World Boxing Championship: ಸೆಮಿಫೈನಲ್ ತಲುಪಿದ ಆಕಾಶ್ ಕುಮಾರ್, ಮೆಡಲ್ ಪಕ್ಕಾ

World Men's Boxing Championship: ಭಾರತೀಯ ಬಾಕ್ಸರ್ (Indian Boxer)ಆಕಾಶ್ ಕುಮಾರ್ (54 ಕೆಜಿ ಗ್ರೂಪ್ ) (Akash Kumar) ಅವರು ಮಂಗಳವಾರ ಮಾಜಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ವೆನೆಜುವೆಲಾದ (Venezuela) ಯೊಯೆಲ್ ಫಿನೊಲ್ ರಿವಾಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ABBA ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ (World Men's Boxing Championship) ಭಾರತಕ್ಕೆ ಮೊದಲ ಪದಕವನ್ನು ಸೆಮಿಫೈನಲ್ ತಲುಪುವ ಮೂಲಕ ಖಚಿತಪಡಿಸಿದ್ದಾರೆ. 

Written by - Nitin Tabib | Last Updated : Nov 2, 2021, 10:31 PM IST
  • ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ನಲ್ಲಿ ಸೆಮಿ ಫೈನಲ್ ಹಂತ ತಲುಪಿದ ಆಕಾಶ್ ಕುಮಾರ್,
  • ವೆನೆಜುಯೆಲಾದ ಯೋಯೇಲ್ ಫಿನೋಲ್ ರಿವಾಸ್ ನನ್ನು 5-0 ಅಂತರದಿಂದ ಮಣಿಸಿದ ಆಕಾಶ್.
  • ಫೈನಲ್ ತಲುಪಲು ಆಕಾಶ್ 19 ವರ್ಷದ ಮಖ್ಮೂದ್ ಸಬೀರ್ಖಾನ್ ಅವರನ್ನು ಎದುರಿಸಬೇಕಾಗಿದೆ.
World Boxing Championship: ಸೆಮಿಫೈನಲ್ ತಲುಪಿದ ಆಕಾಶ್ ಕುಮಾರ್, ಮೆಡಲ್ ಪಕ್ಕಾ  title=
World Men's Boxing Championship (File Photo)

World Men's Boxing Championship: ಭಾರತೀಯ ಬಾಕ್ಸರ್ (Indian Boxer)ಆಕಾಶ್ ಕುಮಾರ್ (54 ಕೆಜಿ ಗ್ರೂಪ್ ) (Akash Kumar) ಅವರು ಮಂಗಳವಾರ ಮಾಜಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ವೆನೆಜುವೆಲಾದ (Venezuela) ಯೊಯೆಲ್ ಫಿನೊಲ್ ರಿವಾಸ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ABBA ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ (World Men's Boxing Championship) ಭಾರತಕ್ಕೆ ಮೊದಲ ಪದಕವನ್ನು ಸೆಮಿಫೈನಲ್ ತಲುಪುವ ಮೂಲಕ ಖಚಿತಪಡಿಸಿದ್ದಾರೆ. ಹಾಲಿ ರಾಷ್ಟ್ರೀಯ ಚಾಂಪಿಯನ್ ಆಕಾಶ್ ತಮ್ಮ ಎದುರಾಳಿಗೆ ಭರ್ಜರಿ ಪಂಚ್ ನೀಡುವ ಮೂಲಕ 5-0 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ನಿರ್ಭೀತಿಯಿಂದ ರಿಂಗ್ ಪ್ರವೇಶಿಸಿದ ಸೇನಾ ಬಾಕ್ಸರ್, ವೆನೆಜುವೆಲಾದ ಆಟಗಾರನಿಗೆ ಯಾವುದೇ ಅವಕಾಶ ನೀಡಿಲ್ಲ. ಅವರು ತಮ್ಮ ಚುರುಕುತನ ಮತ್ತು ಅಬ್ಬರದ ಹೊಡೆತಗಳಿಂದ ರಿವಾಸ್‌ನನ್ನು ಬೆರಗುಗೊಳಿಸಿದ್ದಾರೆ. 

ಪಂದ್ಯದ ಬಳಿಕ ಮಾತನಾಡಿದ ಆಕಾಶ್, 'ಆರಂಭದಿಂದಲೂ ಆಕ್ರಮಣಕಾರಿ ಮನೋಭಾವವನ್ನು ಅಳವಡಿಸಿಕೊಳ್ಳುವುದು ನನ್ನ ತಂತ್ರವಾಗಿತ್ತು. ಹಾಗೂ ಪಂದ್ಯದಲ್ಲಿ ನಾನು ಅದನ್ನು ಸಾಧಿಸಿದೆ ಮತ್ತು ಮೊದಲ ಸುತ್ತಿನಲ್ಲಿ ಮುನ್ನಡೆ ಪಡೆದುಕೊಂಡೆ. ಎರಡನೇ ಸುತ್ತಿನಲ್ಲೂ ನಾನು ಉತ್ತಮ ರಕ್ಷಣೆ ಪಡೆದೆ ಎಂದು ಅವರು ಹೇಳಿದ್ದಾರೆ. ಪುಣೆ ಮೂಲದ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಆಕಾಶ್ ಅವರ ತಾಯಿ ಸೆಪ್ಟೆಂಬರ್‌ನಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರು. ಅವರ ತಾಯಿ ನಿಧನರಾದಾಗ ಅವರು ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿದ್ದರು ಮತ್ತು ಪಂದ್ಯಾವಳಿ ಮುಗಿದ ನಂತರ ಅವರಿಗೆ ಮಾಹಿತಿ ನೀಡಲಾಗಿದೆ. ಅವರ ತಂದೆ ಒಂದು ದಶಕದ ಹಿಂದೆ ನಿಧನರಾಗಿದ್ದಾರೆ ಮತ್ತು ಅವರ ಕಿರಿಯ ಸಹೋದರ 2017 ರಿಂದ ಜೈಲಿನಲ್ಲಿ ಕೊಲೆ ಶಿಕ್ಷೆ ಅನುಭವಿಸುತ್ತಿದ್ದಾರೆ. 

