ಭಾರತದ ನಿಜವಾದ ಮ್ಯಾಚ್ ವಿನ್ನರ್ ಶಮಿ, ಕೊಹ್ಲಿ, ಸಿರಾಜ್ ಅಲ್ಲ.. ಈ ಆಟಗಾರ! ಆದ್ರೆ ಈತನಿಗೆ ಸಿಗುತ್ತಿಲ್ಲ ಸರಿಯಾದ ಮನ್ನಣೆ

Team India Match Winner, Cricket News in Kannada: ಈಗಾಗಲೇ ಸೆಮಿಫೈನಲ್ ತಲುಪಿರುವ ಭಾರತ ಕಳೆದ ದಿನ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 243 ರನ್‌’ಗಳ ಜಯ ಸಾಧಿಸಿದೆ.

Written by - Bhavishya Shetty | Last Updated : Nov 6, 2023, 08:25 PM IST
    • ಈಗಾಗಲೇ ಸೆಮಿಫೈನಲ್ ತಲುಪಿರುವ ಭಾರತ
    • ಟೀಂ ಇಂಡಿಯಾದಲ್ಲಿ ಒಬ್ಬ ಆಟಗಾರ ನಿಜವಾದ ಮ್ಯಾಚ್ ವಿನ್ನರ್ ತರ ಆಡುತ್ತಿದ್ದಾರೆ
    • ಆದರೆ ಅವರಿಗೆ ಸಾಕಷ್ಟು ಮನ್ನಣೆ ಸಿಗುತ್ತಿಲ್ಲ.
ಭಾರತದ ನಿಜವಾದ ಮ್ಯಾಚ್ ವಿನ್ನರ್ ಶಮಿ, ಕೊಹ್ಲಿ, ಸಿರಾಜ್ ಅಲ್ಲ.. ಈ ಆಟಗಾರ! ಆದ್ರೆ ಈತನಿಗೆ ಸಿಗುತ್ತಿಲ್ಲ ಸರಿಯಾದ ಮನ್ನಣೆ title=
Team India

Team India Match Winner: ಭಾರತ ಕ್ರಿಕೆಟ್ ತಂಡ ವಿಶ್ವಕಪ್’ನಲ್ಲಿ ಧೂಳೆಬ್ಬಿಸುತ್ತಿದೆ. ಇದುವರೆಗೆ ಆಡಿರುವ 8 ಪಂದ್ಯಗಳಲ್ಲೂ ಗೆದ್ದಿರುವ ಟೀಂ ಇಂಡಿಯಾ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ.

ಈಗಾಗಲೇ ಸೆಮಿಫೈನಲ್ ತಲುಪಿರುವ ಭಾರತ ಕಳೆದ ದಿನ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು. ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 243 ರನ್‌’ಗಳ ಜಯ ಸಾಧಿಸಿದೆ.

ಇದನ್ನೂ ಓದಿ: 146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು: ಮೈದಾನಕ್ಕೆ ಬರದೆಯೇ ಬರದೆ ಔಟ್ ಆದ ಬ್ಯಾಟರ್!

ಈ ಪಂದ್ಯದಲ್ಲಿ ರವೀಂದ್ರ ಜಡೇಜಾ 5 ವಿಕೆಟ್ ಪಡೆದು ಮಿಂಚಿದರೆ, ಶಮಿ ಮತ್ತು ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದಿದ್ದರು. ಬ್ಯಾಟಿಂಗ್’ನಲ್ಲಿ ವಿರಾಟ್ ಕೊಹ್ಲಿ ಮಿಂಚಿದ್ದು, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದರು.

ಟೀಂ ಇಂಡಿಯಾದಲ್ಲಿ ಒಬ್ಬ ಆಟಗಾರ ನಿಜವಾದ ಮ್ಯಾಚ್ ವಿನ್ನರ್ ತರ ಆಡುತ್ತಿದ್ದಾರೆ. ಆದರೆ ಅವರಿಗೆ ಸಾಕಷ್ಟು ಮನ್ನಣೆ  ಸಿಗುತ್ತಿಲ್ಲ. ಅವರು ಬೇರೆ ಯಾರು ಅಲ್ಲ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ. 

ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿಶ್ವಕಪ್‌’ನಲ್ಲಿಯೇ ಭಾರತದ ಪರ ವೇಗವಾಗಿ ಶತಕ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದರು. ಆ ಬಳಿಕ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿ ತಂಡಕ್ಕೆ ಗೆಲುವು ತಂದಿದ್ದರು.

ಇವಿಷ್ಟೇ ಅಲ್ಲದೆ, ರೋಹಿತ್ ಹಲವು ಪಂದ್ಯಗಳಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ್ದರು. ಬೌಂಡರಿ, ಸಿಕ್ಸರ್’ಗಳ ಸುರಿಮಳೆಗೈಯುವ ರೋಹಿತ್, ಆರಂಭಿಕರಾಗಿ ಮತ್ತು ನಾಯಕನಾಗಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುತ್ತಾರೆ.

ಆದರೆ ರೋಹಿತ್ ತಮ್ಮ ವೈಯಕ್ತಿಕ ದಾಖಲೆಗಳಿಗೆ ಯಾವುದೇ ಪ್ರಾಮುಖ್ಯತೆ ನೀಡದೆ ಆಡುತ್ತಿದ್ದಾರೆ. ರೋಹಿತ್ ಆಡಿರುವ 8 ಪಂದ್ಯಗಳಲ್ಲಿ 100ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌’ನೊಂದಿಗೆ 442 ರನ್ ಗಳಿಸಿದ್ದಾರೆ.

ಏಕದಿನ ವಿಶ್ವಕಪ್’ನಲ್ಲಿ ರೋಹಿತ್ ಅದ್ಭುತ ದಾಖಲೆ ಹೊಂದಿದ್ದಾರೆ. ಅವರು ಆಡುತ್ತಿರುವುದು ಮೂರನೇ ವಿಶ್ವಕಪ್. ಆದರೆ  ಐದು ವಿಶ್ವಕಪ್ ಆಡಿದವರಿಗೂ ಸಾಧ್ಯವಾಗದ ಏಳು ಶತಕಗಳನ್ನು ಇವರ ಬತ್ತಳಿಕೆಯಲ್ಲಿದೆ.

ಇದನ್ನೂ ಓದಿ: ಈ ವ್ಯಕ್ತಿಗಳು ಅಪ್ಪಿತಪ್ಪಿಯೂ ಫೇಸ್ ವ್ಯಾಕ್ಸಿಂಗ್ ಮಾಡಬಾರದು, ಇದರಿಂದ ಆಗುವ ಅಪಾಯಗಳೇನು ಗೊತ್ತೇ?

ಫೀಲ್ಡ್ ಸೆಟ್ಟಿಂಗ್, ಬೌಲರ್‌ಗಳನ್ನು ಬಳಸಿಕೊಳ್ಳುವ ರೀತಿ ಮತ್ತು ಡಿ ಆರ್‌ ಎಸ್ ಬಳಸುವ ರೀತಿ ಎಲ್ಲವೂ ಸಖತ್ ಆಗಿದೆ, ಆದ್ರೆ ನಾಯಕನ ಸ್ಥಾನದಲ್ಲಿದ್ದಾಗ ಧೋನಿ ಮೇಲೆ ಇದ್ದ ಕ್ರೇಜ್, ರೋಹಿತ್ ಬಗ್ಗೆ ಇಲ್ಲ. ಹೀಗಾಗೇ ಇತರರಿಗಿಂದ ಕೊಂಚ ಕಡಿಮೆ ಮಟ್ಟದಲ್ಲೇ ರೋಹಿತ್’ಗೆ ಮನ್ನಣೆ ಸಿಗುತ್ತಿದೆ ಎಂದು ಹೇಳಬಹುದು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News