Wimbledon 2022 Women’s Final: ಕಜಕಿಸ್ತಾನದ ಎಲೆನಾ ರೈಬಾಕಿನಾಗೆ ವಿಂಬಲ್ಡನ್ ಮಹಿಳಾ ಚಾಂಪಿಯನ್ ಪಟ್ಟ..!

ವಿಂಬಲ್ಡನ್‌ನಲ್ಲಿ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಕಜಕಿಸ್ತಾನದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಎಲೆನಾ ರೈಬಾಕಿನಾ ಪಾತ್ರರಾಗಿದ್ದಾರೆ.

Written by - Manjunath N | Last Updated : Jul 10, 2022, 10:53 AM IST
  • 23 ವರ್ಷದ ರೈಬಾಕಿನಾ ಅವರು 2011 ರಲ್ಲಿ 21 ವರ್ಷದ ಪೆಟ್ರಾ ಕ್ವಿಟೋವಾ ಗೆದ್ದ ನಂತರ ಈ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಮಹಿಳೆಯಾಗಿದ್ದಾರೆ.
  • ಇದು ಒಟ್ಟಾರೆಯಾಗಿ ಅವರ ಮೂರನೇ ಟ್ರೋಪಿಯಾಗಿದೆ.
 Wimbledon 2022 Women’s Final: ಕಜಕಿಸ್ತಾನದ ಎಲೆನಾ ರೈಬಾಕಿನಾಗೆ ವಿಂಬಲ್ಡನ್ ಮಹಿಳಾ ಚಾಂಪಿಯನ್ ಪಟ್ಟ..! title=
Photo Courtsey: Twitter

ನವದೆಹಲಿ: ಶನಿವಾರದಂದು ನಡೆದ ವಿಂಬಲ್ಡನ್‌ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಟುನೀಶಿಯಾದ ಓನ್ಸ್ ಜಬೇರ್ ಅವರನ್ನು ಸೋಲಿಸುವ ಮೂಲಕ ಈಗ ಎಲೆನಾ ರೈಬಾಕಿನಾ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಕಜಕಿಸ್ತಾನದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಟುನೀಶಿಯಾದ ಓನ್ಸ್ ಜಬೇರ್ ಅವರನ್ನು 3-6 6-2 6-2 ಸೆಟ್‌ಗಳಿಂದ ಸೋಲಿಸುವ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ.

23 ವರ್ಷದ ರೈಬಾಕಿನಾ ಅವರು 2011 ರಲ್ಲಿ 21 ವರ್ಷದ ಪೆಟ್ರಾ ಕ್ವಿಟೋವಾ ಗೆದ್ದ ನಂತರ ಈ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಮಹಿಳೆ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.ಇದು ಒಟ್ಟಾರೆಯಾಗಿ ಅವರ ಮೂರನೇ ಟ್ರೋಪಿಯಾಗಿದೆ. ಅವರು ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕದ ಪ್ಲೇ-ಆಫ್ ಸೇರಿದಂತೆ ನಾಲ್ಕು ನೇರ ಫೈನಲ್‌ಗಳಲ್ಲಿ ಸೋತಿದ್ದರು.

ಇದನ್ನೂ ಓದಿ-Diabetes ಪ್ರಭಾವವನ್ನು ಚಮತ್ಕಾರಿ ರೀತಿಯಲ್ಲಿ ದೂರ ಮಾಡುತ್ತದೆ ಈ ಎಣ್ಣೆಯುಕ್ತ ಹಣ್ಣು, ಹೇಗೆ ಸೇವಿಸಬೇಕು?

ಇದರ ಜೊತೆ ಅವರ ಎದುರಾಳಿ ಜಬೇರ್ ಕೂಡ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ ಮೊದಲ ಟ್ಯುನೀಷಿಯನ್ ಮತ್ತು ಅರಬ್ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಗುರುವಾರದಂದು ನಡೆದ ಮಹಿಳೆಯರ ವಿಭಾಗದ ಸೆಮಿಫೈನಲ್‌ನಲ್ಲಿ ಜರ್ಮನಿಯ ತಟ್ಜಾನಾ ಮರಿಯಾ ವಿರುದ್ಧ ಜಯಗಳಿಸಿದ ನಂತರ ವಿಂಬಲ್ಡನ್ ಫೈನಲ್‌ನಲ್ಲಿ ಟುನೀಶಿಯಾದ ಓನ್ಸ್ ಜಬೇರ್ ತಮ್ಮ ಸ್ಥಾನವನ್ನು ಕಾಯ್ದಿರಿಸಿದ್ದರು.

3ನೇ ಶ್ರೇಯಾಂಕದ ಜಬೇರ್ ಅವರು ಮರಿಯಾ ವಿರುದ್ಧ ಒಂದು ಗಂಟೆ ನಲವತ್ಮೂರು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 6-2, 3-6, 6-1 ಅಂತರದಿಂದ ಗೆದ್ದರು. ಅವರ ಎದುರಾಳಿ ರೈಬಾಕಿನಾ ಕೂಡ ಸೆಮಿಫೈನಲ್‌ನಲ್ಲಿ ರೊಮೇನಿಯಾದ ಸಿಮೊನಾ ಹ್ಯಾಲೆಪ್ ಅವರನ್ನು ಸೋಲಿಸುವ ಮೂಲಕ ಫೈನಲ್‌ಗೆ ತಲುಪಿದರು.1 ಗಂಟೆ, 15 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಕಝಕ್ ಆಟಗಾರ್ತಿ 6-3, 6-3 ಸೆಟ್‌ಗಳಿಂದ ಹ್ಯಾಲೆಪ್‌ರನ್ನು ಸೋಲಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News