ಆರ್‌ಸಿಬಿಯ ʼಕಪ್‌ʼ ಕನಸಿಗೆ ಭಂಗ ತರುತ್ತಾ ʼಮಳೆʼ?

ಕಳೆದ ಕೆಲ ದಿನಗಳಿಂದ ಕೊಲ್ಕತ್ತಾದಲ್ಲಿ ಕಾಳ್‌ಬೈಸಾಕಿ ಚಂಡಮಾರುತದ ಅಬ್ಬರ ಜೋರಾಗಿದ್ದು, ಭಾರೀ ಮಳೆಯಾಗುತ್ತಿದೆ. ಮಳೆ ಇನ್ನು ಮೂರು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.   

Written by - Bhavishya Shetty | Last Updated : May 24, 2022, 01:52 PM IST
  • ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪ್ಲೇ ಆಫ್‌ ಪಂದ್ಯ
  • ಕೊಲ್ಕತ್ತಾದಲ್ಲಿ ಭಾರೀ ಮಳೆ
  • ಆರ್‌ಸಿಬಿ ಫೈನಲ್‌ ಕನಸು ಭಗ್ನವಾಗುತ್ತಾ?
ಆರ್‌ಸಿಬಿಯ ʼಕಪ್‌ʼ ಕನಸಿಗೆ ಭಂಗ ತರುತ್ತಾ ʼಮಳೆʼ?  title=
IPL 2022 Qualifier

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಹದಿನೈದನೇ ಆವೃತ್ತಿಯು ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಭರದಿಂದ ಸಾಗಲಿರುವ ಪ್ಲೇ ಆಫ್‌ ಪಂದ್ಯಗಳ ಅಬ್ಬರಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ. ಕೊಲ್ಕತ್ತಾದಲ್ಲಿ ಭಾರೀ ಮಳೆಯಾಗುತ್ತಿದ್ದು, ಈಡನ್‌ ಗಾರ್ಡನ್‌ ಮೈದಾನದ ಗ್ಯಾಲರಿಯ ಗ್ಲಾಸ್‌ಗೆ ಸಿಡಿಲುಬಡಿದೆ. ಅಷ್ಟೇ ಅಲ್ಲದೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. 

ಇದನ್ನು ಓದಿ: IPL 2022: ಇಲ್ಲಿದೆ ಐಪಿಎಲ್‌ನ Orange Cap-Purple Cap ಬಗ್ಗೆ ನಿಮಗರಿದ ಸತ್ಯಾಂಶ!

ಕಳೆದ ಕೆಲ ದಿನಗಳಿಂದ ಕೊಲ್ಕತ್ತಾದಲ್ಲಿ ಕಾಳ್‌ಬೈಸಾಕಿ ಚಂಡಮಾರುತದ ಅಬ್ಬರ ಜೋರಾಗಿದ್ದು, ಭಾರೀ ಮಳೆಯಾಗುತ್ತಿದೆ. ಮಳೆ ಇನ್ನು ಮೂರು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಇನ್ನು ಕೊಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ಐಪಿಎಲ್‌ ಕ್ವಾಲಿಫೈಯರ್‌ ಪಂದ್ಯಗಳು ಇಂದಿನಿಂದ ನಡೆಯಲಿದೆ. ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯಾದರೆ  ಏನಾಗಬಹುದು ಎಂಬುದರ ಲೆಕ್ಕಾಚಾರ ಈ ಕೆಳಗಿನಂತಿದೆ. 

ಇಂದು ಈಡನ್‌ ಗಾರ್ಡನ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ಮತ್ತು ರಾಜಸ್ಥಾನ ರಾಯಲ್ಸ್‌  ನಡುವೆ ಜಿದ್ದಾಜಿದ್ದಿ ನಡೆಯಲಿದೆ. ಟೂರ್ನಿಯುದ್ಧಕ್ಕೂ ಭರ್ಜರಿ ಪ್ರದರ್ಶನ ನೀಡಿದ್ದ ಉಭಯ ತಂಡಗಳು ಟೂರ್ನಿಯಲ್ಲಿ ಗೆಲುವು ಸಾಧಿಸಲು ಕಾತುರವಾಗಿದೆ. ಆದರೆ ಇಂದು ಮಳೆಯಾದರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಗುಜರಾತ್‌ ಫೈನಲ್‌ ಪ್ರವೇಶಿಸಿ ರಾಜಸ್ಥಾನ ತಂಡ ಮನೆ ಹಾದಿ ಹಿಡಿಯಲಿದೆ. ಇಲ್ಲಿವರೆಗೆ ನಡೆದ ಪಂದ್ಯಗಳ ರನ್‌ರೇಟ್‌ ಪರಿಗಣಿಸಿದರೆ ಗುಜರಾತ್‌, ರಾಜಸ್ಥಾನ ರಾಯಲ್ಸ್‌ಗಿಂದ ಹೆಚ್ಚು ಪಾಯಿಂಟ್‌ ಪಡೆದುಕೊಂಡಿದೆ. ಹೀಗಾಗಿ ಲೆಕ್ಕಾಚಾರ ಹಾಕಿದ್ರೆ ಗುಜರಾತ್‌ ಫೈನಲ್‌ಗೆ ಹೋಗೋದು ಪಕ್ಕಾ. 

ಆರ್‌ಸಿಬಿ ಫೈನಲ್‌ ಕನಸು ಭಗ್ನವಾಗುತ್ತಾ?
ಇನ್ನೊಂದೆಡೆ ಕ್ವಾಲಿಫೈಯರ್‌ ಎರಡನೇ ಪಂದ್ಯ ನಾಳೆ ಇದೇ ಸ್ಟೇಡಿಯಂನಲ್ಲಿ ನಡೆಯಲಿದೆ. ಇದರಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕಾದಾಟ ನಡೆಸಲಿದೆ. ಆದರೆ ಮಳೆ ಅಡ್ಡಿಯಾದರೆ ಪಾಯಿಂಟ್‌ ರೇಟ್‌ ಲೆಕ್ಕಾಚಾರ ಹಿಡಿದು ಲಕ್ನೋ ಫೈನಲ್‌ ಪ್ರವೇಶಿಸಿ ಆರ್‌ಸಿಬಿ ಹೊರಗುಳಿಯಲಿದೆ. 

ಇದನ್ನು ಓದಿ: IPL 2022: ಗುಜರಾತ್‌-ರಾಜಸ್ಥಾನ ಪ್ಲೇಆಫ್‌ ಜಿದ್ದಾಜಿದ್ದಿಯಲ್ಲಿ ಫೈನಲ್‌ ಪ್ರವೇಶಿಸೋದ್ಯಾರು?

ಹೀಗೆ ಎರಡೂ ತಂಡಗಳ ಭವಿಷ್ಯವನ್ನು ಮಳೆ ನಿರ್ಧರಿಸಲಿದೆ ಎನ್ನುವಂತಾಗಿದೆ. ಆದರೆ ಆರ್‌ಸಿಬಿ ಅಭಿಮಾನಿಗಳಿಗೆ ಈ ಸುದ್ದಿ ನುಂಗಲಾರದ ತುಪ್ಪದಂತಾಗಿದ್ದು, ಕಪ್‌ ಕನಸಿಗೆ ಮಳೆ ತಣ್ಣೀರು ಎರಚುತ್ತಾ ಎಂಬ ಅನುಮಾನ ಮೂಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News