ಒಲಿಂಪಿಕ್ಸ್ ಚಿನ್ನದ ಪದಕ ಮತ್ತು ಆಸ್ಕರ್ ಪ್ರಶಸ್ತಿ ಎರಡನ್ನೂ ಪಡೆದ ಏಕೈಕ ಕ್ರೀಡಾಪಟು ಯಾರು?

Olympics Gold Medal-Oscar Award Winner: ಕ್ರೀಡೆಯಲ್ಲಿ ಒಲಿಂಪಿಕ್ ಚಿನ್ನದ ಪದಕ ಮತ್ತು ಮನರಂಜನಾ ಉದ್ಯಮದಲ್ಲಿ ಆಸ್ಕರ್ ಪಡೆಯುವ ಮೂಲಕ ಕ್ರೀಡಾಪಟು ವಿಶ್ವದಾಖಲೆ ನಿರ್ಮಿಸಿದ್ದಾರೆ. ಹಾಗಾದ್ರೆ ಅವರು ಯಾರೆಂದು ಇಲ್ಲಿ ತಿಳಿಯೋಣ..

Written by - Savita M B | Last Updated : Jul 31, 2024, 07:26 PM IST
  • ಯಾವುದೇ ಕ್ಷೇತ್ರದಲ್ಲಿ ಉತ್ತಮ ಪ್ರತಿಭೆ ತೋರಿದವರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
  • ಆದರೆ ಒಬ್ಬ ಅಥ್ಲೀಟ್ ಕ್ರೀಡೆಯಲ್ಲಿ ಒಲಿಂಪಿಕ್ ಚಿನ್ನದ ಪದಕದೊಂದಿಗೆ ಮನರಂಜನಾ ಉದ್ಯಮದಲ್ಲಿ ಆಸ್ಕರ್ ಪಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ
ಒಲಿಂಪಿಕ್ಸ್ ಚಿನ್ನದ ಪದಕ ಮತ್ತು ಆಸ್ಕರ್ ಪ್ರಶಸ್ತಿ ಎರಡನ್ನೂ ಪಡೆದ ಏಕೈಕ ಕ್ರೀಡಾಪಟು ಯಾರು? title=

Kobe Bryant: ಯಾವುದೇ ಕ್ಷೇತ್ರದಲ್ಲಿ ಉತ್ತಮ ಪ್ರತಿಭೆ ತೋರಿದವರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಕ್ರೀಡೆಯಲ್ಲಿ ಒಲಿಂಪಿಕ್ ಚಿನ್ನದ ಪದಕ, ಸಂಗೀತದಲ್ಲಿ ಗ್ರ್ಯಾಮಿ ಪ್ರಶಸ್ತಿ ಮತ್ತು ಚಲನಚಿತ್ರಗಳಲ್ಲಿ ಆಸ್ಕರ್ ಪ್ರಶಸ್ತಿಗಳು ಅತ್ಯುನ್ನತವೆಂದು ಪರಿಗಣಿಸಲಾಗಿದೆ. 

ಸಾಮಾನ್ಯವಾಗಿ ಒಂದು ಕ್ಷೇತ್ರದಲ್ಲಿ ಯಾರಾದರೂ ಉನ್ನತ ಸ್ಥಾನಕ್ಕೇರುವುದು ಸಹಜ. ಆದರೆ ಒಂದು ಕ್ಷೇತ್ರದಲ್ಲಿ ದಂತಕಥೆಯಾಗಿ ಗುರುತಿಸಿಕೊಂಡು ಇನ್ನೊಂದು ಕ್ಷೇತ್ರದಲ್ಲಿಯೂ ಅತ್ಯುನ್ನತ ಪ್ರಶಸ್ತಿ ಪಡೆಯುವುದು ಸಾಮಾನ್ಯ ಸಂಗತಿಯಲ್ಲ. ಇಂತಹ ಸಾಧನೆ ಅಪರೂಪ.

