5 ತಿಂಗಳ ಬಳಿಕ Team Indiaಗೆ ಈ ಆಲ್’ರೌಂಡರ್ ಎಂಟ್ರಿ: ವಿಂಡೀಸ್ ಸರಣಿಗೂ ಮುನ್ನ ಧೋನಿ ಶಿಷ್ಯನ ಕಾರುಬಾರು ಶುರು

Team India News: ಆಗಸ್ಟ್ 3 ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಭಾರತ ತಂಡದ ಆಡಳಿತವು ಈ ಅಪಾಯಕಾರಿ ಆಟಗಾರನಿಗೆ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡಿದರೆ, ತನ್ನ ಕಿಲ್ಲರ್ ಆಟದಿಂದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿನ ಸುಳಿಗೆ ಸಿಲುಕಿಸಬಹುದು.

Written by - Bhavishya Shetty | Last Updated : Jul 5, 2023, 08:17 AM IST
    • ಆಗಸ್ಟ್ 3 ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿ
    • ತನ್ನ ಕಿಲ್ಲರ್ ಆಟದಿಂದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿನ ಸುಳಿಗೆ ಸಿಲುಕಿಸಬಹುದು.
    • ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌’ನಲ್ಲಿ ಪರಿಣತಿ ಹೊಂದಿರುವ ವಾಷಿಂಗ್ಟನ್ ಸುಂದರ್
5 ತಿಂಗಳ ಬಳಿಕ Team Indiaಗೆ ಈ ಆಲ್’ರೌಂಡರ್ ಎಂಟ್ರಿ: ವಿಂಡೀಸ್ ಸರಣಿಗೂ ಮುನ್ನ ಧೋನಿ ಶಿಷ್ಯನ ಕಾರುಬಾರು ಶುರು title=
Washington Sundar

Team India News: 5 ತಿಂಗಳ ಬಳಿಕ ಟೀಂ ಇಂಡಿಯಾಗೆ ಮ್ಯಾಚ್ ವಿನ್ನರ್ ಆಟಗಾರನೊಬ್ಬ ದಿಢೀರ್ ಎಂಟ್ರಿ ಪಡೆಯಲಿದ್ದಾನೆ. ಈ ಕಾರಣದಿಂದ ವೆಸ್ಟ್ ಇಂಡೀಸ್ ತಂಡದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಈ ಭಯಾನಕ ಆಟಗಾರ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಗಾಗಿ ಟೀಂ ಇಂಡಿಯಾದಲ್ಲಿ ಪುನರಾಗಮನ ಮಾಡಲು ಸಿದ್ಧರಾಗಿದ್ದಾರೆ.

ಆಗಸ್ಟ್ 3 ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಭಾರತ ತಂಡದ ಆಡಳಿತವು ಈ ಅಪಾಯಕಾರಿ ಆಟಗಾರನಿಗೆ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡಿದರೆ, ತನ್ನ ಕಿಲ್ಲರ್ ಆಟದಿಂದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿನ ಸುಳಿಗೆ ಸಿಲುಕಿಸಬಹುದು.

ಇದನ್ನೂ ಓದಿ: Men's Emerging Asia Cup 2023: ಟೀಮ್ ಇಂಡಿಯಾದ ನಾಯಕನಾಗಿ ಯಶ್ ದುಲ್ ನೇಮಕ 

ಭಾರತ ಕ್ರಿಕೆಟ್ ತಂಡದ ಈ ಆಟಗಾರನಿಗೆ ಇಡೀ ಪಂದ್ಯವನ್ನು ಏಕಾಂಗಿಯಾಗಿ ಭಾರತದ ಪರ ತಿರುಗಿಸುವ ಶಕ್ತಿ ಇದೆ. ಈ ಮ್ಯಾಚ್ ವಿನ್ನರ್ ಬೇರೆ ಯಾರೂ ಅಲ್ಲ, ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌’ನಲ್ಲಿ ಪರಿಣತಿ ಹೊಂದಿರುವ ವಾಷಿಂಗ್ಟನ್ ಸುಂದರ್. ವಾಷಿಂಗ್ಟನ್ ಸುಂದರ್ ಫೆಬ್ರವರಿ 2023 ರಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು, ನಂತರ ಗಾಯದ ಕಾರಣ ಟೀಮ್ ಇಂಡಿಯಾದಿಂದ ಹೊರಗುಳಿಯಬೇಕಾಯಿತು.

ವೆಸ್ಟ್ ಇಂಡೀಸ್ ನಲ್ಲಿ ಭಯದ ವಾತಾವರಣ!

