ವಿಶ್ವಕಪ್ ನಲ್ಲಿ ಯಾವುದೇ ಭಾರತೀಯ ಕ್ಯಾಪ್ಟನ್ ಬರೆಯದ ಈ ಇತಿಹಾಸ್ ಇಂದು ಹಿಟ್ ಮ್ಯಾನ್ ರೋಹಿತ್ ಬರೆಯುವರೆ?

ICC World Cup 2023 Final Ind Vs Aus: ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಟೂರ್ನಿಯುದ್ದಕ್ಕೂ ಟೀಂ ಇಂಡಿಯಾ ಪರ ರೋಹಿತ್ ಸತತ ಬ್ಯಾಟಿಂಗ್ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಇದೀಗ ಅವರ ಬಳಿ ಇತಿಹಾಸ ಬದಲಾಯಿಸುವ ಅವಕಾಶವನ್ನು ಇದೆ. (ICC World Cup 2023 News In Kannada)

Written by - Nitin Tabib | Last Updated : Nov 19, 2023, 01:24 PM IST
  • ವಾಸ್ತವದಲ್ಲಿ, ರೋಹಿತ್‌ಗೆ ಫೈನಲ್‌ನಲ್ಲಿ ಭಾರತದ ಪರ ಶತಕ ಬಾರಿಸಿದ ಮೊದಲ ನಾಯಕನಾಗುವ ಅವಕಾಶವಿದೆ.
  • ಟೀಂ ಇಂಡಿಯಾ ನಾಲ್ಕನೇ ಬಾರಿ ವಿಶ್ವಕಪ್ ಫೈನಲ್ ತಲುಪಿದ್ದು, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇದುವರೆಗೆ ಶತಕ ಸಿಡಿಸಲು ಯಾವುದೇ ಭಾರತೀಯ ನಾಯಕನಿಗೆ ಸಾಧ್ಯವಾಗಿಲ್ಲ.
  • ಹೀಗಾಗಿ ರೋಹಿತ್ ಶರ್ಮಾ ಫೈನಲ್ ನಲ್ಲಿ ಶತಕ ಬಾರಿಸಿ ಇತಿಹಾಸ ಸೃಷ್ಟಿಸುವ ಅವಕಾಶ ಪಡೆದಿದ್ದಾರೆ.
ವಿಶ್ವಕಪ್ ನಲ್ಲಿ ಯಾವುದೇ ಭಾರತೀಯ ಕ್ಯಾಪ್ಟನ್ ಬರೆಯದ ಈ ಇತಿಹಾಸ್ ಇಂದು ಹಿಟ್ ಮ್ಯಾನ್ ರೋಹಿತ್ ಬರೆಯುವರೆ? title=

ಅಹಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೂರ್ನಿಯುದ್ದಕ್ಕೂ ಸ್ಫೋಟಕ ಪ್ರದರ್ಶನ ನೀಡಿದ್ದಾರೆ. ರೋಹಿತ್ ಶರ್ಮಾ ಅವರು ಫೈನಲ್‌ನಲ್ಲೂ ತಮ್ಮ ಬಿರುಸಿನ ಆಟವನ್ನು ಪ್ರದರ್ಶಿಸುತ್ತಾರೆ ಮತ್ತು ಭಾರತಕ್ಕೆ ವಿಶ್ವಕಪ್ ಟ್ರೋಫಿಯನ್ನು ತರುತ್ತಾರೆ ಎಂಬುದು ಭಾರತೀಯ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಯಾಗಿದೆ. ಅಷ್ಟೇ ಅಲ್ಲ ಅವರು ವಿಶ್ವಕಪ್ ನಲ್ಲಿ ಹೊಸ ಇತಿಹಾಸ ಬರೆಯುವ ಅವಕಾಶವನ್ನು ಕೂಡ ಹೊಂದಿದ್ದಾರೆ. ಇಡೀ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. (ICC World Cup 2023 News In Kannada)

ರೋಹಿತ್ ಇದುವರೆಗೆ 10 ಪಂದ್ಯಗಳಲ್ಲಿ 1 ಶತಕ ಮತ್ತು 3 ಅರ್ಧ ಶತಕಗಳ ನೆರವಿನಿಂದ 550 ರನ್ ಗಳಿಸಿದ್ದಾರೆ. ಆದರೆ, ಇದೀಗ ಫೈನಲ್ ನಲ್ಲಿ ಫಾರ್ಮ್ ತೋರಿಸುವ ಅವಕಾಶ ಸಿಕ್ಕಿದ್ದು ಆಸ್ಟ್ರೇಲಿಯದ ಬೌಲರ್ ಗಳಿಗೆ ಶಾಕ್ ನೀಡಲಿದ್ದಾರೆಯೇ ಎಂಬುದು ಕಾಲವೇ ನಿರ್ಧರಿಸಲಿದೆ.

