ಈ ದಶಕದ ಅತ್ಯಂತ ಪ್ರಭಾವಶಾಲಿ ಭಾರತೀಯ ಆಟಗಾರನ್ಯಾರು ಗೊತ್ತೇ?

ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಕಳೆದ ಒಂದು ದಶಕದಲ್ಲಿ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಮುಖ ಇಬ್ಬರು ಕ್ರಿಕೆಟಿಗರಾಗಿದ್ದಾರೆ.

Last Updated : Dec 10, 2020, 05:21 PM IST
ಈ ದಶಕದ ಅತ್ಯಂತ ಪ್ರಭಾವಶಾಲಿ ಭಾರತೀಯ ಆಟಗಾರನ್ಯಾರು ಗೊತ್ತೇ? title=
file photo

ನವದೆಹಲಿ: ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಕಳೆದ ಒಂದು ದಶಕದಲ್ಲಿ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಮುಖ ಇಬ್ಬರು ಕ್ರಿಕೆಟಿಗರಾಗಿದ್ದಾರೆ.

ಸಚಿನ್ ತೆಂಡೂಲ್ಕರ್ ಅವರ 17 ವರ್ಷಗಳ ದಾಖಲೆ ಮುರಿದ ವಿರಾಟ್ ಕೊಹ್ಲಿ

2011 ರಲ್ಲಿ ವಿಶ್ವಕಪ್ ಗೆಲ್ಲುವ ಮೂಲಕ ಮತ್ತು ಎರಡು ವರ್ಷಗಳ ನಂತರ, ಇಂಗ್ಲೆಂಡ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವ ಮೂಲಕ ಮೂರು ಐಸಿಸಿ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಧೋನಿ ಯಶಸ್ವಿ ನಾಯಕನಾಗಿದ್ದಾರೆ.ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ನ್ನು ಮತ್ತಷ್ಟು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಈ ಇಬ್ಬರು ಭಾರತೀಯ ಆಟಗಾರರು ಸದ್ಯ ಇಡೀ ವಿಶ್ವದಲ್ಲೇ ಶ್ರೇಷ್ಠ ಎಂದ ಬ್ರಿಯಾನ್ ಲಾರಾ

ಇಂತಹ ಸಂದರ್ಭದಲ್ಲಿ ಈ ಇಬ್ಬರು ಆಟಗಾರರ ನಡುವೆ ಯಾರು ಶ್ರೇಷ್ಟರು ಎನ್ನುವ ವಿಚಾರ ಬಂದಾಗ ಆಯ್ಕೆ ಮಾಡುವುದು ನಿಜಕ್ಕೂ ಕಷ್ಟದ ಸಂಗತಿ. ಆದರೆ ಆಷ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಪ್ರಕಾರ ಎಂ.ಎಸ್.ಧೋನಿ ಪ್ರಭಾವಶಾಲಿ ಎಂದು ಹೆಸರಿಸುತ್ತಾರೆ.ಎಂಎಸ್ ಧೋನಿ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿರುವುದು ನಿಜಕ್ಕೂ ಮುಖ್ಯ ಮತ್ತು ಮಹತ್ವದ್ದಾಗಿದೆ ಎಂದು ನಾನು ಭಾವಿಸುತ್ತೇನೆ. ನನಗೆ ಆ ವಿಶ್ವಕಪ್ ನಿಜವಾದ ದೊಡ್ಡ ಮೈಲಿಗಲ್ಲು' ಎಂದು ಹೇಡನ್ ಹೇಳಿದರು.

T20 ಫಾರ್ಮ್ಯಾಟ್ ನಲ್ಲಿ ಅತ್ಯಂತ ವೇಗವಾಗಿ 1500 ರನ್ಸ್ ಗಳಿಸಿದವರ ಕ್ಲಬ್ ಸೇರಿದ ಕನ್ನಡಿಗ K.L.Rahul

'ನಾವು ಏಕದಿನ ಸ್ವರೂಪದಲ್ಲಿ ಬಹಳಷ್ಟು ಕ್ರಿಕೆಟ್ ಆಡುವ ಮೊದಲು ನಾನು ಅದನ್ನು ಪ್ರಸ್ತಾಪಿಸಿದ್ದೇನೆ ಮತ್ತು ವಿಶ್ವಕಪ್‌ಗೆ ತಯಾರಾಗಲು ಬಂದಾಗ, ನೀವು ಉತ್ತಮ ನಾಯಕನನ್ನು ಹೊಂದಿರುವುದಷ್ಟೇ ಅಲ್ಲದೆ ಧೋನಿಯಂತೆ ಮಧ್ಯಮ ಕ್ರಮಾಂಕದಲ್ಲಿ ನೀವು ಶಾಂತ ಮನಸ್ಸಿನ  ಪ್ರಬಲ ಆಟಗಾರನಾಗಿರಬೇಕು ಎಂದು ಅವರು ಹೇಳಿದರು.

Trending News