T20 Worldcup 2024: ಟಿ20 ವಿಶ್ವಕಪ್ 2024ರ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡ ಅಫ್ಘಾನಿಸ್ತಾನ ತಂಡವನ್ನು ಎದುರಿಸಿತ್ತು. ಅಫ್ಘಾನ್ ವಿರುದ್ಧ ಅಬ್ಬರಿಸಿದ ವಿಂಡೀಸ್ ಪಡೆ ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳನ್ನ ಸೃಷ್ಟಿಸಿದೆ.
ಮಂಗಳವಾರ, ಜೂನ್ 18 ರಂದು ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತ್ತು. 20 ಓವರ್ಗಳಲ್ಲಿ 218 ರನ್ ಕಲೆಹಾಕಿತು. 219 ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಅಫ್ಘಾನಿಸ್ತಾನ ತಂಡ 114 ರನ್ ನಷ್ಟಕ್ಕೆ ಆಲೌಟ್ ಆಗಿ ವಿಂಡೀಸ್ ವಿರುದ್ಧ ಮಂಡಿಯೂರಿತು.
ಸೇಂಟ್ ಲೂಸಿಯಾದಲ್ಲಿ ನಡೆದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಬ್ಯಾಟರ್ಸ್, ಅಫ್ಘಾನಿ ತಂಡದ ಬೌಲರ್ಗಳ ಬೆವರಿಳಿಸಿದ್ದರು. ಈ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: T20 Worldcup 2024: 'ಮ್ಯಾಚ್ ಫಿಕ್ಸಿಂಗ್' ಆರೋಪ..? ಸ್ಟಾರ್ ತಂಡಕ್ಕೆ ಎದುರಾಯ್ತು ದೊಡ್ಡ ಕಂಟಕ..!
ಟಾಸ್ ಗೆದ್ದ ಅಫ್ಘಾನ್ ತಂಡದ ನಾಯಕ ರಶೀದ್ ಖಾನ್ ವಿಂಡೀಸ್ ಪಡೆಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ನಂತರ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಅಬ್ಬರಕ್ಕೆ ಎದುರಾಳಿ ತಂಡ ಬೆಚ್ಚಿಬಿತ್ತು.
ವೆಸ್ಟ್ ಇಂಡೀಸ್ ಪರ ಇನಿಂಗ್ಸ್ ಆರಂಭಿಸಿದ ಚಾನ್ಸನ್ ಚಾರ್ಲ್ಸ್ 43 ರನ್ ಕಲೆಹಾಕುವ ಮೂಲಕ ಉತ್ತಮ ಆಟ ಪ್ರದರ್ಶಿಸಿದರು. ನಂತರ ಫೀಲ್ಡ್ಗೆ ಎಂಟ್ರಿ ಕೊಟ್ಟ ನಿಕೋಲಸ್ ಪೂರಾನ್ ಕೇವಲ 53 ಎಸತಗಳಲ್ಲಿ 98 ರನ್ ಭಾರಿಸಿದರು. ಈ ಮೂಲಕ 20 ಓವರ್ಗಳು ಮುಗಿಯುವಷ್ಟರಲ್ಲಿ ವೆಸ್ಟ್ ಇಂಡೀಸ್ ಪಡೆ ಒಟ್ಟು 219 ರನ್ ಕಲೆಹಾಕಿತು. ಈ ಸ್ಕೋರ್ನೊಂದಿಗೆ ಟಿ20 ವಿಶ್ವಕಪ್ 2024ರಲ್ಲಿ ಗರಿಷ್ಠ ಅಂಕ ಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ವೆಸ್ಟ್ ಇಂಡೀಸ್ ತಂಡ ಪಾತ್ರವಾಯಿತು.
ಇದನ್ನೂ ಓದಿ: ICC ODI Ranking: ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಮೂರನೇ ಸ್ಥಾನಕ್ಕೇರಿದ ಸ್ಮೃತಿ ಮಂಧಾನ..!
ಈ ಪಂದ್ಯದ ಪವರ್ಪ್ಲೇನಲ್ಲಿ ವಿಂಡೀಸ್ ಬ್ಯಾಟರ್ಗಳು 92 ರನ್ ಕಲೆಹಾಕಿದ್ದರು. ಇದು ಟಿ20 ಇತಿಹಾಸದಲ್ಲೇ ಮೊದಲ ಗರಿಷ್ಠ ಪವರ್ ಪ್ಲೇ ಸ್ಕೋರ್ ಎಂಬ ದಾಖಲೆ ಕೂಡ ವೆಸ್ಟ್ ಇಂಡೀಸ್ ತಂಡದ ಮುಡಿಗೇರಿತು.
2007ರ ವಿಶ್ವಕಪ್ನಲ್ಲಿ 204 ಗಳಿಸಿ ಗರಿಷ್ಠ ಸ್ಕೋರ್ ನಿರ್ಮಿಸಿದ್ದ ವೆಸ್ಟ್ ಇಂಡೀಸ್ ಇದೀಗ ಅಫ್ಘಾನ್ ವಿರುದ್ಧ 219 ರನ್ ಕಲೆಹಾಕುವ ಮೂಲಕ ಗರಿಷ್ಠ ಸ್ಕೋರ್ನ ಹೊಸ ದಾಖಲೆ ಸೃಷ್ಟಿಸಿದೆ.