Jasprit Bumrah: ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಆಸ್ತಿ ವಿವರ ತಿಳಿದರೆ ಶಾಕ್ ಆಗೋದು ಗ್ಯಾರಂಟಿ!

World Cup-2023: ODI ವಿಶ್ವಕಪ್-2023 ರಲ್ಲಿ ಟೀಮ್‌ ಇಂಡಿಯಾ ಫೈನಲ್‌ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಸ್ಪ್ರೀತ್ ಬುಮ್ರಾ ಅವರ ಆಸ್ತಿ ವಿಚಾರವಾಗಿ ಮಾಹಿತಿಯೊಂದು ಹೊರಬಿದ್ದಿದೆ.. ಈ ಆಟಗಾರ ಬಹುಕೋಟಿಯ ಒಡೆಯ ಎನ್ನಲಾಗುತ್ತಿದೆ.. 

Written by - Savita M B | Last Updated : Nov 20, 2023, 05:11 PM IST
  • ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿದ್ದು ಕೋಟ್ಯಂತರ ಅಭಿಮಾನಿಗಳನ್ನು ನಿರಾಸೆಗೊಳಿಸಿದೆ.
  • ಈ ಮೆಗಾ ಟೂರ್ನಿಯಲ್ಲಿ ಭಾರತ ಬೌಲಿಂಗ್ ತಂಡ ನಿರೀಕ್ಷೆಗೂ ಮೀರಿ ಮಿಂಚಿತು.
  • ಟೀಮ್ ಇಂಡಿಯಾ ಫೈನಲ್ ತಲುಪುವಲ್ಲಿ ಶಮಿ ಜೊತೆಗೆ ಜಸ್ಪ್ರೀತ್ ಬುಮ್ರಾ ಪ್ರಮುಖ ಪಾತ್ರ ವಹಿಸಿದ್ದಾರೆ
Jasprit Bumrah: ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಆಸ್ತಿ ವಿವರ ತಿಳಿದರೆ ಶಾಕ್ ಆಗೋದು ಗ್ಯಾರಂಟಿ!  title=

Jasprit Bumrah: ODI ವಿಶ್ವಕಪ್-2023 ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿದ್ದು ಕೋಟ್ಯಂತರ ಅಭಿಮಾನಿಗಳನ್ನು ನಿರಾಸೆಗೊಳಿಸಿದೆ. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಭಾರತ ತಂಡ ಅಂತಿಮ ಸ್ಕೋರ್ ನಲ್ಲಿ ಪತನಗೊಂಡಿತು. ಆದರೆ ಈ ಮೆಗಾ ಟೂರ್ನಿಯಲ್ಲಿ ಭಾರತ ಬೌಲಿಂಗ್ ತಂಡ ನಿರೀಕ್ಷೆಗೂ ಮೀರಿ ಮಿಂಚಿತು. 

ಟೀಮ್ ಇಂಡಿಯಾ ಫೈನಲ್ ತಲುಪುವಲ್ಲಿ ಶಮಿ ಜೊತೆಗೆ ಪ್ರಮುಖ ಪಾತ್ರ ವಹಿಸಿದ ಜಸ್ಪ್ರೀತ್ ಬುಮ್ರಾ ವಿಶಿಷ್ಟ ಬೌಲಿಂಗ್ ಶೈಲಿಯೊಂದಿಗೆ ಸ್ಥಿರವಾಗಿ ಯಾರ್ಕರ್‌ಗಳನ್ನು ಬೌಲ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಭಾರತ ತಂಡದ ಬೌಲಿಂಗ್ ಪಡೆಯ ಬೆನ್ನೆಲುಬಾಗಿರುವ ಅವರು ತಂಡಕ್ಕೆ ಹಲವು ಗೆಲವುಗಳನ್ನು ತಂದುಕೊಟ್ಟರು.. ಇದೀಗ ಬುಮ್ರಾ ಅವರ ಆದಾಯ ವಿವರಗಳು, ಐಷಾರಾಮಿ ಜೀವನದ ಬಗ್ಗೆ ನೋಡೋಣ.

ಇದನ್ನೂ ಓದಿ-ಡ್ರೆಸ್ಸಿಂಗ್ ರೂಂಗೆ ತೆರಳಿ ಕಣ್ಣೀರಾಗಿದ್ದ ಶಮಿ, ಜಡೇಜಾ ಅವರನ್ನು ಸಂತೈಸಿದ ಪ್ರಧಾನಿ ಮೋದಿ !

ತೀಕ್ಷ್ಣವಾದ ಯಾರ್ಕರ್‌ಗಳೊಂದಿಗೆ ಬುಮ್ರಾ ಕಡಿಮೆ ಅವಧಿಯಲ್ಲಿ ಭಾರತ ತಂಡದ ಪ್ರಮುಖ ವೇಗಿ ಎನಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಅವರ ವೈವಿಧ್ಯಮಯ ಬೌಲಿಂಗ್ ಕ್ರಮ. ಅವರು 2019 ರಲ್ಲಿ ವರ್ಷದ ಐಸಿಸಿ ಏಕದಿನ ಅಂತಾರಾಷ್ಟ್ರೀಯ ಆಟಗಾರರಾಗಿ ಆಯ್ಕೆಯಾದರು. ಕ್ರಿಕೆಟ್‌ನಲ್ಲಿ ಉತ್ತಮ ಬೌಲರ್ ಎಂದು ಹೆಸರಾಗಿರುವ ಬುಮ್ರಾ ಆದಾಯದ ದೃಷ್ಟಿಯಿಂದಲೂ ಉತ್ತಮವಾಗಿದ್ದಾರೆ...

ಇದನ್ನೂ ಓದಿ-IND vs AUS: ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಆಸಿಸ್‌ ಆಟಗಾರ..‌ ಇದೇನಾ ಸಂಸ್ಕೃತಿ ಎಂದು ನೆಟ್ಟಿಗರ ತರಾಟೆ!?

2023 ರಲ್ಲಿ ಜಸ್ಪ್ರೀತ್ ಬುಮ್ರಾ ಅವರ ನಿವ್ವಳ ಮೌಲ್ಯವು $ 7 ಮಿಲಿಯನ್ (ರೂ. 55 ಕೋಟಿ) ಎಂದು ಅಂದಾಜಿಸಲಾಗಿದೆ. ಬಿಸಿಸಿಐ ಒಪ್ಪಂದದ ಮೂಲಕ ಈ ಆಟಗಾರ ವಾರ್ಷಿಕ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳಿಗೆ ಕ್ರಮವಾಗಿ ರೂ. 15 ಲಕ್ಷ, ರೂ. 6 ಲಕ್ಷ, 3 ಲಕ್ಷ ಪಡೆಯುತ್ತಿದ್ದಾರೆ. ಬುಮ್ರಾ ಅವರನ್ನು ಮುಂಬೈ ಇಂಡಿಯನ್ಸ್ ಐಪಿಎಲ್‌ಗಾಗಿ ರೂ.12 ಕೋಟಿಗೆ ಒಪ್ಪಂದ ಮಾಡಲಾಗಿದೆ ಎಂದು ವರದಿಯಾಗಿದೆ.. 

ಬಿಸಿಸಿಐ ಒಪ್ಪಂದದ ಜೊತೆಗೆ ವಿವಿಧ ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡುವ ಮೂಲಕ ಬುಮ್ರಾ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಡ್ರೀಮ್ 11, OnePlus ವೇರಿಯಬಲ್ಸ್, Zangly, Bot, Royal Stag, Cult Sport, S Trolo, Unix, Bharat Pay ನಂತಹ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News