಡಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಅವರ ಎರಡು ಮಹಾ ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜೈಸ್ವಾಲ್ 712 ರನ್ ಗಳಿಸಿದ್ದಾರೆ. 2016-17ರಲ್ಲಿ ಈ ತಂಡದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ 655 ರನ್ ಗಳಿಸಿದ್ದರು. ಅಂದರೆ ಯಶಸ್ವಿ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದ್ದಾರೆ. 2014-15ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ 692 ರನ್ ಗಳಿಸಿದ್ದರು.

ಯಶಸ್ವಿ ಜೈಸ್ವಾಲ್ ರನ್‌’ಗಳ ವಿಷಯದಲ್ಲಷ್ಟೇ ಅಲ್ಲ, ಟೆಸ್ಟ್‌’ನಲ್ಲಿ ನಿರ್ದಿಷ್ಟ ಒಂದು ತಂಡದ ವಿರುದ್ಧ ಸಿಕ್ಸರ್ ಬಾರಿಸಿ, ಸಿಕ್ಸರ್ ಕಿಂಗ್ ಎನಿಸಿಕೊಂಡಿದ್ದಾರೆ. ಅಂದರೆ ಇಂಗ್ಲೆಂಡ್ ವಿರುದ್ಧ ಕೇವಲ 9 ಇನ್ನಿಂಗ್ಸ್‌’ಗಳಲ್ಲಿ 26 ಸಿಕ್ಸರ್‌’ಗಳನ್ನು ಬಾರಿಸುವ ಮೂಲಕ ಸಚಿನ್ ಮತ್ತು ರೋಹಿತ್ ಅವರ ದಾಖಲೆಯನ್ನು ಮುರಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 25 ಸಿಕ್ಸರ್‌'ಗಳನ್ನು ಬಾರಿಸಲು ಸಚಿನ್ 74 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರೆ, ದಕ್ಷಿಣ ಆಫ್ರಿಕಾ ವಿರುದ್ಧ 20 ಇನ್ನಿಂಗ್ಸ್‌’ಗಳಲ್ಲಿ ರೋಹಿತ್ 22 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಪ್ರತಿ ಪಂದ್ಯದಲ್ಲೂ ಯಶಸ್ವಿ ಅದ್ಭುತವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಯಶಸ್ವಿ 9 ಇನ್ನಿಂಗ್ಸ್‌’ಗಳಲ್ಲಿ ಎರಡು ದ್ವಿಶತಕಗಳನ್ನು ಗಳಿಸುವ ಮೂಲಕ ಹಲವು ದಾಖಲೆಗಳನ್ನು ಮುರಿದಿದ್ದಾರೆ. 80, 15, 209, 17, 10, 214*, 73, 37 ಮತ್ತು 57 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.

ಇದನ್ನೂ ಓದಿ:  ಕ್ಯಾನ್ಸರ್, ತೂಕ ಇಳಿಕೆ, ಹೃದಯದ ಸಮಸ್ಯೆ… ಈ ಮೂರು ಸಮಸ್ಯೆಗೆ ಒಂದೇ ಪರಿಹಾರ ಈ ಕಪ್ಪು ಬೀಜದ ನೀರು!

ಯಶಸ್ವಿ ಜೈಸ್ವಾಲ್ ಭಾರತದ ಪರ ಒಂದೇ ಟೆಸ್ಟ್ ಸರಣಿಯಲ್ಲಿ 700ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ಸುನಿಲ್ ಗವಾಸ್ಕರ್ ವೆಸ್ಟ್ ಇಂಡೀಸ್ ವಿರುದ್ಧ ಈ ಸಾಧನೆ ಮಾಡಿದ್ದರು. ಆ ನಂತರ ಟೆಸ್ಟ್ ಸರಣಿಯಲ್ಲಿ ಯಾವುದೇ ಬ್ಯಾಟ್ಸ್‌ಮನ್ ಇಂಥಾ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News