ಆದರೆ ಒಬ್ಬ ಅಥ್ಲೀಟ್ ಕ್ರೀಡೆಯಲ್ಲಿ ಒಲಿಂಪಿಕ್ ಚಿನ್ನದ ಪದಕದೊಂದಿಗೆ ಮನರಂಜನಾ ಉದ್ಯಮದಲ್ಲಿ ಆಸ್ಕರ್ ಪಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಅವರು ಬೇರೆ ಯಾರೂ ಅಲ್ಲ ಅಮೆರಿಕದ ಬಾಸ್ಕೆಟ್‌ಬಾಲ್ ತಾರೆ ಕೋಬ್ ಬ್ರ್ಯಾಂಟ್.  

ಇದನ್ನೂ ಓದಿ-ʼಆ ನಟನೊಂದಿಗೆ ನಾನು...ʼ ದಿಢೀರ್‌ ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ನಟಿ ಶ್ರೀಲೀಲಾ!? ಅಭಿಮಾನಿಗಳಲ್ಲಿ ಗೊಂದಲ!!

ಕೋಬ್ ಬ್ರ್ಯಾಂಟ್ ಬ್ಯಾಸ್ಕೆಟ್‌ಬಾಲ್‌ನಲ್ಲಿ ಎರಡು ಒಲಿಂಪಿಕ್ ಚಿನ್ನದ ಪದಕಗಳನ್ನು ಗೆದ್ದರು. ಅವರು 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.. ನಂತರ 2012 ರ ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಚಿನ್ನದ ಪದಕವನ್ನು ಗೆದ್ದರು. ಅವರು ಈ ಪದಕವನ್ನು ಲೆಬ್ರಾನ್ ಜೇಮ್ಸ್, ಟೇಶಾನ್ ಪ್ರಿನ್ಸ್, ಕ್ರಿಸ್ ಪಾಲ್, ಕೆವಿನ್ ಡ್ಯುರಾಂಟ್, ಕಾರ್ಮೆಲೊ ಆಂಥೋನಿ, ಡೆರಾನ್ ವಿಲಿಯಮ್ಸ್ ಅವರಂತಹ ಲೆಜೆಂಡರ್ಸ್‌ಗಳೊಂದಿಗೆ ಹಂಚಿಕೊಂಡರು.

90 ನೇ ಅಕಾಡೆಮಿ ಪ್ರಶಸ್ತಿ ಸಮಾರಂಭವು ಮಾರ್ಚ್ 4, 2018 ರಂದು ನಡೆಯಿತು. ಬ್ರ್ಯಾಂಟ್ ಅವರು ಬರೆದ ಮತ್ತು ನಿರೂಪಿಸಿದ ಅನಿಮೇಟೆಡ್ ಬ್ಯಾಸ್ಕೆಟ್‌ಬಾಲ್ ಚಲನಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಸಹ ಗೆದ್ದರು. ಬ್ಯೂಟಿ ಅಂಡ್ ದಿ ಬೀಸ್ಟ್ (1991), ಟಾರ್ಜನ್ (1999), ಮತ್ತು ಟ್ಯಾಂಗ್ಲ್ಡ್ (2010) ನಂತಹ ಡಿಸ್ನಿ ಅನಿಮೇಟೆಡ್ ಚಲನಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಗ್ಲೆನ್ ಕೀನ್ ಅವರೊಂದಿಗೆ ಬ್ರ್ಯಾಂಟ್ ಆಸ್ಕರ್ ಅನ್ನು ಹಂಚಿಕೊಂಡರು.

ಕೋಬ್ ಬ್ರ್ಯಾಂಟ್ ಅವರ ಆಸ್ಕರ್ ಪ್ರಶಸ್ತಿಯನ್ನು ಪಡೆದ ಎರಡು ವರ್ಷಗಳ ನಂತರ, ದುರದೃಷ್ಟವು ಅವರನ್ನು ಹಿಂಬಾಲಿಸಿತು. ಅವರು ಜನವರಿ 26, 2020 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.  

ಇದನ್ನೂ ಓದಿ-ಮದುವೆನೇ ವರ್ಕ್​ ಆಗಿಲ್ಲಾ ಅಂದ್ರೆ? - ವಿಚ್ಛೇದನದ ಬಗ್ಗೆ ನಟಿ ಅನು ಪ್ರಭಾಕರ್​ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News