ನೆದರ್ಲ್ಯಾಂಡ್ಸ್ ವಿರುದ್ಧ ಶ್ರೇಷ್ಠ ದಾಖಲೆ ಬರೆದ ರೋಹಿತ್ ಶರ್ಮಾ! ವಿರಾಟ್, ದ್ರಾವಿಡ್ ಕೈಯಲ್ಲೂ ಸಾಧ್ಯವಾಗದ ಸಾಧನೆ ಇದು

Rohit Sharma World Record, Cricket News in Kannada: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 2023ರ ವಿಶ್ವಕಪ್‌’ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ನಂತರ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಇವರೇ.

Written by - Bhavishya Shetty | Last Updated : Nov 12, 2023, 03:19 PM IST
    • ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ
    • ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ
    • 14 ಸಾವಿರ ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್
ನೆದರ್ಲ್ಯಾಂಡ್ಸ್ ವಿರುದ್ಧ ಶ್ರೇಷ್ಠ ದಾಖಲೆ ಬರೆದ ರೋಹಿತ್ ಶರ್ಮಾ! ವಿರಾಟ್, ದ್ರಾವಿಡ್ ಕೈಯಲ್ಲೂ ಸಾಧ್ಯವಾಗದ ಸಾಧನೆ ಇದು title=
Rohit Sharma

Rohit Sharma World Record: ಟೀಂ ಇಂಡಿಯಾ ತನ್ನ ಕೊನೆಯ ಲೀಗ್ ಪಂದ್ಯವನ್ನು ನೆದರ್ಲ್ಯಾಂಡ್ಸ್ ವಿರುದ್ಧ ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುತ್ತಿದೆ. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.

ಇದನ್ನೂ ಓದಿ: ಒಳ್ಳೆಯವರಿಗೆ ನಾವೂ ಒಳ್ಳೆಯವರು, ಟೈಂ ಬಂದಾಗ ಬಡ್ಡಿ ಸಮೇತ ರಿಟರ್ನ್ ಕೊಡ್ತಿರೋದೆ!: ಸೆಹ್ವಾಗ್

ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 2023ರ ವಿಶ್ವಕಪ್‌’ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ನಂತರ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಇವರೇ. ಅಂದಹಾಗೆ ಈಗಾಗಲೇ ಆಡಿರುವ 8 ಪಂದ್ಯಗಳಲ್ಲಿ 55.25 ಸರಾಸರಿಯಲ್ಲಿ 442 ರನ್ ಗಳಿಸಿದ್ದಾರೆ. ಮತ್ತೊಂದೆಡೆ ಕೊಹ್ಲಿ ಇದುವರೆಗೆ 543 ರನ್‌’ಗಳ ಕೊಡುಗೆ ನೀಡಿದ್ದಾರೆ.

ವಿಶೇಷ ಕ್ಲಬ್ ಪ್ರವೇಶಿಸಿದ ರೋಹಿತ್:

ರೋಹಿತ್ ಶರ್ಮಾ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ 12 ರನ್ ಗಳಿಸಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಆರಂಭಿಕರಾಗಿ 14 ಸಾವಿರ ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಇದುವರೆಗೆ 311 ಪಂದ್ಯಗಳ 324 ಇನ್ನಿಂಗ್ಸ್‌’ಗಳಲ್ಲಿ ಆರಂಭಿಕರಾಗಿ 13988 ರನ್ ಗಳಿಸಿದ್ದರು. ಆದರೆ ಇಂದು ನಡೆದ ಪಂದ್ಯದಲ್ಲಿ ಪಂದ್ಯ ಶುರುವಾಗುತ್ತಿದ್ದಂತೆ ಅದ್ಭುತ ಬ್ಯಾಟಿಂಗ್ ಮಾಡಿದ್ದು, ಈ ಮೂಲಕ ವಿಶೇಷ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಈ ಸಾಧನೆ ಮೂಲಕ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರಿದ್ದ ವಿಶೇಷ ಕ್ಲಬ್ ಸೇರಿದ್ದಾರೆ ಹಿಟ್ ಮ್ಯಾನ್.

ಇದನ್ನೂ ಓದಿ: ಈ ರಾಶಿಯ ಜನರ ಅದೃಷ್ಟದ ಬಾಗಿಲು ಓಪನ್… ಮುಂದಿನ 30 ದಿನ ಧನಸಂಪತ್ತಿಗೆ ಕೊರತೆಯೇ ಇಲ್ಲ-ಸರ್ಕಾರಿ ನೌಕರಿ ಜೊತೆ ವಿದೇಶ ಪ್ರಯಾಣದ ಯೋಗ

ಆರಂಭಿಕರಾಗಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್:

ವೀರೇಂದ್ರ ಸೆಹ್ವಾಗ್ ಭಾರತದ ಪರ ಆರಂಭಿಕರಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. 332 ಪಂದ್ಯಗಳಲ್ಲಿ 16119 ರನ್ ಗಳಿಸಿದ್ದಾರೆ. ಇದರಲ್ಲಿ 36 ಶತಕ ಮತ್ತು 67 ಅರ್ಧ ಶತಕಗಳಿ ಸೇರಿವೆ. ಈ ಪಟ್ಟಿಯಲ್ಲಿ ಎರಡನೇ ಹೆಸರು ಸಚಿನ್ ತೆಂಡೂಲ್ಕರ್. ಸಚಿನ್ 346 ಪಂದ್ಯಗಳ 342 ಇನ್ನಿಂಗ್ಸ್‌’ಗಳಲ್ಲಿ 15335 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News