World Cup IND vs PAK: ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಗೆ ಅಡ್ಡಿಯಾಗುತ್ತಾ ಮಳೆ, ಇತ್ತೀಚಿನ ವೆದರ್ ಅಪ್‌ಡೇಟ್

World Cup IND vs PAK: ಹವಾಮಾನ ಇಲಾಖೆ ಮೊದಲೇ ಅಹಮದಾಬಾದ್‌ನಲ್ಲಿ ಮುಂದಿನ ಕೆಲವು ದಿನಗಳವರೆಗೆ ಮಳೆ ಮುನ್ಸೂಚನೆ ಬಗ್ಗೆ ಭವಿಷ್ಯ ನುಡಿದಿತ್ತು. ಆದರೆ, ಇದೀಗ ಇಂದು  ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಐಸಿಸಿ ವಿಶ್ವಕಪ್ 2023 ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ವರುಣ ಅಡ್ಡಿಯಾಗಲಿದ್ದಾನೆಯೇ ಎಂಬ ಆತಂಕ ಕೋಟ್ಯಂತರ ಅಭಿಮಾನಿಗಳಲ್ಲಿ ಮನೆ ಮಾಡಿದೆ. 

Written by - Yashaswini V | Last Updated : Oct 14, 2023, 09:44 AM IST
  • ಕ್ರಿಕೆಟ್ ನಲ್ಲಿ ವಿಶ್ವಕಪ್ ಫೈನಲ್ ಪಂದ್ಯಕ್ಕಿಂತ ಭಾರತ-ಪಾಕಿಸ್ತಾನ ಪಂದ್ಯ ತುಂಬಾ ರೋಚಕ.
  • ಇಂದು ಸಾಂಪ್ರದಾಯಿಕ ಎದುರಾಳಿಗಳಾದ ಇಂಡಿಯಾ-ಪಾಕಿಸ್ತಾನ ನಡುವೆ ನಡೆಯಲಿರುವ ಪಂದ್ಯದ ಮೇಲೆ ಕೋಟ್ಯಂತರ ಅಭಿಮಾನಿಗಳ ಚಿತ್ತ ನೆಟ್ಟಿದೆ.
World Cup IND vs PAK: ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಗೆ ಅಡ್ಡಿಯಾಗುತ್ತಾ ಮಳೆ, ಇತ್ತೀಚಿನ ವೆದರ್ ಅಪ್‌ಡೇಟ್ title=

World Cup IND vs PAK: ಇಂದು (ಅಕ್ಟೋಬರ್ 14, ಶನಿವಾರದಂದು) ಅಹಮದಾಬಾದ್‌ನ ವಿಶ್ವದ ಅತಿದೊಡ್ಡ ಪ್ರತಿಷ್ಠಿತ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ನಿರ್ಣಾಯಕ ಐ‌ಸಿ‌ಸಿ ವಿಶ್ವಕಪ್ 2023ರ ಪಂದ್ಯಾವಳಿಯಲ್ಲಿ  ಭಾರತೀಯ ಕ್ರಿಕೆಟ್ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ. ಇಂಡಿಯಾ vs ಪಾಕ್ ನಡುವಿನ ವಿಶ್ವಕಪ್ ಪಂದ್ಯ ವೀಕ್ಷಣೆಗಾಗಿ ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದೆ. ಆದರೆ,  ಇಂಡಿಯಾ-ಪಾಕ್ ಪಂದ್ಯಕ್ಕೆ ಮಳೆ ಅಡ್ಡಿಯಾಗು ಆತಂಕ ಎದುರಾಗಿದೆ. ಈ ಕುರಿತು ಇತ್ತೀಚಿನ ಹವಾಮಾನ ಅಪ್‌ಡೇಟ್‌ ಬಗ್ಗೆ ಇಲ್ಲಿದೆ ಮಾಹಿತಿ. 

ಹವಾಮಾನ ಇಲಾಖೆ ಮೊದಲೇ ಅಹಮದಾಬಾದ್‌ನಲ್ಲಿ ಮುಂದಿನ ಕೆಲವು ದಿನಗಳವರೆಗೆ ಮಳೆ ಮುನ್ಸೂಚನೆ ಬಗ್ಗೆ ಭವಿಷ್ಯ ನುಡಿದಿತ್ತು. ಆದರೆ, ಇದೀಗ ಹವಾಮಾನದ ಬಗ್ಗೆ ಒಂದು ದೊಡ್ಡ ಅಪ್‌ಡೇಟ್‌ ಹೊರಬಿದ್ದಿದೆ. 

ಇದನ್ನೂ ಓದಿ- IND vs PAK, ICC Cricket World Cup 2023: ಇಂದು-ಭಾರತ-ಪಾಕ್ ಕದನ: ವಿಜಯ ಮಾಲೆ ಯಾರ ಕೊರಳಿಗೆ? ಇತಿಹಾಸ ಹೇಳುವುದೇನು? 