ವಾಸ್ತವದಲ್ಲಿ, ರೋಹಿತ್‌ಗೆ ಫೈನಲ್‌ನಲ್ಲಿ ಭಾರತದ ಪರ ಶತಕ ಬಾರಿಸಿದ ಮೊದಲ ನಾಯಕನಾಗುವ ಅವಕಾಶವಿದೆ. ಟೀಂ ಇಂಡಿಯಾ ನಾಲ್ಕನೇ ಬಾರಿ ವಿಶ್ವಕಪ್ ಫೈನಲ್ ತಲುಪಿದ್ದು, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇದುವರೆಗೆ ಶತಕ ಸಿಡಿಸಲು ಯಾವುದೇ ಭಾರತೀಯ ನಾಯಕನಿಗೆ ಸಾಧ್ಯವಾಗಿಲ್ಲ. ಹೀಗಾಗಿ ರೋಹಿತ್ ಶರ್ಮಾ ಫೈನಲ್ ನಲ್ಲಿ ಶತಕ ಬಾರಿಸಿ ಇತಿಹಾಸ ಸೃಷ್ಟಿಸುವ ಅವಕಾಶ ಪಡೆದಿದ್ದಾರೆ.

ಇದನ್ನೂ ಓದಿ-ICC World Cup 2023 Final ನಲ್ಲಿ ಈ 4 ಆಟಗಾರರು ಮ್ಯಾಚ್ ವಿನರ್ಸ್ ಆದ್ರೆ, ಅವರು ಪ್ಲೇಯಿಂಗ್ 11 ಭಾಗವಾಗಿರುವುದಿಲ್ಲ!

ವಿಶ್ವಕಪ್ ಫೈನಲ್‌ನಲ್ಲಿ ಭಾರತದ ನಾಯಕರ ಪ್ರದರ್ಶನ ಹೇಗಿದೆ?
ಹಾಗೆ ನೋಡಿದರೆ, ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಭಾರತೀಯ ನಾಯಕರ ದಾಖಲೆ ಅಷ್ಟೇನೂ ವಿಶೇಷವಾಗಿಲ್ಲ. 1983ರಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಫೈನಲ್ ತಲುಪಿ ಚಾಂಪಿಯನ್ ಆಗಿತ್ತು. ಆದರೆ ಆಗ ಟೀಂ ಇಂಡಿಯಾ ನಾಯಕರಾಗಿದ್ದ ಕಪಿಲ್ ದೇವ್ ಫೈನಲ್‌ನಲ್ಲಿ ಕೇವಲ 15 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದಾದ ನಂತರ 2003ರಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಫೈನಲ್ ತಲುಪಿತ್ತು.

ಇದನ್ನೂ ಓದಿ-ICC World Cup 2003 ಮತ್ತು 2023 ಫೈನಲ್ ಪಂದ್ಯಗಳ ನಡುವೆ ಅದ್ಭುತ ಹೋಲಿಕೆ, ಭಾರತ ಚಾಂಪಿಯನ್ ಆಗುವುದು ಪಕ್ಕಾ!

ಆಸ್ಟ್ರೇಲಿಯಾ ವಿರುದ್ಧದ ಈ ಫೈನಲ್‌ನಲ್ಲಿ ಸೌರವ್ ಗಂಗೂಲಿ ಕೇವಲ 24 ರನ್ ಗಳಿಸಿ ಔಟಾದರು. 2011 ರ ವಿಶ್ವಕಪ್‌ನಲ್ಲಿ, ಮಹೇಂದ್ರ ಸಿಂಗ್ ಧೋನಿ ಶ್ರೀಲಂಕಾ ವಿರುದ್ಧ 91 ರನ್‌ಗಳ ಗೆಲುವಿನ ಇನ್ನಿಂಗ್ಸ್ ಆಡಿದರು, ಆದರೆ ಅವರು ತಮ್ಮ ಬ್ಯಾಟ್‌ನಿಂದ ಶತಕ ಗಳಿಸಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇದೀಗ 2023ರ ವಿಶ್ವಕಪ್ ನ ಫೈನಲ್ ನಲ್ಲಿ ರೋಹಿತ್ ಶರ್ಮಾ ಶತಕ ಬಾರಿಸಿ ಇತಿಹಾಸ ಬದಲಿಸಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡುವ ಅವಕಾಶ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News