ಇದನ್ನೂ ಓದಿ-IPL 2022 Update - CSK ತೊರೆಯುವ ನಿರ್ಧಾರ ಕೈಗೊಂಡ MS Dhoni! ಮುಂದಿನ ಸೀಜನ್ ನಲ್ಲಿ ಈ ಆಟಗಾರ CSK ನಾಯಕ

'ನಾನು ಈ ಪದಕವನ್ನು ನನ್ನ ದಿವಂಗತ ತಾಯಿ ಮತ್ತು ತಂದೆ ಮತ್ತು ನನ್ನ ತರಬೇತುದಾರರಿಗೆ ಅರ್ಪಿಸುತ್ತೇನೆ. ನಾನು ಮೊದಲ ಬಾರಿಗೆ ಇಂತಹ ದೊಡ್ಡ ಪಂದ್ಯಾವಳಿಯಲ್ಲಿ ಆಡುತ್ತಿದ್ದೇನೆ. ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ ಎಂಬುದರ ಬಗ್ಗೆ ನನಗೆ ಹೆಮ್ಮೆ ಇದೆ' ಎಂದು ಆಕಾಶ್ ಹೇಳಿದ್ದಾರೆ.  ಆಕಾಶ್ ಮಂಗಳವಾರ ವಿಶ್ವ ಚಾಂಪಿಯನ್‌ಶಿಪ್ ಪದಕ ಗೆದ್ದ ಏಳನೇ ಭಾರತೀಯ ಪುರುಷ ಬಾಕ್ಸರ್ ಎನಿಸಿಕೊಂಡಿದ್ದಾರೆ. ಇದರೊಂದಿಗೆ, ಅವರು ತಮ್ಮ ಹೆಸರಿನಲ್ಲಿ ಕನಿಷ್ಠ 25 ಸಾವಿರ ಡಾಲರ್ ಬಹುಮಾನವನ್ನು ದೃಢಪಡಿಸಿದ್ದಾರೆ. 

ಇದನ್ನೂ ಓದಿ- ಮೊಹಮ್ಮದ್ ಶಮಿ ಸಮರ್ಥನೆ: ವಿರಾಟ್ ಕೊಹ್ಲಿ 10 ತಿಂಗಳ ಪುತ್ರಿಗೆ ಅತ್ಯಾಚಾರದ ಬೆದರಿಕೆ..!

ವೆನೆಜುವೆಲಾದ ಯೊಯೆಲ್ ಫಿನೋಲ್ ರಿವಾಸ್ ( Yoel Finol) 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು ಆದರೆ ನಂತರ ಡೋಪಿಂಗ್ ಪ್ರಕರಣ ಮತ್ತು ಪರೀಕ್ಷೆಯ ನಂತರ ಅವರಿಗೆ  ಬೆಳ್ಳಿ ಪದಕವನ್ನು ನೀಡಲಾಯಿತು.  ಫೈನಲ್ ತಲುಪಲು ಆಕಾಶ್ 19 ವರ್ಷದ ಮಖ್ಮೂದ್ ಸಬೀರ್ಖಾನ್ ಅವರನ್ನು ಎದುರಿಸಬೇಕಾಗಿದೆ. ಕಝಾಕಿಸ್ತಾನದ ಬಾಕ್ಸರ್ ಯುವ ಮಟ್ಟದಲ್ಲಿ ಮೂರು ಬಾರಿ ಏಷ್ಯನ್ ಚಿನ್ನದ ಪದಕ ವಿಜೇತರಾಗಿದ್ದಾರೆ. ಏಷ್ಯನ್ ಪದಕ ವಿಜೇತ ಶಿವ ಥಾಪಾ (63.5 ಕೆಜಿ) ಕೂಡ ಕ್ವಾರ್ಟರ್ ಫೈನಲ್ ಪಂದ್ಯವನ್ನು ತಲುಪಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಪುರುಷ ಬಾಕ್ಸರ್ ಆಗಲು ಅವರು ಒಂದು ಗೆಲುವಿನ ಅಂತರದಲ್ಲಿದ್ದಾರೆ.

ಇದನ್ನೂ ಓದಿ-ಮೊಹಮ್ಮದ್ ಶಮಿ ಸಮರ್ಥನೆ: ವಿರಾಟ್ ಕೊಹ್ಲಿ 10 ತಿಂಗಳ ಪುತ್ರಿಗೆ ಅತ್ಯಾಚಾರದ ಬೆದರಿಕೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News