ಅಹಮದಾಬಾದ್‌ನ ಹವಾಮಾನ ಇಲಾಖೆ ಹವಾಮಾನದ ಬಗ್ಗೆ ಇತ್ತೀಚಿನ ನವೀಕರಣವನ್ನು ನೀಡಿದ್ದು, ಮುಂದಿನ 5 ದಿನಗಳ ಕಾಲ ವಾತಾವರಣದಲ್ಲಿ ಸ್ವಲ್ಪ ಆರ್ದ್ರತೆ ಇರಲಿದೆ ಎಂದು ತಿಳಿಸಿದೆ. ಅರ್ಥಾತ್, ಇಂದು ಅಹಮದಾಬಾದ್‌ನಲ್ಲಿ ಸಾಧಾರಣ ಮಳೆ ಸಾಧ್ಯತೆ ಇದ್ದು ಮಳೆಯಿಂದಾಗಿ ಇಂಡಿಯಾ- ಪಾಕಿಸ್ತಾನ್ ಪಂದ್ಯಕ್ಕೆ ಅಡ್ಡಿಯಾಗುವ ಆಂತಕವಿಲ್ಲ ಎಂದು ಸ್ಪಷ್ಟಪಡಿಸಿದೆ. 47% ತೇವಾಂಶದೊಂದಿಗೆ ಆಟದ ಸಮಯದಲ್ಲಿ ತಾಪಮಾನವು ಸುಮಾರು 34-30 ಡಿಗ್ರಿ ಸೆಲ್ಸಿಯಸ್‌ನಷ್ಟಿರಬಹುದು ಎಂದು ತಿಳಿದುಬಂದಿದೆ. 

ಕ್ರಿಕೆಟ್ ನಲ್ಲಿ ವಿಶ್ವಕಪ್ ಫೈನಲ್ ಪಂದ್ಯಕ್ಕಿಂತ ಭಾರತ-ಪಾಕಿಸ್ತಾನ ಪಂದ್ಯ ತುಂಬಾ ರೋಚಕ. ಇಂದು ಸಾಂಪ್ರದಾಯಿಕ ಎದುರಾಳಿಗಳಾದ ಇಂಡಿಯಾ-ಪಾಕಿಸ್ತಾನ ನಡುವೆ ನಡೆಯಲಿರುವ ಪಂದ್ಯದ ಮೇಲೆ ಕೋಟ್ಯಂತರ ಅಭಿಮಾನಿಗಳ ಚಿತ್ತ ನೆಟ್ಟಿದೆ.  

ಇದನ್ನೂ ಓದಿ- ಸವಾಲೆಸೆದ ಪಾಕಿಸ್ತಾನವನ್ನು ಸದೆಬಡಿದ ಸಚಿನ್, 2015ರಲ್ಲಿ ಮೊದಲ ಪೆಟ್ಟು ನೀಡಿದ ಕೊಹ್ಲಿ, 2019ರಲ್ಲಿ ರೋಹಿತ್; ಈ ಬಾರಿ ಯಾರು?

ಭಾರತ ತನ್ನ ಆರಂಭಿಕ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು ಮತ್ತು ನಂತರ ಅಫ್ಘಾನಿಸ್ತಾನದ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಜಯವನ್ನು ದಾಖಲಿಸಿತು.  ಕಳೆದೆರಡು ಪಂದ್ಯಗಳಲ್ಲಿ ಆಡಲು ಸಾಧ್ಯವಾಗದ ಶುಭಮನ್ ಗಿಲ್ ಈ ಅಮೋಘ ಪಂದ್ಯಕ್ಕೆ ಸಂಪೂರ್ಣ ಸಿದ್ಧಗೊಂಡಿರುವುದು ಭಾರತೀಯ ಅಭಿಮಾನಿಗಳಿಗೆ ಸಂತಸದ ವಿಷಯವಾಗಿದ್ದು, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದನ್ನು ಖಚಿತಪಡಿಸಿದ್ದಾರೆ. 

ಇನ್ನೊಂದೆಡೆ, ಬಾಬರ್ ಅಜಮ್ ನೇತೃತ್ವದ ತಂಡವು ಎರಡು ಪಂದ್ಯಗಳಲ್ಲಿ ಎರಡು ಗೆಲುವುಗಳೊಂದಿಗೆ ತಮ್ಮ ವಿಶ್ವಕಪ್ ಅಭಿಯಾನಕ್ಕೆ ಪರಿಪೂರ್ಣ ಆರಂಭವನ್ನು ನೀಡಿದೆ. ಪಾಕಿಸ್ತಾನ 81 ರನ್‌ಗಳಿಂದ ನೆದರ್‌ಲ್ಯಾಂಡ್ಸ್ ಅನ್ನು ಸೋಲಿಸಿತು ಮತ್ತು ನಂತರ ಶ್ರೀಲಂಕಾ ವಿರುದ್ಧ ದಾಖಲೆಯ 345 ರನ್‌ಗಳನ್ನು ಬೆನ್ನಟ್ಟಿ ಪಾಯಿಂಟ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News