Ind Vs WI : ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾದ ಫೈಟ್ ಸುಲಭವಲ್ಲ! ಯಾಕೆ?

ಕ್ರಿಕೆಟ್ ವೆಸ್ಟ್ ಇಂಡೀಸ್ ತನ್ನ 16 ಆಟಗಾರರ T20 ತಂಡವನ್ನು ಪ್ರಕಟಿಸಿದೆ, ಇದರಲ್ಲಿ ಕೀರಾನ್ ಪೊಲಾರ್ಡ್ ಕೆರಿಬಿಯನ್ ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ನಿಕೋಲಸ್ ಪೂರನ್ ಉಪನಾಯಕನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

Written by - Channabasava A Kashinakunti | Last Updated : Jan 30, 2022, 11:43 AM IST
  • ಭಾರತ vs ವೆಸ್ಟ್ ಇಂಡೀಸ್ ಸರಣಿ
  • ವೆಸ್ಟ್ ಇಂಡೀಸ್ ಟಿ20 ತಂಡ ಪ್ರಕಟಿಸಿದೆ
  • ವೆಸ್ಟ್ ಇಂಡೀಸ್ ನಾಯಕತ್ವವನ್ನ ಕೀರಾನ್ ಪೊಲಾರ್ಡ್ ಹೆಗಲಿಗೆ
Ind Vs WI : ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾದ ಫೈಟ್ ಸುಲಭವಲ್ಲ! ಯಾಕೆ? title=

ನವದೆಹಲಿ : ಫೆಬ್ರವರಿ 6 ರಿಂದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಸೀಮಿತ ಓವರ್‌ಗಳ ಸರಣಿ ನಡೆಯಲಿದ್ದು, ಪ್ರವಾಸಿ ಕೆರಿಬಿಯನ್ ತಂಡದ ಎಲ್ಲಾ ಆಟಗಾರರ ಹೆಸರನ್ನು ಪ್ರಕಟಿಸಿದೆ.

ಪೊಲಾರ್ಡ್ ವಿಂಡೀಸ್ ನಾಯಕತ್ವ

ಕ್ರಿಕೆಟ್ ವೆಸ್ಟ್ ಇಂಡೀಸ್(West Indies Team) ತನ್ನ 16 ಆಟಗಾರರ T20 ತಂಡವನ್ನು ಪ್ರಕಟಿಸಿದೆ, ಇದರಲ್ಲಿ ಕೀರಾನ್ ಪೊಲಾರ್ಡ್ ಕೆರಿಬಿಯನ್ ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ನಿಕೋಲಸ್ ಪೂರನ್ ಉಪನಾಯಕನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : Rishabh Pant: ರಿಷಭ್ ಪಂತ್‌ನಿಂದ ಈ ಮೂವರು ಆಟಗಾರರ ವೃತ್ತಿಜೀವನಕ್ಕೆ ಕಂಟಕ..!

ಕೋಲ್ಕತ್ತಾದಲ್ಲಿ ಟಿ20 ಪಂದ್ಯ ನಡೆಯಲಿವೆ

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ T20 ಸರಣಿಯು ಫೆಬ್ರವರಿ 16 ರಿಂದ ಪ್ರಾರಂಭವಾಗಲಿದ್ದು, ಎಲ್ಲಾ ಮೂರು ಪಂದ್ಯಗಳು ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿವೆ. ಮುಂದಿನ ಎರಡು ಪಂದ್ಯಗಳು ಫೆಬ್ರವರಿ 18 ಮತ್ತು 20 ರಂದು ನಡೆಯಲಿದೆ.

ವೆಸ್ಟ್ ಇಂಡೀಸ್ ಟಿ20 ತಂಡ

ಕೀರಾನ್ ಪೊಲಾರ್ಡ್(Kieron Pollard) (ಸಿ), ಬ್ರೆಂಡನ್ ಕಿಂಗ್, ಫ್ಯಾಬಿಯನ್ ಅಲೆನ್, ಡ್ಯಾರೆನ್ ಬ್ರಾವೋ, ರೋಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕಿಲ್ ಹೊಸೈನ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್ (ವಿಸಿ), ರೊಮಾರಿಯೋ ಶೆಫರ್ಡ್, ಓಡಿಯನ್ ಸ್ಮಿತ್, ರೋವ್ಮನ್ ಪೊವೆಲ್, , ಕೈಲ್ ಮೈಯರ್ಸ್, ಹೇಡನ್ ವಾಲ್ಷ್.

ವೆಸ್ಟ್ ಇಂಡೀಸ್ ODI ತಂಡ

ಕೀರಾನ್ ಪೊಲಾರ್ಡ್ (ನಾಯಕ), ಕೆಮರ್ ರೋಚ್, ನ್ಕ್ರುಮಾ ಬೋನರ್, ಬ್ರೆಂಡನ್ ಕಿಂಗ್, ಫ್ಯಾಬಿಯನ್ ಅಲೆನ್, ಶಮ್ರಾ ಬ್ರೂಕ್ಸ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ನಿಕೋಲಸ್ ಪೂರನ್, ರೊಮಾರಿಯೋ ಶೆಫರ್ಡ್, ಓಡಿಯನ್ ಸ್ಮಿತ್, ಹೇಡನ್ ವಾಲ್ಷ್ ಜೂನಿಯರ್.

 ಟೀಂ ಇಂಡಿಯಾ ನಾಯಕತ್ವ ರೋಹಿತ್

ಈ ಎರಡೂ ಸೀಮಿತ ಓವರ್‌ಗಳ ಸರಣಿಯಲ್ಲಿ, ಟೀಂ ಇಂಡಿಯಾ(Team India)ವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ ಮತ್ತು ಕೆಎಲ್ ರಾಹುಲ್ ಉಪನಾಯಕನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ, ಆದರೂ ಫೆಬ್ರವರಿ 6 ರಂದು ನಡೆಯಲಿರುವ ಮೊದಲ ODI ನಲ್ಲಿ ರಾಹುಲ್ ಗೈರುಹಾಜರಾಗಲಿದ್ದಾರೆ.

ಇದನ್ನೂ ಓದಿ : India vs West Indies: ಮೊದಲ ಏಕದಿನ ಪಂದ್ಯಕ್ಕೆ ಉಪನಾಯಕರಾಗಲಿರುವ ರಿಷಬ್ ಪಂತ್ !

ಭಾರತೀಯ ODI ತಂಡರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ರಿತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಬ್ ಪಂತ್ (ವಿಕೆ), ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಾಲ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ಮತ್ತು ಅವೇಶ್ ಖಾನ್.

ಭಾರತ-ವೆಸ್ಟ್ ಇಂಡೀಸ್ ಲಿಮಿಟೆಡ್ ಓವರ್‌ಗಳ ಸರಣಿ

1 ನೇ ODI - 6 ಫೆಬ್ರವರಿ 2022 (ಅಹಮದಾಬಾದ್)
2 ನೇ ODI - 9 ಫೆಬ್ರವರಿ 2022 (ಅಹಮದಾಬಾದ್)
3ನೇ ODI - 11 ಫೆಬ್ರವರಿ 2022 (ಅಹಮದಾಬಾದ್)

1 ನೇ T20 - 16 ಫೆಬ್ರವರಿ 2022 (ಕೋಲ್ಕತ್ತಾ)
2 ನೇ T20 - 18 ಫೆಬ್ರವರಿ 2022 (ಕೋಲ್ಕತ್ತಾ)
3 ನೇ T20 - 20 ಫೆಬ್ರವರಿ 2022 (ಕೋಲ್ಕತ್ತಾ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News