WPL 2024: ಹರ್ಮನ್ vs ಎಲ್ಲಿಸ್… ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ-ಬೆಂಗಳೂರು ಮುಖಾಮುಖಿ: ಫೈನಲ್ ಪ್ರವೇಶಕ್ಕೆ ಬಿಗ್ ಫೈಟ್

WPL 2024 MI vs RCB: ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಇದರಲ್ಲಿ ಯಾರು ವಿಜೇತರಾಗುತ್ತಾರೋ ಅವರು ಫೈನಲ್ ಪ್ರವೇಶಿಸಲಿದ್ದಾರೆ. ಈ ಎರಡೂ ತಂಡಗಳು ಇದುವರೆಗಿನ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಇಲ್ಲಿಗೆ ತಲುಪಿವೆ.

Written by - Bhavishya Shetty | Last Updated : Mar 14, 2024, 08:16 PM IST
    • ಮಹಿಳಾ ಪ್ರೀಮಿಯರ್ ಲೀಗ್‌’ನ ಎರಡನೇ ಸೀಸನ್ ತನ್ನ ಕೊನೆಯ ಹಂತದಲ್ಲಿದೆ
    • ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಎಲಿಮಿನೇಟರ್ ಪಂದ್ಯ
    • ಎರಡನೇ ಸೀಸನ್’ನಲ್ಲಿ ಅದ್ಭುತ ಪ್ರದರ್ಶನ ನೀಡಿ ನಾಕೌಟ್ ಪ್ರವೇಶಿಸುವಲ್ಲಿ ಯಶಸ್ವಿ
WPL 2024: ಹರ್ಮನ್ vs ಎಲ್ಲಿಸ್… ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ-ಬೆಂಗಳೂರು ಮುಖಾಮುಖಿ: ಫೈನಲ್ ಪ್ರವೇಶಕ್ಕೆ ಬಿಗ್ ಫೈಟ್ title=
WPL 2024

WPL 2024 MI vs RCB: ಮಹಿಳಾ ಪ್ರೀಮಿಯರ್ ಲೀಗ್‌’ನ ಎರಡನೇ ಸೀಸನ್ ತನ್ನ ಕೊನೆಯ ಹಂತದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು 6 ಗೆಲುವು ಸಾಧಿಸಿ 12 ಅಂಕಗಳನ್ನು ಪಡೆದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಜೊತೆಗೆ ನೇರವಾಗಿ ಫೈನಲ್ ತಲುಪಿದೆ. ಇನ್ನೊಂದೆಡೆ ಎರಡನೇ ಫೈನಲಿಸ್ಟ್ ಯಾರೆಂಬುದು ಇನ್ನಷ್ಟೇ ತಿಳಿಯಲಿದೆ.

ಇದನ್ನೂ ಓದಿ:  2011ರಲ್ಲಿ ವಿಶ್ವಕಪ್ ಗೆಲ್ಲುತ್ತಿದ್ದಂತೆ… ತಂದೆಯ ಸ್ನೇಹಿತನ ಮಗಳನ್ನೇ ಪಟಾಯಿಸಿ ಮದುವೆಯಾದ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್’ಮನ್ ಈತ!

ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಇದರಲ್ಲಿ ಯಾರು ವಿಜೇತರಾಗುತ್ತಾರೋ ಅವರು ಫೈನಲ್ ಪ್ರವೇಶಿಸಲಿದ್ದಾರೆ. ಈ ಎರಡೂ ತಂಡಗಳು ಇದುವರೆಗಿನ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಇಲ್ಲಿಗೆ ತಲುಪಿವೆ.

ಮೊದಲ ಸೀಸನ್’ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಆರ್ ಸಿ ಬಿ, ಎರಡನೇ ಸೀಸನ್’ನಲ್ಲಿ ಅದ್ಭುತ ಪ್ರದರ್ಶನ ನೀಡಿ, ನಾಕೌಟ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಮಾರ್ಚ್ 15 ರಂದು, ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಂಬೈ ಮತ್ತು ಬೆಂಗಳೂರು ಫಿನಾಲೆ ಪ್ರವೇಶಕ್ಕೆ ಪೈಪೋಟಿ ನಡೆಸಲಿದೆ.

ನಾಕೌಟ್‌ಗೆ ಅರ್ಹತೆ ಪಡೆಯಲು, ಆರ್‌ಸಿಬಿ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಸ್ವಿಂಗ್ ಮತ್ತು ಸೀಮ್ ಬಹಳಷ್ಟು ಸಹಾಯ ಮಾಡಿತ್ತು. ಇದರಿಂದಾಗಿ ಮುಂಬೈ ಬ್ಯಾಟಿಂಗ್ ಕುಸಿದಿದ್ದಲ್ಲದೆ, ತಂಡದ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ವಿರುದ್ಧ ಪೆರ್ರಿ 6 ವಿಕೆಟ್‌’ಗಳನ್ನು ಪಡೆದಿದ್ದರು. ಇದು WPL ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಎಂದೆನಿಸಿಕೊಂಡಿದೆ.

ಮತ್ತೊಂದೆಡೆ, ಮುಂಬೈ ಪ್ಲೇಯಿಂಗ್ 11 ಸಮತೋಲನದಲ್ಲಿದೆ. ಮಂಗಳವಾರ ನಡೆದ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಎಲ್ಲಿಸ್ ಪೆರ್ರಿ ಮಿಂಚಿದ ಕಾರಣ, ಮುಂಬೈ ಅಲ್ಲೋಲ ಕಲ್ಲೋಲ ಆಗಿತ್ತು. ಇನ್ನು ಹರ್ಮನ್‌ಪ್ರೀತ್ ಈ ಸೀಸನ್’ನಲ್ಲಿ 6 ಪಂದ್ಯಗಳನ್ನಾಡಿದ್ದು 235 ರನ್ ಗಳಿಸಿ ತಂಡದ ಅಗ್ರ ರನ್ ಸ್ಕೋರರ್ ಆಗಿದ್ದರೆ, ಅಮನ್‌ಜೋತ್ ಕೌರ್, ಸಜ್ನಾ ಸಜೀವನ್ ಮತ್ತು ಯಾಸ್ತಿಕಾ ಭಾಟಿಯಾ ಕೂಡ ಬ್ಯಾಟಿಂಗ್’ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಇದನ್ನೂ ಓದಿ: ಐಪಿಎಲ್ 2024ರಲ್ಲಿ ಆಡದಿರಲು ರೋಹಿತ್ ಶರ್ಮಾ ನಿರ್ಧರಿಸಿ ಪೋಸ್ಟ್ ಶೇರ್! ಅಸಲಿ ಕಾರಣ ಇದು

ಹೀಗಿರುವಾಗ ಉಭಯ ತಂಡಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವೆ ಫೈಟ್ ಏರ್ಪಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಈ ಪಂದ್ಯ ಎಲಿಮಿನೇಟರ್ ಆಗಿರುವ ಕಾರಣ, ರೋಚಕತೆ ಇರುವುದರಲ್ಲಿ ಸಂಶಯವೇ ಇಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News