ಬುಧವಾರ ದಕ್ಷಿಣ ವಲಯ ತಂಡವು ಉತ್ತರ ವಲಯದ ವಿರುದ್ಧ ದುಲೀಪ್ ಟ್ರೋಫಿ ಸೆಮಿಫೈನಲ್‌ ನಲ್ಲಿ ಆಡಲಿರುವಾಗ, ಐದು ತಿಂಗಳ ನಂತರ ಪುನರಾಗಮನ ಮಾಡುತ್ತಿರುವ ವಾಷಿಂಗ್ಟನ್ ಸುಂದರ್ ಅವರ ಫಿಟ್‌ನೆಸ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಕ್ವಾರ್ಟರ್ ಫೈನಲ್‌ ನಲ್ಲಿ ಉತ್ತರ, ಈಶಾನ್ಯ ವಲಯ ತಂಡವನ್ನು 511 ರನ್‌ಗಳಿಂದ ಸೋಲಿಸಿತು. ವಾಷಿಂಗ್ಟನ್ ಒಳಗೊಂಡಿರುವ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಉತ್ಸುಕರಾಗಿರುವ ಕೆಲವು ಪ್ರಸ್ತುತ ಆಟಗಾರರು ಮತ್ತು ಕೆಲವು ಭವಿಷ್ಯದ ಆಟಗಾರರಿಗೆ ಈ ಪಂದ್ಯವು ಅತ್ಯಂತ ಮಹತ್ವದ್ದಾಗಿದೆ.

ತಮಿಳುನಾಡಿನ 23 ವರ್ಷದ ಆಲ್‌ರೌಂಡರ್ ಕಳೆದ ಆರು ವರ್ಷಗಳಲ್ಲಿ ಹಲವಾರು ಗಾಯಗಳು ಮತ್ತು ಫಿಟ್‌ನೆಸ್ ಸಮಸ್ಯೆಗಳನ್ನು ಎದುರಿಸಿದ್ದಾರೆ, ಈ ಕಾರಣದಿಂದಾಗಿ ಅವರು ಕೇವಲ 55 ಪಂದ್ಯಗಳನ್ನು ಆಡಿದ್ದಾರೆ. ಟೀಂ ಇಂಡಿಯಾಕ್ಕೆ ಈ ಆಟಗಾರ ವಾಪಸಾದ ಸುದ್ದಿ ಕೇಳಿ ವೆಸ್ಟ್ ಇಂಡೀಸ್ ತಂಡದಲ್ಲೂ ಭಯದ ವಾತಾವರಣ ಮೂಡಿದೆ.

ವಾಷಿಂಗ್ಟನ್ ಸುಂದರ್ ಐಪಿಎಲ್‌ ಸಂದರ್ಭದಲ್ಲಿ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದರು, ಬಳಿಕ ತಮಿಳುನಾಡು ಪ್ರೀಮಿಯರ್ ಲೀಗ್‌ ನಲ್ಲಿ ಪುನರಾಗಮನ ಮಾಡಿದರು. ಇದೀಗ ಇನಿಂಗ್ಸ್‌ ನಲ್ಲಿ 25 ಓವರ್‌ ಗಳವರೆಗೆ ಬೌಲಿಂಗ್ ಮಾಡಿ, ಇಡೀ ದಿನ ಬ್ಯಾಟಿಂಗ್ ಮಾಡಲು ಅವರಿಗೆ ಸಾಧ್ಯವಾಗುತ್ತದೆ. ಇದರಿಂದ ರಾಷ್ಟ್ರೀಯ ತಂಡಕ್ಕೆ ಮರಳುವ ಅವರ ಅರ್ಹತೆಯನ್ನು ಸುಲಭವಾಗಿ ಖಚಿತಪಡಿಸಬಹುದು.

ಇದನ್ನೂ ಓದಿ: M S Dhoni : ʼಕೂಲ್ ಕ್ಯಾಪ್ಟನ್ʼ ಧೋನಿ - ಸಾಕ್ಷಿಗೆ 13ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ

ಇನ್ನೊಂದೆಡೆ ಭಾರತ ಇನ್ನೂ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ಆಫ್-ಸ್ಪಿನ್ನರ್‌ ಗಾಗಿ ಹುಡುಕುತ್ತಿದೆ. ಈ ಸ್ಥಾನವನ್ನು ವಾಷಿಂಗ್ಟನ್ ತುಂಬುವಂತಿದೆ. ಮೂರು ರಾಷ್ಟ್ರೀಯ ಆಯ್ಕೆಗಾರರು ಪ್ರಸ್ತುತ ಎರಡು ಸೆಮಿಫೈನಲ್‌ ಗಳಿಗಾಗಿ ಬೆಂಗಳೂರಿನಲ್ಲಿದ್ದಾರೆ. ಅವರ ದೃಷ್ಟಿ ಖಂಡಿತವಾಗಿಯೂ ವಾಷಿಂಗ್ಟನ್‌ನ ಪ್ರದರ್ಶನದ ಮೇಲೆ ಇರುತ್ತದೆ. ಇವರಲ್ಲದೆ ಐಪಿಎಲ್ ನಿಂದ ಹೊರ ಹೊಮ್ಮಿರುವ ಸಾಯಿ ಸುದರ್ಶನ್ ಕೂಡ ರೇಸ್ ನಲ್ಲಿದ್ದಾರೆ. ಉತ್ತರ ವಲಯ ತಂಡವು ಧ್ರುವ ಶೋರೆ ಮತ್ತು ಜಯಂತ್ ಯಾದವ್ ಅವರಂತಹ ಅನುಭವಿ ಆಟಗಾರರನ್ನು ಹೊಂದಿದ್ದು, ಪಂಜಾಬ್‌ ನ ಪ್ರಭಾಸಿಮ್ರಾನ್ ಸಿಂಗ್ ಮತ್ತು ದೆಹಲಿಯ ಹರ್ಷಿತ್ ರಾಣಾ ಕೂಡ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News