LSG vs GT: ಬಲಿಷ್ಠ ಗುಜರಾತ್‌ಗೆ ಲಕ್ನೋ ಸವಾಲು: ಇಲ್ಲಿದೆ ಇಂದಿನ ಸಂಭಾವ್ಯ ಆಟಗಾರರ ಪಟ್ಟಿ

ಕನ್ನಡಿಗ ಕೆ.ಎಲ್‌ ರಾಹುಲ್‌ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

Written by - Bhavishya Shetty | Last Updated : May 10, 2022, 01:13 PM IST
  • ಇಂದು ಲಕ್ನೋ ಸೂಪರ್‌ ಜೈಂಟ್ಸ್‌-ಗುಜರಾತ್‌ ಟೈಟಾನ್ಸ್‌ ಪಂದ್ಯ
  • ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಶನ್‌ನಲ್ಲಿ ನಡೆಯಲಿರುವ ಆಟ
  • ಉಭಯ ತಂಡಗಳಿಂದ ಭರ್ಜರಿ ತಯಾರಿ
LSG vs GT: ಬಲಿಷ್ಠ ಗುಜರಾತ್‌ಗೆ ಲಕ್ನೋ ಸವಾಲು: ಇಲ್ಲಿದೆ ಇಂದಿನ ಸಂಭಾವ್ಯ ಆಟಗಾರರ ಪಟ್ಟಿ  title=
Indian Premier League

ಹದಿನೈದನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಇಂದು ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ಗುಜರಾತ್‌ ಟೈಟಾನ್ಸ್‌ ನಡುವೆ ಹಣಾಹಣಿ ನಡೆಯಲಿದೆ. ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಶನ್‌ನಲ್ಲಿ ಪಂದ್ಯ ನಡೆಯಲಿದ್ದು, ಉಭಯ ತಂಡಗಳು ಭರ್ಜರಿ ತಯಾರಿ ನಡೆಸುತ್ತಿದೆ. 

ಇದನ್ನು ಓದಿ: HDFC Express Car Loan: ಕೇವಲ ಅರ್ಧ ಗಂಟೆಯಲ್ಲಿ ಸಿಗಲಿದೆ ಎಕ್ಸ್‌ಪ್ರೆಸ್ ಕಾರ್ ಲೋನ್'

ಕನ್ನಡಿಗ ಕೆ.ಎಲ್‌ ರಾಹುಲ್‌ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಲಕ್ನೋ ತಂಡವು ಆಡಿರುವ 11 ಪಂದ್ಯದಲ್ಲಿ ಎಂಟರಲ್ಲಿ ಗೆಲುವು ಕಂಡಿದ್ದು, ಮೂರರಲ್ಲಿ ಸೋಲು ಅನುಭವಿಸಿದೆ. 

ಇನ್ನೊಂದೆಡೆ ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ಕಣಕ್ಕಿಳಿದಿರುವ ಗುಜರಾತ್‌ ತಂಡ ಆಡಿರುವ 11 ಪಂದ್ಯದಲ್ಲಿ ಎಂಟರಲ್ಲಿ ಗೆಲುವು ಸಾಧಿಸಿದ್ದು, ಇನ್ನುಳಿದ ಪಂದ್ಯದಲ್ಲಿ ಸೋಲು ಕಂಡಿದೆ. 

ಸದ್ಯ ಎರಡೂ ತಂಡಗಳು ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಇಂದು ನಡೆಯುವ ಪಂದ್ಯದಲ್ಲಿ ಗೆಲುವು ಯಾರಿಗೆ ಎಂಬುದನ್ನು ಕಾದುನೋಡಬೇಕಿದೆ.

ಇದನ್ನು ಓದಿ: ಸ್ಯಾಂಡಲ್‌ವುಡ್‌ ʼಪುಟ್ಮಲ್ಲಿʼಗೆ ಹುಟ್ಟುಹಬ್ಬದ ಸಂಭ್ರಮ: ಇಲ್ಲಿದೆ ನೋಡಿ ʼಪದ್ದಿʼಯ ಜೀವನಚರಿತ್ರೆ

ಸಂಭಾವ್ಯ ಆಟಗಾರರ ಪಟ್ಟಿ: 

ಲಕ್ನೋ ಸೂಪರ್ ಜೈಂಟ್ಸ್
ಕ್ವಿಂಟನ್ ಡಿ ಕಾಕ್ (ವಿ.ಕೀ), ಕೆಎಲ್ ರಾಹುಲ್ (ಕ್ಯಾ), ದೀಪಕ್ ಹೂಡಾ, ಮಾರ್ಕಸ್ ಸ್ಟೋನಿಸ್, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಅವೇಶ್ ಖಾನ್, ಮೊಹ್ಸಿನ್ ಖಾನ್

ಗುಜರಾತ್ ಟೈಟಾನ್ಸ್
ವೃದ್ಧಿಮಾನ್ ಸಹಾ (ವಿ.ಕೀ), ಶುಭಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ಕ್ಯಾ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಪ್ರದೀಪ್ ಸಾಂಗ್ವಾನ್, ಲಾಕಿ ಫರ್ಗುಸನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News