ವಿಶ್ವಕಪ್ ಸೋಲಿನ ಬಳಿಕ ಬಿಕ್ಕಿಬಿಕ್ಕಿ ಅತ್ತ ರೋಹಿತ್ ಶರ್ಮಾ! ತಲೆ ಬಾಗಿಸಿ ಮೈದಾನದಿಂದ ಹೊರಬಂದ ಕ್ಯಾಪ್ಟನ್ ವಿಡಿಯೋ

Rohit Sharma Crying Video: 2023ರ ವಿಶ್ವಕಪ್‌’ನ ಫೈನಲ್‌’ನಲ್ಲಿ ಆಸ್ಟ್ರೇಲಿಯದ ವಿರುದ್ಧ 6 ವಿಕೆಟ್‌’ಗಳಿಂದ ಸೋಲನುಭವಿಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಳುತ್ತಿರುವ ದೃಶ್ಯ ಕಂಡುಬಂದಿದೆ

Written by - Bhavishya Shetty | Last Updated : Nov 19, 2023, 10:59 PM IST
    • ವಿಶ್ವಕಪ್ ಟ್ರೋಫಿ ಗೆಲ್ಲುವ ಟೀಂ ಇಂಡಿಯಾದ ಕನಸು ಭಗ್ನ
    • ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಳುತ್ತಿರುವ ದೃಶ್ಯ
    • ತಲೆ ಬಾಗಿಸುತ್ತಾ ಮೈದಾನದಿಂದ ನಿರ್ಗಮಿಸಿದ ರೋಹಿತ್ ಶರ್ಮಾ
ವಿಶ್ವಕಪ್ ಸೋಲಿನ ಬಳಿಕ ಬಿಕ್ಕಿಬಿಕ್ಕಿ ಅತ್ತ ರೋಹಿತ್ ಶರ್ಮಾ! ತಲೆ ಬಾಗಿಸಿ ಮೈದಾನದಿಂದ ಹೊರಬಂದ ಕ್ಯಾಪ್ಟನ್ ವಿಡಿಯೋ title=
Rohit Sharma Crying Video

World Cup 2023, Rohit Sharma Crying Video: ತನ್ನದೇ ನೆಲದಲ್ಲಿ ವಿಶ್ವಕಪ್ ಟ್ರೋಫಿ ಗೆಲ್ಲುವ ಟೀಂ ಇಂಡಿಯಾದ ಕನಸು ಭಗ್ನಗೊಂಡಿದೆ. 2023ರ ವಿಶ್ವಕಪ್‌’ನ ಫೈನಲ್‌’ನಲ್ಲಿ ಆಸ್ಟ್ರೇಲಿಯದ ವಿರುದ್ಧ 6 ವಿಕೆಟ್‌’ಗಳಿಂದ ಸೋಲನುಭವಿಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಳುತ್ತಿರುವ ದೃಶ್ಯ ಕಂಡುಬಂದಿದೆ.

ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಗೆದ್ದು ಮಿಂಚಿದ ಆಸ್ಟ್ರೇಲಿಯಾಗೆ- ರನ್ನರ್ ಅಪ್ ಆದ ಭಾರತಕ್ಕೆ ಸಿಕ್ಕ ಹಣ ಒಟ್ಟು ಎಷ್ಟು ಕೋಟಿ ಗೊತ್ತಾ?

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಲೆ ಬಾಗಿಸುತ್ತಾ ಮೈದಾನದಿಂದ ನಿರ್ಗಮಿಸಿ ನೇರವಾಗಿ ಡ್ರೆಸ್ಸಿಂಗ್ ರೂಂಗೆ ತೆರಳಿದ್ದಾರೆ. ಮಿಚೆಲ್ ಸ್ಟಾರ್ಕ್ ನೇತೃತ್ವದ ಬೌಲರ್‌’ಗಳ ಅದ್ಭುತ ಪ್ರದರ್ಶನದ ನಂತರ, ಟ್ರಾವಿಸ್ ಹೆಡ್ ಅವರ ಶತಕದ ನೆರವಿನಿಂದ ಭಾನುವಾರ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್‌’ನಲ್ಲಿ ಆಸ್ಟ್ರೇಲಿಯಾ ಆರು ವಿಕೆಟ್‌’ಗಳಿಂದ ಭಾರತವನ್ನು ಸೋಲಿಸಿತು. ಈ ಮೂಲಕ ಆರನೇ ಏಕದಿನ ವಿಶ್ವಕಪ್ ಗೆದ್ದುಕೊಂಡಿತು.

 

ಇದನ್ನೂ ಓದಿ: “ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಇಂಥಾ ನಿರ್ಧಾರ ತೆಗೆದುಕೊಳ್ಳಬಾರದಿತ್ತು”- ಸುನಿಲ್ ಗವಾಸ್ಕರ್

ಟೀಂ ಇಂಡಿಯಾದ ಕನಸು ಭಗ್ನ:

ಸತತ 10 ಗೆಲುವಿನ ನಾಗಾಲೋಟದಲ್ಲಿ ಫೈನಲ್ ತಲುಪಿರುವ ಭಾರತ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೂರನೇ ವಿಶ್ವಕಪ್ ಗೆಲ್ಲುವ ನಿರೀಕ್ಷೆ ಇತ್ತು. ನಾಯಕ ರೋಹಿತ್ ಶರ್ಮಾ ಕೂಡ ಮೊದಲ ಬಾರಿಗೆ ಏಕದಿನ ವಿಶ್ವ ಚಾಂಪಿಯನ್ ಆಗುವ ಕನಸು ಕಂಡಿದ್ದರು. ಆದರೆ ಪ್ಯಾಟ್ ಕಮ್ಮಿನ್ಸ್ ತಂಡ ಈ ಕನಸನ್ನು ನನಸಾಗಲು ಬಿಡಲಿಲ್ಲ. ಭಾರತ ವಿರುದ್ಧದ ಮೊದಲ ಪಂದ್ಯ ಸೇರಿದಂತೆ ಸತತ ಎರಡು ಸೋಲುಗಳೊಂದಿಗೆ ಕಳಪೆ ಫಾರ್ಮ್’ನಲ್ಲಿದ್ದ ಆಸೀಸ್, ಆ ಬಳಿಕರ ಸತತ ಒಂಬತ್ತು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News